ಪುತ್ತೂರು: ಕಲ್ಲಡ್ಕ- ಕಾಂಞಂಗಾಡ್ ರಸ್ತೆಯ ವಿಟ್ಲ-ಪಡಿಬಾಗಿಲು ರಸ್ತೆ ಮತ್ತು ಸುಬ್ರಹ್ಮಣ್ಯ ಮಂಜೇಶ್ವರ ರಸ್ತೆಯ ಅಳಿಕೆ- ಬೈರಿಕಟ್ಟೆಯ ಡಾಮರೀಕರಣ ಕಾಮಗಾರಿ ಪುರ್ಣಗೊಂಡಿದ್ದು ಕಾಮಗಾರಿಯನ್ನು ಶಾಸಕರಾದ ಅಶೋಕ್ ರೈ ವೀಕ್ಷಣೆ ಮಾಡಿದರು.
ಎರಡೂ ರಸ್ತೆಯನ್ನು ಸುಮಾರು 10 ಕೋಟಿ ರೂ ಅನುದಾನದಲ್ಲಿ ಅಭಿವೃದ್ದಿ ಮಾಡಲಾಗಿತ್ತು. ಈ ರಸ್ತೆ ಹಲವು ವರ್ಷಗಳಿಂದ ಹೊಂಡ ಗುಂಡಿಗಳಿಂದ ತುಂಬಿತ್ತು. ರಸ್ತೆಯು ಅಂತರರಾಜ್ಯ ಸಂಪರ್ಕ ಕಲ್ಪಿಸುವ ಕಾರಣ ವಾಹನಗಳ ದಟ್ಟನೆಯೂ ಹೆಚ್ಚಾಗಿತ್ತು. ಈ ರಸ್ತೆಯನ್ನು ಅಭಿವೃದ್ದಿ ಮಾಡುವಂತೆ ಅನೇಕ ಬಾರಿ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಪುತ್ತೂರು ಶಾಸಕರು ಈ ಎರಡೂ ರಸ್ತೆಯ ಅಭಿವೃದ್ದಿಗೆ ತಲಾ 5 ಕೋಟಿ ಮಂಜೂರು ಮಾಡಿದ್ದರು. ರಸ್ತೆಯ ಡಾಮರೀಕರಣ ಕಾಮಗಾರಿ ಪೂರ್ಣಗೊಂಡಿದ್ದು ಕಾಮಗಾರಿಯನ್ನು ಶಾಸಕರು ವೀಕ್ಷಣೆ ಮಾಡಿದರು. ರಸ್ತೆಯ ಬದಿಯಲ್ಲಿರುವ ಚರಂಡಿಯನ್ನು ದುರಸ್ಥಿ ಮಾಡುವುದು ಮತ್ತು ರಸ್ತೆಯ ಎರಡೂ ಬದಿಗಳಿಗೂ ಮಣ್ಣು ಹಾಕುವಂತೆ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು.
ಈ ಎರಡೂ ರಸ್ತೆ ಸಂಪೂರ್ಣ ಹದಗೆಟ್ಟಿತ್ತು. ಕಳೆದ ಚುನಾವಣೆಯ ಸಂದರ್ಭದಲ್ಲೇ ನಾನು ಈ ರಸ್ತೆಯನ್ನು ಅಭಿವೃದ್ದಿ ಮಾಡುವುದಾಗಿ ಹೇಳಿದ್ದೆ. ಕೊಟ್ಟ ಮಾತಿನಂತೆ ಭರವಸೆಯನ್ನು ಈಡೇರಿಸಿದ್ದೇನೆ. ರಸ್ತೆ ಚೆನ್ನಾಗಿದೆ. ಮಳೆಗಾಲದಲ್ಲಿ ರಸ್ತೆಯ ಮೇಲೆ ನೀರು ಹರಿಯದಂತೆ ಕ್ರಮಕ್ಕೆ ಸೂಚನೆ ನೀಡಿದ್ದೇನೆ. ಅಂತರ ರಾಜ್ಯ ಸಂಪರ್ಕ ಕಲ್ಪಿಸುವ ರಸ್ತೆಯಾದ ಕಾರಣ ಇದರ ನಿರ್ವಹಣೆಯೂ ಚೆನ್ನಾಗಿರಬೇಕಾಗುತ್ತದೆ ವಾಹನ ದಟ್ಟನೆಯೂ ಅಧಿಕವಾಗಿದೆ.
ಅಶೋಕ್ ರೈ ಶಾಸಕರು, ಪುತ್ತೂರು