ನಿಡ್ಪಳ್ಳಿ: ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಯೋಜನೆಯಡಿಯಲ್ಲಿ  ಪರಿವರ್ತನೆ ಹಾಗೂ ಪ್ರೇರಣಾ ಅಭಿಯಾನ

0

ನಿಡ್ಪಳ್ಳಿ: ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಯೋಜನೆ ಅಡಿಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಪರಿವರ್ತನೆ ಹಾಗೂ ಪ್ರೇರಣಾ ಅಭಿಯಾನ ಕಾರ್ಯಕ್ರಮ ನಿಡ್ಪಳ್ಳಿ ಶ್ರೀ ಶಾಂತದುರ್ಗಾ ಸಂಜೀವಿನಿ ಒಕ್ಕೂಟದ ಕಛೇರಿಯಲ್ಲಿ ನಿಡ್ಪಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವೆಂಕಟ್ರಮಣ ಬೋರ್ಕರ್ ರವರ ಅಧ್ಯಕ್ಷತೆಯಲ್ಲಿ ಮೇ.20 ರಂದು ನಡೆಯಿತು

ಪುತ್ತೂರು ಸಾಂತ್ವನ ಕೇಂದ್ರದ ಸಮಾಜ ಕಾರ್ಯಕರ್ತೆ ಬಿಂದು ಅಜಯ್ ಇವರು ಸಾಂತ್ವನ ಕೇಂದ್ರದ ಯೋಜನೆಗಳು ಹಾಗೂ ಮಹಿಳೆಯರ ಮುಟ್ಟಿನ ಕಪ್ ಬಳಕೆ ಬಗ್ಗೆ ಮಾಹಿತಿ ನೀಡಿದರು. ಕೆನರಾ ಬ್ಯಾಂಕ್ ಸಿ.ಎಫ್.ಎಲ್ ಗೀತಾ, ಡಿ ಪಿ.ಎಂ.ಜೆ.ಜೆ.ಬಿ.ವೈ, ಪಿ.ಎಂ.ಎಸ್.ವೈ ಹಾಗೂ ಎ.ಪಿ.ವೈ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಪ್ರಾಥಮಿಕ ಆರೋಗ್ಯ ಇಲಾಖೆಯ ಸಿ.ಎಚ್.ಒ.ಲಕ್ಷ್ಮಿ ಯವರು ಎನ್.ಸಿ.ಡಿ. ಖಾಯಿಲೆಗಳ ಬಗ್ಗೆ ಮಾಹಿತಿ ಹಾಗೂ ಎಚ್ಚರಿಕೆ ಕ್ರಮಗಳನ್ನು ತಿಳಿಸಿದರು. ಪ್ರಾಥಮಿಕ ಆರೋಗ್ಯ ಕೇಂದ್ರದ ಕಾರ್ಯಕರ್ತೆ ಎ.ವಿ. ಕುಸುಮಾವತಿ ಗಂಡಾಂತರಂಗ ಗರ್ಭಧಾರಣೆ ಬಗ್ಗೆ ಉದಾಹರಣೆ ಸಹಿತ ವಿವರಿಸಿ ಮಾಹಿತಿ ನೀಡಿದರು. ಒಕ್ಕೂಟದ ಸದಸ್ಯರು ಪೋಷಣೆಯುಕ್ತ ಆಹಾರಗಳನ್ನು ತಯಾರಿಸಿ ತಂದು ಪ್ರದರ್ಶಿಸಿದರು. ಸಂಘದ ಸದಸ್ಯರು ತಮ್ಮ ಹೆಸರು  ನೋಂದಾಯಿಸಲು ಸಂಘ ಮತ್ತು ಒಕ್ಕೂಟದಿಂದ ಬಡ್ಡಿ ರಹಿತ ಸಾಲ ನೀಡುವುದರ ಕುರಿತು ಮಾಹಿತಿ ನೀಡಲಾಯಿತು.

ಸಭೆಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂಧ್ಯಾಲಕ್ಷ್ಮೀ, ಒಕ್ಕೂಟದ ಪದಾಧಿಕಾರಿಗಳು, ಪಶು ಸಖಿ ತೇಜಸ್ವಿನಿ, ಬೆಟ್ಟಂಪಾಡಿ ವಿ.ಡಿ.ವಿ.ಕೆ ಅಧ್ಯಕ್ಷೆ ವನಿತಾ, ಸಂಘದ ಸದಸ್ಯರು, ಕಿಶೋರಿ ಸಂಘದ ಸದಸ್ಯರು, ಪಂಚಾಯತ್ ಸದಸ್ಯರು ಭಾಗವಹಿಸಿದ್ದರು. ಎಂ.ಬಿ.ಕೆ ಭವ್ಯಾ ಕಾರ್ಯಕ್ರಮ ನಿರೂಪಿಸಿದರು. 

LEAVE A REPLY

Please enter your comment!
Please enter your name here