620 ಅಂಕಗಳೊಂದಿಗೆ ರಾಜ್ಯಕ್ಕೆ 6ನೇ ಸ್ಥಾನ
ಕಾಣಿಯೂರು: 2024-25 ನೇ ಶೈಕ್ಷಣಿಕ ವರ್ಷದ ಎಸ್ ಎಸ್ ಎಲ್ ಸಿ ಪರೀಕ್ಷೆ -1 ರ ಫಲಿತಾಂಶ ಪ್ರಕಟಗೊಂಡಿದ್ದು ಕಾಣಿಯೂರಿನ ಪ್ರಗತಿ ವಿದ್ಯಾ ಸಂಸ್ಥೆಯ ಮಾನ್ವಿ ಜಿ ಎಸ್ 611 ಅಂಕಗಳನ್ನು ಗಳಿಸಿದ್ದು ಇದೀಗ ಮರು ಮೌಲ್ಯಮಾಪನದಲ್ಲಿ ಪ್ರಥಮ ಭಾಷೆ ಕನ್ನಡದಲ್ಲಿ 95ರ ಬದಲು 99 ಅಂಕಗಳು, ವಿಜ್ಞಾನದಲ್ಲಿ 73ರ ಬದಲು 78 ಅಂಕಗಳನ್ನು ಗಳಿಸುವ ಮೂಲಕ ಒಟ್ಟು 9 ಅಂಕಗಳು ಹೆಚ್ಚುವರಿಯಾಗಿ 620 ಅಂಕಗಳೊಂದಿಗೆ ರಾಜ್ಯದಲ್ಲಿ ಆರನೇ ಸ್ಥಾನವನ್ನು ಗಳಿಸಿಕೊಂಡಿರುತ್ತಾರೆ. ಇವರು ಕಡಬ ತಾಲೂಕಿನ ಪುಣ್ಚಪ್ಪಾಡಿ ದೇವಸ್ಯ ಗಿರಿಶಂಕರ್ ಸುಲಾಯ ಮತ್ತು ಶಿಕ್ಷಕಿ ಸುಜಯ ದಂಪತಿಗಳ ಪುತ್ರಿ. ಉಳಿದಂತೆ ತರುಣ್ ಕೆ ವಿಜ್ಞಾನದಲ್ಲಿ 69 ರ ಬದಲು 73 ಅಂಕಗಳನ್ನು ಪಡೆದು ಒಟ್ಟು 4 ಅಂಕಗಳು ಹೆಚ್ಚುವರಿಯಾಗಿ 605 ರ ಬದಲು 609 ಅಂಕಗಳನ್ನು ಪಡೆದುಕೊಂಡಿರುತ್ತಾರೆ.
ಪಿ ಶ್ರೇಯಾಂಕ ರಾವ್ ಕನ್ನಡದಲ್ಲಿ 86 ರ ಬದಲು 95 ಅಂಕಗಳು, ಇಂಗ್ಲಿಷ್ ನಲ್ಲಿ 75 ರ ಬದಲು 77 ಅಂಕಗಳನ್ನು ಪಡೆದುಕೊಳ್ಳುವ ಮೂಲಕ ಒಟ್ಟು 11 ಅಂಕಗಳು ಹೆಚ್ಚುವರಿಯಾಗಿ 596 ರ ಬದಲು 607 ಅಂಕಗಳನ್ನು ಗಳಿಸಿರುತ್ತಾರೆ.
ಪ್ರಥಮ್ ಪಿ ವಿಜ್ಞಾನದಲ್ಲಿ 73ರ ಬದಲು 79 ಅಂಕಗಳನ್ನು ಗಳಿಸುವ ಮೂಲಕ 6 ಅಂಕಗಳು ಹೆಚ್ಚುವರಿಯಾಗಿ 601ರ ಬದಲು 607 ಅಂಕಗಳನ್ನು ಗಳಿಸಿರುತ್ತಾರೆ. ಧನಲಕ್ಷ್ಮಿ ಸಿ ಎಂ ಹಿಂದಿಯಲ್ಲಿ 75ರ ಬದಲು 77 ಅಂಕಗಳನ್ನು ಗಳಿಸಿ 600 ರ ಬದಲು 602 ಅಂಕಗಳನ್ನು ಪಡೆದಿರುತ್ತಾರೆ.
ರಾಶಿ ಕೆ ಸಿ ಕನ್ನಡದಲ್ಲಿ 90ರ ಬದಲು 92, ಇಂಗ್ಲಿಷ್ ನಲ್ಲಿ 71 ರ ಬದಲು 73 ಅಂಕಗಳನ್ನು ಪಡೆದು ಒಟ್ಟು 4 ಅಂಕಗಳು ಹೆಚ್ಚುವರಿಯಾಗಿ 585ರ ಬದಲು 589 ಅಂಕಗಳನ್ನು ಗಳಿಸಿರುತ್ತಾರೆ. ಗ್ರೀಷ್ಮಾ ಕೆ ಎಚ್ ವಿಜ್ಞಾನದಲ್ಲಿ 56 ರ ಬದಲು 60 ಅಂಕಗಳನ್ನು ಪಡೆದು ಒಟ್ಟು 4 ಅಂಕಗಳನ್ನು ಹೆಚ್ಚುವರಿಯಾಗಿ ಪಡೆದು 530 ರ ಬದಲು 534 ಅಂಕಗಳನ್ನು ಪಡೆದುಕೊಂಡಿರುತ್ತಾರೆ ಎಂದು ಶಾಲಾ ಸಂಚಾಲಕ ಜಯಸೂರ್ಯ ರೈ ಮಾದೋಡಿಯವರು ತಿಳಿಸಿರುತ್ತಾರೆ.