ಜೂ.1 : ಪುತ್ತೂರಿನಲ್ಲಿ ಗೌಡರ ಯಾನೆ ಒಕ್ಕಲಿಗರ ಜಿಲ್ಲಾ ಮಾತೃ ಸಂಘದ ಸರ್ವ ಸದಸ್ಯರ ಪ್ರಥಮ ವಾರ್ಷಿಕ ಮಹಾ ಅಧಿವೇಶನ – ಪದಾಧಿಕಾರಿಗಳಿಗೆ ಅಭಿನಂದನಾ ಕಾರ್ಯಕ್ರಮ

0

ಪುತ್ತೂರು: 2024ರ ಅ.30ರಂದು ನೋಂದಾವಣೆಗೊಂಡು ಅಸ್ತಿತ್ವಕ್ಕೆ ಬಂದಿರುವ ಗೌಡರ ಯಾನೆ ಒಕ್ಕಲಿಗರ ಜಿಲ್ಲಾ ಮಾತೃ ಸಂಘದ ಸರ್ವ ಸದಸ್ಯರ ಪ್ರಥಮ ವಾರ್ಷಿಕ ಮಹಾ ಅಧಿವೇಶನವು ಜೂ.1ರಂದು ಬೆಳಿಗ್ಗೆ ಗಂಟೆ 10 ರಿಂದ ಪುತ್ತೂರು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳನ್ನು ಅಭಿನಂದಿಸಲಾಗುತ್ತದೆ ಎಂದು ಗೌಡರ ಯಾನೆ ಒಕ್ಕಲಿಗರ ಜಿಲ್ಲಾ ಮಾತೃ ಸಂಘದ ಅಧ್ಯಕ್ಷ ಲೋಕಯ್ಯ ಗೌಡ ಕೆ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.


ಸಂಘ ನೋಂದಾವಣೆಗೊಂಡು ಅಸ್ತಿತ್ವಕ್ಕೆ ಬಂದ ಒಂದು ವರ್ಷದ ಹೊತ್ತಿಗೆ ಸರ್ವ ಸದಸ್ಯರ ಮಹಾಅಧಿವೇಶನ ನಡೆಸಬೇಕೆಂದು ತೀರ್ಮಾನಿಸಿದಂತೆ ಈ ಕಾರ್ಯಕ್ರಮ ನಡೆಯಲಿದೆ. ಈ ಹಿಂದೆ ಸುಳ್ಯದಲ್ಲಿ ದೊಡ್ಡ ಸಭೆ ನಡೆಸುವುದೆಂದು ತೀರ್ಮಾನಿಸಿದ್ದೆವು. ಕಾರಣಾಂತರಗಳಿಂದ ಅದು ಮುಂದೂಡಲ್ಪಟ್ಟಿತ್ತು. ಈಗ ಪುತ್ತೂರಿನಲ್ಲಿ ದೊಡ್ಡ ಮಟ್ಟದ ಸಭೆ ನಡೆಸಲಿದ್ದೇವೆ. ಪ್ರಥಮ ಮಹಾಅಧಿವೇಶನವನ್ನು ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ. ರೇಣುಕಾಪ್ರಸಾದ ಕೆ.ವಿ ಅವರು ಉದ್ಘಾಟಿಸಲಿದ್ದಾರೆ. ಎಲ್ಲಾ ತಾಲೂಕು ಸಂಘದ ಅಧ್ಯಕ್ಷರು ಗೌರವ ಉಪಸ್ಥಿತಿಯಲ್ಲಿರುತ್ತಾರೆ. ಸಭೆಯಲ್ಲಿ ಸಂಘದ ಗೌರವ ಸಲಹೆಗಾರರು, ನಿರ್ದೇಶಕರು ಸಹಿತ ಒಟ್ಟು 103 ಮಂದಿ ಆಡಳಿತ ಮಂಡಳಿ ಸದಸ್ಯರನ್ನು ಸಮಾಜಕ್ಕೆ ಗುರುತಿಸುವ ನೆಲೆಯಲ್ಲಿ ಅವರನ್ನು ಅಭಿನಂದಿಸುವ ಕಾರ್ಯಕ್ರಮ ನಡೆಯಲಿದೆ ಎಂದವರು ಹೇಳಿದರು.


