ಸವಣೂರು: ಸವಣೂರು ಗ್ರಾಮದ ಪರಣೆ ಸಮೀಪದ ಅಡೀಲು ಎಂಬಲ್ಲಿ ಮೇ.22 ರಂದು ರಾತ್ರಿ ಬೋರ್ ವೆಲ್ ಲಾರಿಯೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ, ಸಂಭ್ಯಾವ್ಯ ಅಪಾಯದಿಂದ ಪಾರಾದ ಘಟನೆ ನಡೆದಿದೆ.
ಮೇ .22 ರಂದು ಸಂಜೆ ಪುಚ್ಚೆತ್ತೋಡಿ ಎಂಬಲ್ಲಿ ಬೋರ್ ವೆಲ್ ತೆಗೆಯಲು ಬಂದಿದ್ದ ಲಾರಿ, ಕೆಲಸ ಮುಗಿಸಿ ರಾತ್ರಿ ಸುಮಾರು 7.30 ಅಂದಾಜಿಗೆ ಪರಣೆ ಕಡೆಗೆ ತೆರಳುವ ವೇಳೆ, ಅಡೀಲು ಎಂಬಲ್ಲಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಕಂಬ ತುಂಡಾಗಿ ಲಾರಿಯ ಮೇಲೆ ಬಿದ್ದಿದೆ. ಲಾರಿಯಲ್ಲಿ ಇದ್ದ ಚಾಲಕ ಸೇರಿ 4 ಮಂದಿ ಅಪಾಯದಿಂದ ಪಾರಾಗಿದ್ದಾರೆ.

ರಾತ್ರಿ ಇಡೀ ವಿದ್ಯುತ್ ಸಂಪರ್ಕ ಇಲ್ಲದೇ ಮಂಜುನಾಥನಗರ ಫೀಡರ್ ವ್ಯಾಪ್ತಿಯ ಇನ್ನೂರಕ್ಕೂ ಹೆಚ್ಚುಮ ಮನೆಯವರು ತೊಂದರೆ ಅನುಭವಿಸಿದರು.
ಘಟನಾ ಸ್ಥಳಕ್ಕೆ ಸವಣೂರು ಮೆಸ್ಕಾಂ ಜೆ ಇ.ರಾಜೇಶ್ ಮತ್ತು ಸಿಬ್ಬಂದಿಗಳು ಭೇಟಿ ನೀಡಿದರು. ಬೋರ್ ವೆಲ್ ಲಾರಿಯವರೇ ಹೊಸದಾಗಿ ವಿದ್ಯುತ್ ಕಂಬವನ್ನು ಅಳವಡಿಸಿ, ದುರಸ್ತಿ ಕಾರ್ಯ ಮಾಡಿಕೊಟ್ಟಿದ್ದಾರೆ ಎಂದು ಜೆಇ ರಾಜೇಶ್ ತಿಳಿಸಿದ್ದಾರೆ.