ಗ್ರಾಮೀಣ ಪ್ರದೇಶದ ಶಿಕ್ಷಣ ಸಂಸ್ಥೆಯಿಂದ ಶೈಕ್ಷಣಿಕ ಕ್ರಾಂತಿ : ಉತ್ತಮ ಪಥದಲ್ಲಿ ಸಾಗುತ್ತಿದೆ ಬುಶ್ರಾ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆ

0

ಪುತ್ತೂರು ತಾಲೂಕಿನ ಗ್ರಾಮೀಣ ಪ್ರದೇಶವಾದ ಕಾವು ಎಂಬಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳನ್ನೇ ಕೇಂದ್ರೀಕರಿಸಿ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಒದಗಿಸುವ ಸಲುವಾಗಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಜವಾಬ್ದಾರಿ ಯೊಂದಿಗೆ ಒಂದೊಂದೇ ಮೆಟ್ಟಿಲುಗಳನ್ನು ಯಶಸ್ವಿಯಾಗಿ 27 ವರ್ಷ ಪೂರೈಸಿ ಎಲ್ ಕೆ ಜಿ ಯಿಂದ 10ನೇ ತರಗತಿಯವರೆಗೂ ಸಾವಿರಾರು ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಸಾಂಸ್ಕೃತಿಕವಾಗಿ ಜ್ಞಾನವನ್ನು ಬೆಳಗಿಸಿ ಅವರ ಭವ್ಯ ಭವಿಷ್ಯಕ್ಕೆ ನಾಂದಿ ಹಾಡುತ್ತಿದೆ. ಬುಶ್ರಾ ಆಂಗ್ಲ ಮಾಧ್ಯಮ ಪ್ರೈಮರಿ ಮತ್ತು ಪ್ರೌಢಶಾಲೆ ಕಾವು ಸುಳ್ಯ ಪುತ್ತೂರು ರಸ್ತೆಯ ಮಧ್ಯ ಭಾಗದಲ್ಲಿ ಕಾವು ಎಂಬ ಪುಟ್ಟ ಗ್ರಾಮದಲ್ಲಿ ಕಂಗೊಳಿಸುತ್ತಿದೆ. ಬುಶ್ರಾ ವಿದ್ಯಾ ಸಂಸ್ಥೆಯ ದೂರ ದೃಷ್ಟಿ,ರಾಷ್ಟ್ರ ಜಾಗೃತಿ,ಪರಿಸರ ಜಾಗೃತಿ ಮತ್ತು ಮಾನವೀಯತೆ ಜಾಗೃತಿಗಳ ಸಹಿತವಾದ ಮನೋಭಾವನೆಗಳೊಂದಿಗೆ ಪರಮೋಚ್ಚ ರಾಷ್ಟ್ರ ಚಿಂತನೆಯೊಂದಿಗೆ ವಿದ್ಯಾರ್ಥಿಗಳನ್ನು ಬೆಳೆಸುವುದಾಗಿದೆ.

