ಪುತ್ತೂರು: ಉಪ್ಪಿನಂಗಡಿ ಬುರ್ಜಿಮಾನ್ ಕಾಂಪ್ಲೆಕ್ಸ್ ನಲ್ಲಿ ಮಹಿಳೆಯರ ಸಿದ್ಧ ಉಡುಪುಗಳ ಮಳಿಗೆ ಶೋಭಿಕಾ ವುಮೆನ್ ಬೊಟಿಕ್ ಮೇ.24 ರಂದು ಶುಭಾರಂಭಗೊಳ್ಳಲಿದೆ.
ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಲಲಿತಾರವರು ಮಳಿಗೆಯನ್ನು ಉದ್ಘಾಟಿಸಲಿದ್ದಾರೆ. ಉಪ್ಪಿನಂಗಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ಟಿವಿ ನಿರೂಪಕಿ ಹೇಮಾ ಜಯರಾಮ್ ರೈ, ಉಪ್ಪಿನಂಗಡಿ ಮೆಡಿಕೇರ್ ಕ್ಲಿನಿಕ್ ನ ಡಾ.ನಾಝೀರ, ಉಪ್ಪಿನಂಗಡಿ ಗ್ರಾಮ ಪಂಚಾಯತ್ ಸದಸ್ಯೆ ಬಿ ನೆಬಿಸ, ಬೆಳ್ತಂಗಡಿ ಕೆಡಿಪಿ ಸದಸ್ಯೆ ಹಾಗೂ ಗ್ರಾಮ ಪಂಚಾಯತ್ ಸದಸ್ಯೆ ಸುಮತಿ ಶೆಟ್ಟಿ, ಪುತ್ತೂರು ವಿಧಾನಸಭೆಯ ಮಹಿಳಾ ಭಾರತ ಚಳುವಳಿಯ ಜಂಟಿ ಕಾರ್ಯದರ್ಶಿ ಫಾತಿಮತ್ ಝೊಹರಾ ನಿರ್ಮಾ, ಉಪ್ಪಿನಂಗಡಿ ಹಸನ್ ಟವರ್ ನೋಹಾ ಬ್ಯೂಟಿ ಪಾರ್ಲರ್ ಮಾಲಕಿ ಸುಚಿತಾ ಸಿಲ್ವಿಯಾ ಡಿ’ಸೋಜರವರು ಭಾಗವಹಿಸಲಿದ್ದಾರೆ. ದುಬೈ ಕ್ರೆಡೆನ್ಸ್ ಹೈಸ್ಕೂಲ್ ನ ಎಂ.ಜಿ ರೀಮ್ ಕಾರ್ಯಕ್ರಮ ನಿರ್ವಹಿಸಲಿದ್ದಾರೆ ಎಂದು ಶೋಭಿಕಾ ವುಮೆನ್ ಬೊಟಿಕ್ ಮಳಿಗೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.