ಪುತ್ತೂರು: ಸುರಕ್ಷಾ ಕನ್ಸ್ಟ್ರಕ್ಷನ್ನ ಮಾಲಕರಾದ ಸಿದ್ದೀಕ್ ಶಮೀರ್ ಸೂರ್ಯ ಅವರು ಕೋಲ್ಪೆ ಇಡ್ಕಿದು ಬದ್ರಿಯಾ ಜುಮಾ ಮಸೀದಿ ಜಮಾಅತ್ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಬ್ಯಾಗ್ ಮತ್ತು ಕೊಡೆ ವಿತರಣೆ ಮಾಡಿದರು.
ಕೋಲ್ಪೆ ಇಡ್ಕಿದು ಬದ್ರಿಯಾ ಜುಮಾ ಮಸೀದಿ ವಠಾರದಲ್ಲಿ ಮೇ.24ರಂದು ನಡೆದ ಕಾರ್ಯಕ್ರಮದಲ್ಲಿ ಅವರು ವಿತರಣೆ ಮಾಡಿದರು. ಜಮಾಅತ್ ವ್ಯಾಪ್ತಿಯ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿ ಬ್ಯಾಗ್ ಮತ್ತು ಕೊಡೆ ವಿತರಿಸಿದ ಸಿದ್ದೀಕ್ ಶಮೀರ್ ಸೂರ್ಯ ಅವರ ನಡೆ ಸ್ಥಳೀಯವಾಗಿ ಪ್ರಶಂಸೆಗೆ ಪಾತ್ರವಾಗಿದೆ.
ಕೋಲ್ಪೆ ಇಡ್ಕಿದು ಜುಮಾ ಮಸೀದಿಯ ಅಧ್ಯಕ್ಷ ಶೇಕಬ್ಬ ಹಾಜಿ ಕೋಲ್ಪೆ, ಕಾರ್ಯದರ್ಶಿ ಆಸಿಫ್ ಕೋಲ್ಪೆ, ಖತೀಬ್ ನೌಶಾದ್ ಕಾಮಿಲ್ ಸಖಾಫಿ ಫುರ್ಖಾನಿ ಬೆಲ್ಮ, ಬದ್ರಿಯಾ ಯಂಗ್ಮೆನ್ಸ್ನ ಅಧ್ಯಕ್ಷ ಅಝೀಝ್ ಕೋಲ್ಪೆ, ಕಾರ್ಯದರ್ಶಿ ಇಲ್ಯಾಸ್ ಕೋಲ್ಪೆ, ಸಾಮಾಜಿಕ ಕಾರ್ಯಕರ್ತ ಅಬೂಬಕ್ಕರ್ ಕೋಲ್ಪೆ, ಅಶ್ರಫ್ ಹೋನೆಸ್ಟ್, ಸುಲೈಮಾನ್ ಅಕ್ಕರೆ, ಇಬ್ರಾಹಿಂ ಅಕ್ಕರೆ, ಮನ್ಸೂರ್ ನೇರಳಕಟ್ಟೆ, ಸಬೀರ್ ಅಳಕೆಮಜಲು, ಸಾದಿಕ್ ಪಾಟ್ರಕೋಡಿ, ರಫೀಕ್ ಪಿ.ಎಸ್ ಪಾಟ್ರಕೋಡಿ, ನೌಶಾದ್ ಅಕ್ಕರೆ, ಜಿಯಾ ಕೋಲ್ಪೆ, ರಶೀದ್ ಕೋಲ್ಪೆ ಉಪಸ್ಥಿತರಿದ್ದರು.