ಪುತ್ತೂರು: ನೆಲ್ಲಿಕಟ್ಟೆ ಅಮರ್ ಲೈಟಿಂಗ್ಸ್ ಹಾಗೂ ಅಕ್ಷಯ ಸೌಂಡ್ಸ್ ಮಾಲಕ ರವೀಂದ್ರ ನೆಲ್ಲಿಕಟ್ಟೆ (61ವ.) ರವರು ಅಸೌಖ್ಯದಿಂದ ಮೇ 20 ರಂದು ನಿಧನ ಹೊಂದಿದ್ದಾರೆ.
ರವೀಂದ್ರ ಅವರು ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಜನಾನುರಾಗಿದ್ದ ರವಿ ನೆಲ್ಲಿಕಟ್ಟೆರವರು ಪುತ್ತೂರು ತಾಲೂಕು ಧ್ವನಿ, ಬೆಳಕು, ಶಾಮಿಯಾನ ಸಂಘದ ಸದಸ್ಯರಾಗಿ ಸೇವೆ ನೀಡುತ್ತಿದ್ದರು. ಮೃತರು ಪತ್ನಿ ರೇವತಿ, ಪುತ್ರಿ ಅನ್ವಿಕಾರವರನ್ನು ಅಗಲಿದ್ದಾರೆ.