ಬುಶ್ರಾ ಸಂಸ್ಥೆಯ ವೈಶಿಷ್ಟ್ಯ :
ಅತ್ಯಾಧುನಿಕ ತರಗತಿ ಕೋಣೆಗಳು ಆಧುನಿಕ ಸಲಕರಣೆಗಳಿರುವ ಪ್ರಯೋಗಾಲಯಗಳು ಇ -ಲೈಬ್ರರಿ ಎಲ್ ಕೆ ಜಿ ಮತ್ತು ಯು ಕೆ ಜಿ ವಿದ್ಯಾರ್ಥಿಗಳಿಗೆ ತರಗತಿ ಕೋಣೆಯಲ್ಲಿಯೇ ಆಡಿಯೋ ವಿಡಿಯೋ ತರಗತಿ, ಪಠ್ಯಕ್ರಮದೊಂದಿಗೆ ಗುಣಮಟ್ಟದ ಶಿಕ್ಷಣ,ವಿಶಿಷ್ಟ ತಂತ್ರಜ್ಞಾನ ಆಧಾರಿತ ತರಗತಿಗಳು,ಮಕ್ಕಳ ವಿದ್ಯಾಭ್ಯಾಸಕ್ಕೆ ಬೇಕಾದ ಎಲ್ಲ ಪೂರಕ ಸೌಕರ್ಯಗಳು, ಅತ್ಯಾಧುನಿಕ ಶೈಲಿಯ ಸಭಾಂಗಣ,,ಶಾಲಾ ವಾಹನ ಸೌಲಭ್ಯ,ಆಡಿಯೋ ವಿಡಿಯೋ ಸಂಬಂಧಿತ ತರಗತಿಗಳು, ವೈಭವದ ವಾರ್ಷಿಕೋತ್ಸವ,ಆಟೋಟಕ್ಕೆ ಸಂಬಂಧಿಸಿದ ಒಳಾಂಗಣ ಕ್ರೀಡಾಂಗಣ,ಕರಾಟೆ,ಕಂಪ್ಯೂಟರ್,ನೃತ್ಯ ತರಗತಿಗಳಂತಹ ಅತ್ಯಾಧುನಿಕ ಶೈಕ್ಷಣಿಕ ಪದ್ಧತಿಗಳನ್ನು ಒಳಗೊಂಡಿದೆ.

ಇಂಗ್ಲಿಷ್ ಲ್ಯಾಬ್ :
ವಿದ್ಯಾರ್ಥಿಗಳಿಗೆ ಸುಸಜ್ಜಿತ ಪ್ರತ್ಯೇಕ ಇಂಗ್ಲಿಷ್ ಲ್ಯಾಬ್ ತರಗತಿಗಳು ನಡೆಯಲಿದೆ. ವಿದ್ಯಾರ್ಥಿಗಳು ಸುಲಭವಾಗಿ ಇಂಗ್ಲಿಷ್ ಉಚ್ಚಾರದೊಂದಿಗೆ ಸರಿಯಾದ ಪದ ಬಳಕೆ ಮಾಡಲು ಇದು ಅನುಕೂಲವಾಗುತ್ತದೆ.

ಪದವಿ ಪುರಸ್ಕಾರ :
ಬುಶ್ರಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಿಂಡರ್ ಗಾರ್ಟನ್ ಹಾಗೂ 10ನೇ ತರಗತಿ ಮುಗಿಸಿ ಹೋಗುವ ವಿದ್ಯಾರ್ಥಿಗಳಿಗೆ ಸಂಸ್ಥೆಯ ವತಿಯಿಂದ ಪ್ರತಿ ವರ್ಷ ಪದವಿ ಪ್ರಧಾನ ಮಾಡಲಾಗುತ್ತದೆ.

ಎಸ್ ಎಸ್ ಎಲ್ ಸಿ ಯಲ್ಲಿ ಅತ್ಯುತ್ತಮ ಅಂಕದೊಂದಿಗೆ ದಾಖಲೆಯ ಫಲಿತಾಂಶ :
2024 25 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯುತ್ತಮ 614 ಅಂಕದೊಂದಿಗೆ ಉತ್ತಮ ಫಲಿತಾಂಶದ ದಾಖಲಿಸಿದೆ.. ಜನಾಬ್ ಅಬ್ದುಲ್ ಅಝೀಜ್ ಹುಟ್ಟು ಹಾಕಿದ ಬುಶ್ರಾ ಆಂಗ್ಲ ಮಾಧ್ಯಮ ಶಾಲೆ ತನ್ನ 25ನೇ ವರ್ಷದ ಬೆಳ್ಳಿ ಹಬ್ಬವನ್ನು ಆಚರಿಸಿ ಇಂದಿಗೆ 27 ವರ್ಷವನ್ನು ಪೂರೈಸಿರುವುದು ಹೆಮ್ಮೆಯ ವಿಷಯ.ಶಾಲೆಯು ಅಬ್ದುಲ್ ಅಜ್ಜೀದ್ ಅಧ್ಯಕ್ಷತೆಯಲ್ಲಿ ನೂರುದ್ದೀನ್ ಮತ್ತು ಬದ್ರುದ್ದೀನ್ ಆಡಳಿತ ನಿರ್ದೇಶಕರಾಗಿ,ದೀಪಿಕಾ ಚಾಕೋಟೆ ಮುಖ್ಯ ಗುರುಗಳಾಗಿ, ಅನುಭವಿ ನುರಿತ ಶಿಕ್ಷಕ- ಶಿಕ್ಷಕರೇತರ ವೃಂದವನ್ನು ಒಳಗೊಂಡು ಕಾರ್ಯ ನಿರ್ವಹಿಸುತ್ತಿದೆ.

