ಪುತ್ತೂರು: ಕಳೆದೆರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಗಾಳಿ ಮಳೆಗೆ ಅರಿಯಡ್ಕ ಗ್ರಾಮದ ಕಾವು ಬೊಮ್ಮಡ್ಕ ಎಂಬಲ್ಲಿ ವಾಸದ ಮನೆಯೊಂದು ಕುಸಿದು ಬಿದ್ದ ಘಟನೆ ವರದಿಯಾಗಿದೆ.

ಲಲಿತಾ ಎಂಬವರ ವಾಸದ ಮನೆಯ ಮೇಲ್ಛಾವಣಿ ಮೇ.20ರ ರಾತ್ರಿ ಸಂಪೂರ್ಣ ಕುಸಿದು ಬಿದ್ದಿದೆ. ಮೇಲ್ಛಾವಣಿ ಕುಸಿದು ಬಿದ್ದಿದ್ದರಿಂದ ಹಂಚುಗಳು ಸಂಪೂರ್ಣ ಹುಡಿಯಾಗಿದ್ದು ಪಕ್ಕಾಸುಗಳು ತುಂಡಾಗಿವೆ. ಇದರಿಂದ ಸುಮಾರು 2 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ತಿಳಿದು ಬಂದಿದೆ. ಇದೀಗ ಲಲಿತಾರವರಿಗೆ ವಾಸಕ್ಕೆ ಮನೆಯೇ ಇಲ್ಲದಂತಾಗಿದೆ. ಸ್ಥಳಕ್ಕೆ ಅರಿಯಡ್ಕ ಗ್ರಾಪಂ ಸದಸ್ಯ ಮೋನಪ್ಪ ಪೂಹಾರಿ ಕೆರೆಮಾರು, ಕಾರ್ಯದರ್ಶಿ ವಿದ್ಯಾಧರ್, ಸಿಬ್ಬಂದಿ ಯೋಗೀಶ್‌ರವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.