ಪುತ್ತೂರು: ಅನ್ಯಧರ್ಮದ ಮಹಿಳೆಯನ್ನು ಕೋಣೆಯಲ್ಲಿ ಕೂಡಿ ಹಾಕಿದ್ದಾರೆಂದು ಆರೋಪಿಸಿ ಹಿಂದು ಸಂಘಟನೆಗಳು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ತೆರಳಿ ಮಹಿಳೆಯನ್ನು ಠಾಣೆಗೆ ಕರೆದೊಯ್ದ ಘಟನೆ ಮೇ.21ರ ರಾತ್ರಿ ಪರ್ಲಡ್ಕದಲ್ಲಿ ನಡೆದಿದೆ.
ಕಡಬ ತಾಲೂಕಿನ ಮಹಿಳೆಯೊಬ್ಬರು ಪರ್ಲಡ್ಕದ ಕೊಠಡಿಯಲ್ಲಿ ಇರುವುದು ಹಿಂದು ಸಂಘಟನೆಗಳಿಗೆ ತಿಳಿಯುತ್ತಿದ್ದಂತೆ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಪೊಲೀಸರು ಅಲ್ಲಿ ತೆರಳಿದಾಗ ಮಹಿಳೆ ಕೊಠಡಿಯಲ್ಲಿದ್ದು, ಕೊಠಡಿಗೆ ಹೊರಗಿನಿಂದ ಬೀಗ ಹಾಕಲಾಗಿತ್ತು. ಪೊಲೀಸರು ಮಹಿಳೆಯನ್ನು ರಕ್ಷಿಸಿದ್ದಾರೆ.