ಭವ್ಯ ಸಮಾಜ ನಿರ್ಮಾಣದ ಉದ್ದೇಶ:
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಂದಾಜು ಸುಮಾರು 3.5ಲಕ್ಷದಷ್ಟು ಇರುವ ಗೌಡ ಒಕ್ಕಲಿಗ ಸಮುದಾಯದ ಆಚಾರ ವಿಚಾರ ಜೀವನ ಪದ್ಧತಿಗಳನ್ನು ಅಭ್ಯಾಸಿಸಿ ಸಮಾಜದ ಸಂಘಟನೆಯನ್ನು ದೃಢಗೊಳಿಸಿ ಅನಾಥರಿಗೆ, ಅಶಕ್ತರಿಗೆ, ನೊಂದವರಿಗೆ, ಪರಿಹಾರ ನೀಡಿ ಸಮಾಜದ ಮುಖ್ಯ ವಾಹಿನಿಗೆ ತರುವುದು, ಸಮಾಜದ ಯುವಜನರನ್ನು ಒಟ್ಟುಗೂಡಿಸಿ ಸಾಮಾಜಿಕ, ಧಾರ್ಮಿಕ ಶೈಕ್ಷಣಿಕ ಹಾಗು ಬೌಧಿಕವಾಗಿ ಮುಂಚೂಣಿಗೆ ತರುವುದು. ವಿಶೇಷವಾಗಿ ವಿದ್ಯಾರ್ಥಿ ಮಟ್ಟದಲ್ಲಿ ಸಮಾಜದ ಆಚಾರ ವಿಚಾರಗಳನ್ನು ಸಂಪ್ರದಾಯಗಳನ್ನು ತಿಳಿಸಿ ಹೇಳುವುದರ ಜೊತೆಗೆ ವಿವಿಧ ಶಿಬಿರ, ವಿಚಾರ ಸಂಕೀರ್ಣ, ಮಾರ್ಗದರ್ಶನ ಶಿಬಿರಗಳನ್ನು, ಏರ್ಪಡಿಸಿ ವಿದ್ಯಾರ್ಥಿಗಳನ್ನು ಉತ್ತೇಜನಗೊಳಿಸಿ ಭವ್ಯ ಸಮಾಜ ನಿರ್ಮಾಣ ಮಾಡುವುದು ಸಂಘದ ಉದ್ದೇಶವಾಗಿದೆ ಎಂದು ಜಿಲ್ಲಾ ಸಂಘದ ಅಧ್ಯಕ್ಷ ಲೋಕಯ್ಯ ಗೌಡ ಹೇಳಿದರು.


