





ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎರಡು ತಡೆಗೋಡೆ ಕಾಮಗಾರಿಗೆ 2.50 ಕೋಟಿ ರೂ ಮಂಜೂರಾತಿಗೆ ಸಣ್ಣ ನೀರಾವರಿ ಸಚಿವರಾದ ಬೋಸರಾಜು ಅವರು ಶಿಫಾರಸ್ಸು ಮಾಡಿದ್ದಾರೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ತಿಳಿಸಿದ್ದಾರೆ.


ಪಾಣಾಜೆ ಗ್ರಾಮದ ನೆಲ್ಲೆತ್ತಿಮಾರು ಎಂಬಲ್ಲಿ ತಡೆಗೋಡೆ ಕಾಮಗಾರಿಗೆ 50 ಲಕ್ಷ ರೂ ಹಾಗೂ ಒಳಮೊಗ್ರು ಗ್ರಾಮದ ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜು ಬಳಿ ತಡೆ ಗೋಡೆ ಕಾಮಗಾರಿ ನಿರ್ಮಾಣಕ್ಕೆ ಸಣ್ಣ ನೀರಾವರಿ ಇಲಾಖೆಯಿಂದ 2 ಕೋಟಿ ರೂ ಅನುದಾನವನ್ನು ಒದಗಿಸುವಂತೆ ಶಾಸಕರಾದ ಅಶೋಕ್ ರೈ ಅವರು ಸಚಿವರಲ್ಲಿ ಮನವಿ ಮಾಡಿದ್ದು ಮನವಿಯನ್ನು ಪುರಸ್ಕರಿಸಿದ ಸಚಿವರು ಎರಡೂ ತಡೆಗೋಡೆ ಕಾಮಗಾರಿಗೆ ಶಿಫಾರಸ್ಸು ಮಾಡಿದ್ದಾರೆ.





ಬುಧವಾರ(ಮೇ.21 )ಶಾಸಕ ಅಶೋಕ್ ರೈ ಸಚಿವರನ್ನು ಭೇಟಿಯಾಗಿದ್ದರು. ನಿಯೋಗದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ ಎಸ್ ಮಹಮ್ಮದ್, ಕುಂಬ್ರ ಮರ್ಕಝ್ ಮಹಿಳಾ ಕಾಲೇಜು ಅಧ್ಯಕ್ಷ ಅಬ್ದುಲ್ ರಹಿಮಾನ್ ಅರಿಯಡ್ಕ, ಉಪಾಧ್ಯಕ್ಷರಾದ ಅಬ್ದುಲ್ ರಶೀಧ್ ಝೈನಿ, ಕಾರ್ಯದರ್ಶಿ ರಶೀದ್ ಸಂಪ್ಯ ಸದಸ್ಯರಾದ ಯೂಸುಫ್ ಹಾಜಿ ಕೈಕಾರ ಉಪಸ್ಥಿತರಿದ್ದರು.







