ಅರ್ತ್ಯಡ್ಕದಲ್ಲಿ‌‌ ಕಾಡಾನೆ ಹಾವಳಿ- ಕೃಷಿಗೆ ಹಾನಿ

0

ಪುತ್ತೂರು: ಕೆಯ್ಯೂರು ಗ್ರಾಮದ ಅರ್ತ್ಯಡ್ಕ ಎಂಬಲ್ಲಿ ಕಾಡಾನೆ‌ ಹಾವಳಿ ನಡೆಸಿದ್ದು, ಕೃಷಿಗೆ ಹಾನಿಯಾಗಿದೆ.

ಕೆಯ್ಯೂರು ಗ್ರಾಮದ ಅರ್ತ್ಯಡ್ಕ ನಿವಾಸಿ ಪ್ರಸನ್ನ ಕುಮಾರ್ ಅವರ ತೋಟಕ್ಕೆ ಲಗ್ಗೆಯಿಟ್ಟ ಕಾಡಾನೆ ಕೃಷಿಗೆ ಹಾನಿಯನ್ನುಂಟು ಮಾಡಿದ್ದು, ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.

ಕಳೆದ ಕೆಲವು ದಿನಗಳಿಂದ ಆನೆಗಳ ಹಾವಳಿ ಬಗ್ಗೆ ಸರಕಾರಕ್ಕೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಸರಕಾರವೇ ನಮ್ಮ ಕೃಷಿ ಜಾಗವನ್ನು ಖರೀದಿಸಿ, ನಮಗೆ ಜೀವನ ಸಾಗಿಸಲು ಬೇರೆ ಜಾಗದ ವ್ಯವಸ್ಥೆ ಮಾಡಿದರೆ ಉತ್ತಮವೆಂದು ಕೃಷಿಕರಾದ ಪ್ರಸನ್ನ ಕುಮಾರ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here