
ಪುತ್ತೂರು: ಪೆರ್ನಾಜೆಯ ಆನೆಗುಂಡಿ ಪರಿಸರದಲ್ಲಿ ಮತ್ತೆ ಕಾಡಾನೆಗಳು ಮೇ.19ರಂದು ಪ್ರತ್ಯಕ್ಷವಾಗಿದೆ.ಪುತ್ತೂರು ರಾಜ್ಯ ಹೆದ್ದಾರಿಯ ಪೆರ್ನಾಜೆ ಬದಿಯಲ್ಲಿ ರಾತ್ರಿ ಸುಮಾರು 9.30ಕ್ಕೆ 2 ಕಾಡಾನೆಗಳು ಕಾಣಿಸಿಕೊಂಡಿದ್ದು, ಆನೆಗಳು ಸಂಚರಿಸುವ ದೃಶ್ಯ ಮನೆಯೊಂದರ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಈ ಹಿಂದೆ ಅನೇಕ ವೇಳೆ ಹೆದ್ದಾರಿ ಬದಿಯಲ್ಲಿ ಕಾಡಾನೆಗಳು ಕಾಣಿಸಿಕೊಂಡಿದೆ.ಪೆರ್ನಾಜೆ ಪರಿಸರದಲ್ಲಿ ಪದೇ ಪದೇ ಕಾಣಿಸಿಕೊಳ್ಳುತ್ತಿರುವ ಕಾಡಾನೆಗಳಿಂದ ಸ್ಥಳೀಯರು ಭಯಬೀತರಾಗಿದ್ದಾರೆ. ಇನ್ನಷ್ಟು ದೊಡ್ಡ ಅನಾಹುತ ಆಗುವ ಮೊದಲೇ ಶಾಸಕರು ಅರಣ್ಯ ಇಲಾಖೆ ಸರಕಾರ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.