ಆತೂರು ನೀರಾಜೆ ನೂರುಲ್ ಹುದಾ ಮದ್ರಸದಲ್ಲಿ ಮಾದಕ ವ್ಯಸನದ ವಿರುದ್ಧ ಕ್ಯಾಂಪೈನ್ ಕಾರ್ಯಕ್ರಮ

0

ರಾಮಕುಂಜ: ಎಸ್‌ಕೆಐಎಂವಿ ಬೋರ್ಡ್ ನಿರ್ದೇಶನ ಪ್ರಕಾರ ಮೇ 18 ರಂದು ಬೆಳಗ್ಗೆ 7:30ಕ್ಕೆ ಏಕ ಕಾಲದಲ್ಲಿ 11 ಸಾವಿರ ಮದರಸಗಳಲ್ಲಿ ಸುಮಾರು 12 ಲಕ್ಷ ವಿದ್ಯಾರ್ಥಿಗಳು ನಡೆಸುವ ಮಾದಕ ವ್ಯಸನ ವಿರುದ್ಧ ಅಭಿಯಾನದ ಪ್ರಯುಕ್ತ ನೀರಾಜೆ ನೂರುಲ್ ಹುದಾ ಮದ್ರಸದಲ್ಲಿ ಎಸ್‌ಕೆಎಸ್‌ಬಿವಿ ವಿದ್ಯಾರ್ಥಿಗಳು ಹಾಗೂ ಮದ್ರಸ ವಿದ್ಯಾರ್ಥಿಗಳಿಂದ ಮಾದಕ ವ್ಯಸನದ ವಿರುದ್ಧ ಅಭಿಯಾನ ಕಾರ್ಯಕ್ರಮ ಹಾಗೂ ಪೋಸ್ಟರ್ ಪ್ರದರ್ಶನ ಕಾರ್ಯಕ್ರಮ ನಡೆಯಿತು.


ಎನ್‌ಎಚ್‌ಎಂ ಆಡಳಿತ ಸಮಿತಿ ಅಧ್ಯಕ್ಷ ಎನ್. ಸಿದ್ದಿಕ್‌ರವರ ಅಧ್ಯಕ್ಷತೆಯಲ್ಲಿ ಸ್ಥಳೀಯ ಸದರ್ ಉಸ್ತಾದರಾದ ಉಸ್ತಾದ್ ಶೌಕತ್ ಅಲಿ ಅಸ್ಲಮಿಯವರ ದುಆ ದೊಂದಿಗೆ ಕಾರ್ಯಕ್ರಮ ನಡೆಯಿತು. ಮುಅಲ್ಲಿಮರಾದ ಲತೀಫ್ ಫೈಝಿ ಅಶಂಶ ಪ್ರಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಸಮಿತಿ ಕಾರ್ಯದರ್ಶಿ ಫುತ್ತುಕುಂಞಿ, ಸದಸ್ಯರಾದ ಸಿದ್ದೀಕ್ ಕೊಯಿಲ, ಯಂಗ್‌ಮೆನ್ಸ್ ಕಾರ್ಯದರ್ಶಿ ಸಜ್ಜಾಹ್ ಹಾಗೂ ಮದ್ರಸ ವಿದ್ಯಾರ್ಥಿಗಳು ಹಾಜರಿದ್ದರು. ಉಸ್ತಾದ್ ಶೌಕತ್ ಅಲಿ ಅಸ್ಲಮಿ ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು.

LEAVE A REPLY

Please enter your comment!
Please enter your name here