ಕಡಬ: ವರ್ಲ್ಡ್ ಸ್ಕಿಲ್ ಕೌನ್ಸಿಲ್ನಿಂದ ಮಾನ್ಯತೆ ಪಡೆದಿರುವ, ಭಾರತ ಸರಕಾರದಿಂದ ಪ್ರವರ್ತಿತ ರಾಷ್ಟ್ರೀಯ ಅಭಿವೃದ್ಧಿ ಏಜೆನ್ಸಿ ಭಾರತ್ ಸೇವಕ್ ಸಮಾಜದ ಅಂಗಿಕೃತ ಸಂಸ್ಥೆಯಾದ ಕಡಬದ ಮಹಾಗಣಪತಿ ಬಿಲ್ಡಿಂಗ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ಜ್ಞಾನಸುಧಾ ಮೊಂಟೆಸ್ಸರಿ ಶಿಕ್ಷಣ ಸಂಸ್ಥೆಯಿಂದ 2024-2025ನೇ ಸಾಲಿನ ಡಿ.ಎಂ.ಎಡ್ ಶಿಕ್ಷಕಿಯರ ತರಬೇತಿ ಪರೀಕ್ಷೆಗೆ ಹಾಜರಾದ ಎಲ್ಲಾ 13 ವಿದ್ಯಾರ್ಥಿನಿಯರು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗುವುದರೊಂದಿಗೆ ಸಂಸ್ಥೆಗೆ ಶೇ. 100 ತೆರ್ಗಡೆ ಫಲಿತಾಂಶ ಲಭಿಸಿದೆ.
ವಿದ್ಯಾರ್ಥಿನಿಯರಾದ ಅವುಶ(1125), ಅನುಷಾ(1121), ತೌಶಿರ ಕೆ., (1117), ಪ್ರೇಮ (1114), ಝೀನತ್ ಪಿ.(1086), ಮಹಾದೇವಿ (1051), ಕೃಷ್ಣಾಜ್ಯೋತಿ (1050), ದೀಪಿಕಾ (1047), ಶ್ರೀಲತಾ ಕೆ (1028), ಫಾತಿಮತ್ ಝೊಹರ(1022), ಮೇಘನಾ ಬಿ.ಜಿ(1015), ಸವಿತಾ(997), ಭವ್ಯಶ್ರೀ ಪಿ.ಎಸ್(992) ಅವರು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. 2025-2026 ನೇ ಸಾಲಿನ ದಾಖಲಾತಿ ಆರಂಭಗೊAಡಿದ್ದು ಆಸಕ್ತರು ಸಂಸ್ಥೆಯ ದೂರವಾಣಿ ಸಂಖ್ಯೆಯನ್ನು 8150954435 ಸಂಪರ್ಕಿಸಬಹುದೆAದು ಸಂಚಾಲಕರಾದ ಬಿ. ಎಲ್ ಜನಾರ್ದನ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.