ಪುತ್ತೂರು: ಪುತ್ತೂರಿನ ಕೋರ್ಟ್ ರಸ್ತೆಯ ಫಾರ್ಚೂನ್ ಮಹಲ್ ನಲ್ಲಿ ವ್ಯವಹಾರ ನಡೆಸುತ್ತಿರುವ ಟೋಪ್ಕೋ ಝಂಝಂ ಜ್ಯುವೆಲ್ಲರಿಯು ನವೀಕೃತ ಮಳಿಗೆಯ ಉದ್ಘಾಟನಾ ಸಮಾರಂಭ ಹಾಗೂ ಹತ್ತನೇ ವರ್ಷಾಚರಣೆ ಪ್ರಯುಕ್ತ ಗ್ರಾಹಕರಿಗಾಗಿ ಆಯೋಜಿಸಿದ್ದ ಅದೃಷ್ಟ ಕೂಪನ್ ಯೋಜನೆಯ ಬಂಪರ್ ಡ್ರಾ ಮೇ.19ರಂದು ಸಂಸ್ಥೆಯಲ್ಲಿ ನಡೆಯಿತು.
ಅಬ್ದುಲ್ಲಾ ಸಾಮೆತ್ತಡ್ಕರವರು ಬಂಪರ್ ಬಹುಮಾನ ರೆಫ್ರಿಜರೇಟರ್ ವಿಜೇತರಾದರು.

ಈ ಸಂದರ್ಭದಲ್ಲಿ ಬಪ್ಪಳಿಗೆ ಮಸೀದಿ ಅಧ್ಯಕ್ಷರಾದ ದಾವೂದ ಡಿ.ಎ., ಟೋಪ್ಕೋ ಸಮೂಹ ಸಂಸ್ಥೆಗಳ ಪಾಲುದಾರರಾದ ಮುಹಮ್ಮದ್ ಟಿ.ಕೆ., ಸಿದ್ದೀಕ್ ಬೀಟಿಗೆ, ಪುತ್ತೂರು ಶಾಖಾ ವ್ಯವಸ್ಥಾಪಕ ಅನಸ್ ಟಿ.ಕೆ., ಸಿಬ್ಬಂದಿ ಅಝೀಝ್ ಕೆಮ್ಮಾಯಿ ಸೇರಿದಂತೆ ಗ್ರಾಹಕರಿ ಉಪಸ್ಥಿತರಿದ್ದರು.