ನಮಗೆ ಗೊಂದಲದವರು ಬೇಡ
ಜಿಲ್ಲಾ ಸಂಘದ ಎರಡು ಇದೆಯಾದರೂ ನಾವು ನಮ್ಮ ಸಂಘ ಪ್ರಥಮವಾಗಿ ಆರಂಭಗೊಂಡಿರುವುದು. ಹಾಗೆಂದು ಮತ್ತೆ ನಮಗೆ ತಿಳಿಸದೆ ಇನ್ನೊಂದು ಸಂಘ ರಚನೆ ಮಾಡಿದ್ದಾರೆ. ಆದರೆ ಎರಡು ಸಂಘದ ವಿಚಾರದಲ್ಲಿ ಅದು ಡಿ.ವಿಯವರು ಹೇಳಲಿ ಯಾರು ಬೇಕಾದರೂ ಹೇಳಲಿ. ಹೇಳುವುದರಲ್ಲಿ ಒಂದು ನ್ಯಾಯ ನೀತಿ ಬೇಕು. ಡಿ.ವಿಯವರು ಒಂದು ಮಾಡಿರುವುದು ನಿಜ. ಆದರೆ ಅದನ್ನು ಅವರ ಮನಸ್ಸಿನಲ್ಲಿ ನೀವು ಮಾಡಿದ್ದು ಸರಿಯಾ ಎಂದು ಕೇಳಬೇಕಾಗಿದೆ. ಸರಿ ಇಲ್ಲ ಎಂಬುದು ನಮ್ಮ ಭಾವನೆ. ಒಂದಾಗಬೇಕೆನ್ನುವವರು ಎರಡು ಆದದ್ದು ಯಾವಗ ಎಂದು ತಿಳಿಯಬೇಕು. ಅದನ್ನು ಎರಡು ಮಾಡಿದ್ದು ಯಾರು ಎಂಬುದನ್ನು ನಮ್ಮ ಡಿವಿಯವರು ತಿಳಿದುಕೊಂಡು ಅವರಿಗೆ ಬುದ್ದಿ ಹೇಳಬೇಕಾಗಿತ್ತು. 2019ರಲ್ಲಿ ಒಂದು ಸಂಘ ಅಸ್ತಿತ್ವಕ್ಕೆ ಬಂದ ಬಳಿಕ ಇನ್ನೊಂದು ಸಂಘ ಮಾಡುವುದು ಸರಿಯಾ ಎಂದು ನಮ್ಮ ಧುರೀಣರು ಪ್ರಶ್ನಿಸಬೇಕು. ಹಾಗೆಂದು ಡಿವಿಯವರು ಕರೆದಾಗ ನಾವು ಹೋಗಿ ಗೌರವ ಕೊಟ್ಟಿದ್ದೇವೆ. ರಾಜ್ಯಾಧ್ಯಕ್ಷರು, ಮುಖ್ಯಮಂತ್ರಿಯಾಗಿದ್ದ ಡಿ.ವಿಯವರು ಕರೆದಾಗ ಹೋಗಲಿಲ್ಲ ಎಂದಾಗ ಅವರ ಮಾತಿಗೆ ಬೆಲೆ ಕೊಡಲಿಲ್ಲ ಎಂದಾಗುತ್ತದೆ. ಅವರು ಬೈದರೂ ನಮ್ಮ ಲೀಡರೇ ಆಗಿದ್ದಾರೆ. ಇಲ್ಲಿ ಚರ್ಚೆ ಆಗಿ ಮತ್ತೆ ಮುಂದುವರಿದಾಗ ಸರಿ ಆಗಲಿಲ್ಲ. ಹಾಗಾಗಿ ನಮಗೆ ಗೊಂದಲದವರು ಬೇಡ ಎಂದು ಲೋಕಯ್ಯ ಗೌಡ ಅವರು ಹೇಳಿದರು.


