ಪುತ್ತೂರು: ಬೆಳಿಯೂರುಕಟ್ಟೆ ಮಂಜ ಮಖಾಂ ಉರೂಸ್ ಮೇ.23ರಂದು ಉದ್ಘಾಟನೆಗೊಂಡಿತು. ಮಂಜ ಅನ್ಸಾರಿಯಾ ಜುಮಾ ಮಸ್ಜಿದ್ ಅಧ್ಯಕ್ಷ ಯೂಸುಫ್ ಗೌಸಿಯಾ ಸಾಜ ಹಾಗೂ ಗಣ್ಯರು ಧ್ವಜಾರೋಹಣ ನೆರವೇರಿಸಿದರು.
ಮಂಜ ಅನ್ಸಾರಿಯಾ ಜುಮಾ ಮಸೀದಿಯ ಗೌರವಾಧ್ಯಕ್ಷ ಸಯ್ಯದ್ ಫಕ್ರುದ್ದೀನ್ ಹದ್ದಾದ್ ತಂಙಳ್, ಮರ್ಕಝ್ ಕೈಕಂಬ ಇದರ ಅಧ್ಯಕ್ಷ ಬದ್ರುದ್ದೀನ್ ಅಝ್ಹರಿ, ಸಾಜ ಖತೀಬ್ ಹಾಫಿಲ್ ಉಮರುಲ್ ಫಾರೂಕ್ ಸಖಾಫಿ, ಮಂಜ ಖತೀಬ್ ರವೂಫ್ ಹಾಶಿಮಿ, ಅಬ್ದುರ್ರಹ್ಮಾನ್ ರಝ್ವಿ, ಮೂಸಾ ರಝ್ವಿ, ಉರೂಸ್ ಸ್ವಾಗತ ಸಮಿತಿ ಅಧ್ಯಕ್ಷ ಎಂ.ಎಸ್ ಅಬ್ದುಲ್ಲಾ, ಕೋಶಾಧಿಕಾರಿ ಯು.ಟಿ ಅಲಿ, ಮಂಜ ಅನ್ಸಾರಿಯಾ ಜುಮಾ ಮಸೀದಿಯ ಕೋಶಾಧಿಕಾರಿ ಫಾರೂಕ್ ಇಂಜಿನಿಯರ್, ಕಾರ್ಯದರ್ಶಿ ಅನಸ್ ಬುಳೇರಿಕಟ್ಟೆ, ಜಮಾತರು ಮತ್ತು ಉರೂಸ್ ಸ್ವಾಗತ ಸಮಿತಿ, ಮತ್ತಿತರರು ಉಪಸ್ಥಿತರಿದ್ದರು. ಮೇ.24ರಂದು ಉರೂಸ್ ಸಮಾರೋಪ ಸಮಾರಂಭ ನಡೆಯಲಿದೆ.