ಶಾಲಾ ವಾಹನ ವ್ಯವಸ್ಥೆ :
ಶಾಲೆಯು ಸುಳ್ಯ ಮತ್ತು ಪುತ್ತೂರು ತಾಲೂಕಿನ ಉದ್ದಗಲಕ್ಕೂ ಬಸ್ ವ್ಯವಸ್ಥೆಯ ಕಲ್ಪಿಸಿರುತ್ತದೆ. ದೇಲಂಪಾಡಿ, ಸುಳ್ಯ ಪದವು, ಕುಂಬ್ರ, ತಿಂಗಳಾಡಿ, ಪಾಲ್ತಾಡು, ಸಂಪ್ಯ, ಪೆರ್ಲಂಪಾಡಿ, ನೆಟ್ಟಾರು, ಕನಕ ಮಜಲು,ಜಾಲ್ಸೂರು ಅಮ್ಚಿನಡ್ಕ ಪಟ್ಟೆ,ಕೌಡಿಚಾರು, ಪರ್ಪುಂಜ ಇನ್ನಿತರ ಒಳ ಭಾಗಗಳಿಗೆ ಬಸ್ ವ್ಯವಸ್ಥೆಯನ್ನು ಕಲ್ಪಿಸಿರುತ್ತದೆ.

ಗ್ರಾಮೀಣ ಪ್ರದೇಶದ ಎಲ್ಲಾ ಮಕ್ಕಳು ಆಂಗ್ಲ ಮಾಧ್ಯಮ ಶಿಕ್ಷಣದೊಂದಿಗೆ ಸುಶಿಕ್ಷಿತರಾಗಬೇಕು,ಬುಶ್ರಾ ವಿದ್ಯಾ ಸಂಸ್ಥೆಯಲ್ಲಿ ವಿದ್ಯಾರ್ಜನೆ ಮಾಡಿರುವ ಸಾವಿರಾರು ವಿದ್ಯಾರ್ಥಿಗಳು ವೈದ್ಯಕೀಯ,ತಾಂತ್ರಿಕ, ವೃತ್ತಿಪರ ಕ್ಷೇತ್ರಗಳಲ್ಲಿ ದೇಶವಿದೇಶಗಳಲ್ಲಿ ಉದ್ಯೋಗವನ್ನು ಹೊಂದಿರುತ್ತಾರೆ. ಸುಳ್ಯ ಪುತ್ತೂರು ತಾಲೂಕಿನ ಹೆತ್ತವರು ಇಲ್ಲಿಯವರೆಗೂ ನೀಡಿ ಸಹಕಾರಕ್ಕೆ ಧನ್ಯವಾದ ನೀಡುತ್ತಾ, ಮುಂದೆಯೂ ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇನೆ. ಗ್ರಾಮೀಣ ಭಾಗದ ಎಲ್ಲಾ ಮಕ್ಕಳು ಆಂಗ್ಲ ಮಾಧ್ಯಮದೊಂದಿಗೆ ಉತ್ತಮ ವಿದ್ಯಾಭ್ಯಾಸ ಪಡೆಯಬೇಕೆಂಬುದೇ ನನ್ನ ಪರಮೋಚ್ಚ ಗುರಿಯಾಗಿದೆ
— ಅಬ್ದುಲ್ ಅಜೀಜ್,
ಅಧ್ಯಕ್ಷರು, ಬುಶ್ರಾ ಆಂಗ್ಲ ಮಾಧ್ಯಮ ಶಾಲೆ ಕಾವು

LEAVE A REPLY

Please enter your comment!
Please enter your name here