ಕಾಣಿಯೂರು: ಅಖಿಲ ಭಾರತ ಸೈನಿಕ ಶಾಲಾ ಪ್ರವೇಶ ಪರೀಕ್ಷೆ (AISSEE )ಯಲ್ಲಿ ಜ್ಞಾನ ಗಂಗಾ ಸೆಂಟ್ರಲ್ ಸ್ಕೂಲ್ ಬೆಳ್ಳಾರೆಯ ವಿದ್ಯಾರ್ಥಿ ತನುಷ್ ರಾಜ್ ತೇಜಸ್ವಿ ಚಾರ್ವಾಕ ಇವರು ತೇರ್ಗಡೆ ಹೊಂದಿ ಸೈನಿಕ ಶಾಲೆಗೆ ಅರ್ಹತೆ ಪಡೆದುಕೊಂಡಿದ್ದಾರೆ. ಅಲ್ಲದೆ ಇವರು ಜವಾಹರ್ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆ ಯಲ್ಲೂ ತೇರ್ಗಡೆ ಹೊಂದಿ JNV ಗೂ ಆಯ್ಕೆಯಾಗಿದ್ದಾರೆ. ಇವರು ತನುಷ್ ಎಂಟರ್ ಪ್ರೈಸಸ್ ನ ಅಭಿಯಂತರ ಡಿ.ಜಿ.ರವಿರಾಜ್ ಮತ್ತು ರಶ್ಮಿಯವರ ಪುತ್ರ.