ಬೆಟ್ಟಂಪಾಡಿ: ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರೋತ್ಸವಗಳ ಕಡೆಯ ಜಾತ್ರೆಯಾದ ʻಪತ್ತನಾಜೆ ಜಾತ್ರೆಯು ಮೇ .24 ರಂದು ನಡೆಯಲಿದೆ.
ಮೇ 23 ರಂದು ಬಲಿವಾಡು ಶೇಖರಣೆ ನಡೆಯಲಿದೆ. ಮೇ 24 ರಂದು ಬೆಳಿಗ್ಗೆ ನವಕ ಕಲಶಾಭಿಷೇಕ, ತುಲಾಭಾರ ಸೇವೆ ನಡೆದು ಮಹಾಪೂಜೆ, ಅನ್ನಸಂತರ್ಪಣೆ ಜರಗಲಿದೆ. ರಾತ್ರಿ ಭಜನಾ ಕಾರ್ಯಕ್ರಮ, ಮಹಾಪೂಜೆಯಾಗಿ ಶ್ರೀ ದೇವರ ಉತ್ಸವ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣದಲ್ಲಿ ಮಹಾಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಜಾತ್ರೋತ್ಸವ ಸಂದರ್ಭ ಸಂಕಲ್ಪ ಸಹಿತ ವಿಶೇಷ ಅನ್ನದಾನ ಸೇವೆ ನಡೆಯಲಿದೆ ಎಂದು ದೇವಳದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್ ತಿಳಿಸಿದ್ದಾರೆ.