ಬೆಂಗಳೂರಿನ ಶ್ರೀ ಸೌಂದರ್ಯ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ದೇವರ ಮೂರ್ತಿ ಪ್ರತಿಷ್ಠೆ- ಮೇ.21 ಬ್ರಹ್ಮಕಲಶೋತ್ಸವ

0

ಪುತ್ತೂರು: ಬೆಂಗಳೂರಿನ ಸಿಡೇದಹಳ್ಳಿ, ಸೌಂದರ್ಯನಗರದಲ್ಲಿರುವ ಶ್ರೀ ಸೌಂದರ್ಯ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಉಡುಪಿ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಹಾಗೂ ವಿದ್ವಾನ್ | ಕೆ.ಆರ್.ಶಶಾಂಕ ಇನ್ನಂಜೆತ್ತಾಯ ನಾಲ್ಕೂರು, ಬೆಳ್ತಂಗಡಿ ಇವರ ವೈದಿಕತ್ವದಲ್ಲಿ ಮೇ.23ರ ವರೆಗೆ ನಡೆಯಲಿರುವ ಶ್ರೀ ದೇವರ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಮೂರನೇ ದಿನವಾದ ಮೇ.19ರಂದು ಶ್ರೀ ಸೌಂದರ್ಯ ವೆಂಕಟರಮಣ ಸ್ವಾಮಿಯ ವಿಗ್ರಹ  ಪ್ರತಿಷ್ಠಾಪನೆಗೊಂಡಿತು. 


ಬೆಳಗ್ಗೆ ಉಡುಪಿ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರ ಆಗಮನವಾಯಿತು. ಅವರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಕುಣಿತಭಜನೆ, ಚೆಂಡೆ, ವಾದ್ಯಘೋಷದೊಂದಿಗೆ ಮೆರವಣಿಗೆ ಮೂಲಕ‌ ಕ್ಷೇತ್ರಕ್ಕೆ ಕರೆತರಲಾಯಿತು.

ಈ ಸಂದರ್ಭದಲ್ಲಿ ಸೌಂದರ್ಯ ವೆಂಕಟರಮಣ ಸ್ವಾಮಿ ದೇವಸ್ಥಾನದ ಆಡಳಿತ ಧರ್ಮದರ್ಶಿ ಸೌಂದರ್ಯ ಮಂಜಪ್ಪ ಪಿ. ಮತ್ತು ಅವರ ಪತ್ನಿ ಸುನೀತಾ ಮಂಜಪ್ಪ ಹಾಗೂ ಮನೆಯವರು ಸ್ವಾಮೀಜಿಗಳಿಗೆ ಫಲಪುಷ್ಪ ನೀಡಿ‌ ಸ್ವಾಗತಿಸಿದರು‌. ಬಳಿಕ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿರವರ ದಿವ್ಯ ಉಪಸ್ಥಿತಿ ಹಾಗೂ ಮಾರ್ಗದರ್ಶನದಲ್ಲಿ ಶ್ರೀ  ಸೌಂದರ್ಯ ವೆಂಕಟರಮಣ ಸ್ವಾಮಿಯ ವಿಗ್ರಹ ಪ್ರತಿಷ್ಠೆ ನಡೆಯಿತು.

ಸ್ವಸ್ತಿ ಪುಣ್ಯಾಹವಾವನ, ದೇವೋತ್ಥಾಪನ, ಪ್ರತಿಷ್ಠಾಹೋಮ, ತತ್ವಹೋಮ, ತತ್ವಕಲಶಾಭಿಷೇಕ, ಅಷ್ಟಬಂಧ ಲೇಪನ ನಡೆಯಿತು. ಕ್ಷೇತ್ರದಲ್ಲಿ  ಮರಾಟಿ ಯುವ ವೇದಿಕೆ ಭಜನಾ ತಂಡ ಪುತ್ತೂರು ಇವರಿಂದ ಕುಣಿತ ಭಜನೆ ಹಾಗೂ ಅರ್ಕ ಶ್ರೀ ಮಹಾದೇವಿ ಭಜನಾ ತಂಡದವರಿಂದ ಭಜನೆ ನಡೆಯಿತು‌.  ಈ ಸಂದರ್ಭದಲ್ಲಿ ನೂರಾರು ಭಕ್ತಾಧಿಗಳು ಉಪಸ್ಥಿತರಿದ್ದರು. ಮದ್ಯಾಹ್ನ ಮಹಾಪೂಜೆಯ ಬಳಿಕ ಅನ್ನಸಂತರ್ಪಣೆ ನಡೆಯಿತು‌.ಸಾಯಂಕಾಲ ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ವೈವಿಧ್ಯ ನಡೆಯಿತು. 

LEAVE A REPLY

Please enter your comment!
Please enter your name here