ಇನ್ನೊಂದು ಸಂಘ ಅಸ್ತಿತ್ವಕ್ಕೆ ಕಾರಣಕರ್ತರು ಯಾರು ಗೊತ್ತಿಲ್ಲ:
2019ರಲ್ಲಿ ಲೋಕಯ್ಯ ಗೌಡ ಅವರ ನೇತೃತ್ವದಲ್ಲಿ ಜಿಲ್ಲಾ ಸಂಘ ಪ್ರಾರಂಭ ಆಗಿದೆ. 6 ತಾಲೂಕುಗಳ ಸಂಘದ ಅಧ್ಯಕ್ಷರು ಪದಾಧಿಕಾರಿಗಳನ್ನು ಸೇರಿಸಿಕೊಂಡು ಸಂಘ ಆಗಿತ್ತು. ಮಧ್ಯೆ ಕೊರೊನಾದಿಂದಾಗಿ ಸ್ಥಗಿತಗೊಂಡು. ಈ ಸಂದರ್ಭ ಬೈಲಾ ತಿದ್ದುಪಡಿ ವೇಳೆ ಚರ್ಚೆಗಳಾಯಿತು. ಈ ಮಧ್ಯೆ ದ.ಕ.ಜಿಲ್ಲೆಯ ಆರು ಸಂಘಗಳ ಗಮನಕ್ಕೆ ಇಲ್ಲದೆ ದಿಢೀರ್ ಆಗಿ ಒಂದು ಸಂಘ ನೋಂದಾವಣೆ ಆಗಿರುವ ಕುರಿತು ಪತ್ರಿಕಾಗೋಷ್ಟಿಯಲ್ಲಿ ಗೊತ್ತಾಯಿತು. ಅದಕ್ಕೆ ಕಾರಣಕರ್ತರು ಯಾರು ಎಂಬುದು ನಮಗೆ ಗೊತ್ತಿಲ್ಲ. ಆ ಬಳಿಕ ನಾವು ಆರು ತಾಲೂಕಿನ ಸಂಘದವರು ಸೇರಿ ಹಿಂದೆ ಮಾಡಿದ ಸಂಘವನ್ನು ನೋಂದಾವಣೆ ಮಾಡುವ ಕೆಲಸ ಮಾಡಿದ್ದೇವೆ. ಆಗ ನಮ್ಮ ಮುಖಂಡರು ಸೇರಿ ಎರಡು ಸಂಘ ಬೇಡ ಒಂದು ಸಂಘ ಮಾಡುವಂತೆ ಮಾತುಕತೆ ಆಯಿತು. ಆದರೆ ಆ ಮಾತುಕತೆಯಲ್ಲಿ ಕಂಡೀಷನ್‌ಗಳು ಎರಡು ಸಂಘಗಳಿಗೆ ಒಪ್ಪಿಗೆ ಇರಲಿಲ್ಲ. ಹಾಗಾಗಿ ಇವತ್ತು ಎರಡೂ ಸಂಘಗಳು ನೋಂದಾವಣೆ ಆಗಿದೆ. ನಾವು ನಮ್ಮ ಕೆಲಸ ಕಾರ್ಯ ಮುಂದುವರಿಸುತ್ತಿದ್ದೇವೆ ಎಂದು ಗೌಡರ ಯಾನೆ ಒಕ್ಕಲಿಗರ ಜಿಲ್ಲಾ ಮಾತೃ ಸಂಘದ ಕೋಶಾಧಿಕಾರಿ ಪದ್ಮಗೌಡ ಬೆಳ್ತಂಗಡಿ ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಗೌಡರ ಯಾನೆ ಒಕ್ಕಲಿಗರ ಜಿಲ್ಲಾ ಮಾತೃ ಸಂಘದ ಕೋಶಾಧಿಕಾರಿ ಹೆಚ್ ಪದ್ಮಗೌಡ ಬೆಳ್ತಂಗಡಿ, ಉಪಾಧ್ಯಕ್ಷ ರಾಮದಾಸ್ ಗೌಡ ಎಸ್, ಬೆಳ್ತಂಗಡಿ ಉಪಾಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಕಾರ್ಯದರ್ಶಿ ಕಿಶೋರ್ ಕುಮಾರ್ ನೆಲ್ಲಿಕಟ್ಟೆ, ಮಂಗಳೂರು ಕಾರ್ಯದರ್ಶಿ ಕೆ.ರಾಮಣ್ಣ ಗೌಡ, ಸಂಘದ ಸದಸ್ಯತನ ಅಭಿಯಾನದ ಪುತ್ತೂರು ತಾಲೂಕು ಸಂಚಾಲಕ ಮುರಳೀಧರ ಗೌಡ ಕೆಮ್ಮಾರ ಉಪಸ್ಥಿತರಿದ್ದರು.

10ಸಾವಿರ ಸದಸ್ಯತ್ವದ ಗುರಿ:
ಸಂಘದಲ್ಲಿ 10ಸಾವಿರ ಮಂದಿ ಸದಸ್ಯತ್ವ ಮಾಡುವ ಗುರಿಯನ್ನು ಹೊಂದಿದ್ದೇವೆ. ಈಗಾಗಲೇ 2ಸಾವಿರ ಮಂದಿ ಸದಸ್ಯರ ನೋಂದಾವಣೆ ಆಗಿದೆ. ವರ್ಷಕ್ಕೆ 5 ಮಂದಿಯನ್ನು ಸಾವಿರ ಸದಸ್ಯರನ್ನಾಗಿ ಮಾಡುವ ಮೂಲಕ ಸದಸ್ಯತ್ವ ಗುರಿಯನ್ನು ತಲುಪಲಿದ್ದೇವೆ. ಮುಂದೆ ಸಮಾಜಮುಖಿ ಕೆಲಸ ಕಾರ್ಯ ಮಾಡಲಿದ್ದೇವೆ ಎಂದು ಲೋಕಯ್ಯ ಗೌಡ ಹೇಳಿದರು.

LEAVE A REPLY

Please enter your comment!
Please enter your name here