ಪುತ್ತೂರು: ಉಪ್ಪಿನಂಗಡಿ ಬುರ್ಜಿಮಾನ್ ಕಾಂಪ್ಲೆಕ್ಸ್ ನಲ್ಲಿ ಮಹಿಳೆಯರ ಸಿದ್ಧ ಉಡುಪುಗಳ ಮಳಿಗೆ ಶೋಭಿಕಾ ವುಮೆನ್ ಬ್ಯೂಟಿಕ್ ಮೇ 24 ರಂದು ಶುಭಾರಂಭಗೊಂಡಿದೆ.
ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಲಲಿತಾರವರು ಮಳಿಗೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು. ಉಪ್ಪಿನಂಗಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ವಿದ್ಯಾಲಕ್ಷ್ಮೀ ಪ್ರಭು ಮಾತನಾಡಿ, ಶೋಭಿಕಾ ವುಮೆನ್ ಬ್ಯೂಟಿಕ್ ಮಳಿಗೆಯು ಉಪ್ಪಿನಂಗಡಿ ಪರಿಸರಕ್ಕೆ ನಿಜಕ್ಕೂ ಶೋಭೆ ತಂದಿದೆ. ಮುಂದಿನ ದಿನಗಳಲ್ಲಿ ಈ ಮಳಿಗೆಯು ಹೆಚ್ಚೆಚ್ಚು ಮಳಿಗೆಯನ್ನು ಹೊಂದಲಿ ಎಂದು ಹೇಳಿ ಶುಭಾರಂಭಗೊಂಡಿತು.
ಟಿವಿ ನಿರೂಪಕಿ ಹೇಮಾ ಜಯರಾಮ್ ರೈ ಮಾತನಾಡಿ, ಉದ್ಯಮ ಕ್ಷೇತ್ರದಲ್ಲಿ ಉಪ್ಪಿನಂಗಡಿ ಪರಿಸರವು ಉತ್ತಮ ಹೆಸರು ಗಳಿಸಿದ್ದು ಇದೀಗ ಶೋಭಿಕಾ ವಸ್ತ್ರ ಮಳಿಗೆಯು ಹೆಚ್ಚಿನ ಆಕರ್ಷಿತವನ್ನು ಪಡೆದುಕೊಂಡಿದೆ. ಅಚ್ಚುಕಟ್ಟಾದ ವ್ಯವಸ್ಥೆಯೊಂದಿಗೆ ಆರಂಭವಾದ ಮಳಿಗೆಯು ಮಹಿಳೆಯರನ್ನು ಆಕರ್ಷಿಸಿದೆ. ಉದ್ಯಮ ಕ್ಷೇತ್ರದಲ್ಲಿ ಪುತ್ತೂರು ಹಾಗೂ ಉಪ್ಪಿನಂಗಡಿಗೆ ಅವಿನಾಭಾವ ಸಂಬಂಧವಿದ್ದು ಮಾರುಕಟ್ಟೆಗೆ ಏನು ಬೇಕು ಅವೆಲ್ಲವೂ ಈ ಮಳಿಗೆಯು ಹೊಂದಿದ್ದು ಸಂಸ್ಥೆಗೆ ಅಮೃತ ಘಳಿಗೆಯಾಗಲಿ ಎಂದರು.
ಬೆಳ್ತಂಗಡಿ ಕೆಡಿಪಿ ಸದಸ್ಯೆ ಹಾಗೂ ಗ್ರಾಮ ಪಂಚಾಯತ್ ಸದಸ್ಯೆ ಸುಮತಿ ಶೆಟ್ಟಿ ಮಾತನಾಡಿ, ಮಹಿಳೆಯರ ವಸ್ತ್ರ ಮಳಿಗೆಯನ್ನು ಆರಂಭಿಸಬೇಕೆನ್ನುವ ತುಂಬಾ ದಿನಗಳ ಕನಸು ಇದೀಗ ಈಡೇರಿದೆ. ಗ್ರಾಹಕರಿಗೆ ಗುಣಮಟ್ಟದ ಸೇವೆಯನ್ನು ನೀಡಿದ್ದಲ್ಲಿ ಸಂಸ್ಥೆಯು ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದರು.
ಉಪ್ಪಿನಂಗಡಿ ಗ್ರಾಮ ಪಂಚಾಯತ್ ಸದಸ್ಯೆ ಬಿ ನೆಬಿಸ, ಪುತ್ತೂರು ವಿಧಾನಸಭೆಯ ಮಹಿಳಾ ಭಾರತ ಚಳುವಳಿಯ ಜಂಟಿ ಕಾರ್ಯದರ್ಶಿ ಫಾತಿಮತ್ ಝೊಹರಾ ನಿರ್ಮಾ, ಉಪ್ಪಿನಂಗಡಿ ಹಸನ್ ಟವರ್ ನೋಹಾ ಬ್ಯೂಟಿ ಪಾರ್ಲರ್ ಮಾಲಕಿ ಸುಚಿತಾ ಸಿಲ್ವಿಯಾ ಡಿ’ಸೋಜರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ದುಬೈ ಕ್ರೆಡೆನ್ಸ್ ಹೈಸ್ಕೂಲ್ ನ ಎಂ.ಜಿ ರೀಮ್ ಹಾಗೂ ನಯಾ ಚಪ್ಪಲ್ ಬಜಾರ್ ಮಾಲಕ ಎಂ.ಜಿ ರಫೀಕ್ ಕಾರ್ಯಕ್ರಮ ನಿರೂಪಿಸಿದರು. ಪುತ್ತೂರಿನ ಮದರ್ ಇಂಡಿಯಾ ಪಾದರಕ್ಷೆಗಳ ಮಳಿಗೆಯ ಮಾಲಕ ಎಂ.ಜಿ ರಝಾಕ್ ಹಾಗೂ ಅವರ ಸಹೋದರರು, ಹಿತೈಷಿಗಳು ಉಪಸ್ಥಿತರಿದ್ದರು.
ಆನ್ ಲೈನ್ ಖರೀದಿ ಲಭ್ಯ..
ನಯಾ ಚಪ್ಪಲ್ ಬಜಾರ್ ಮಾಲಕ ಎಂ.ಜಿ ರಫೀಕ್ ರವರ ಸಹೋದರನ ಪುತ್ರ, ವೃತ್ತಿಯಲ್ಲಿ ಸಾಪ್ಟ್ ವೇರ್ ಇಂಜಿನಿಯರ್ ಆಗಿರುವ ಮೊಹಮ್ಮದ್ ರೀಜ್ ರವರು ಆನ್ ಲೈನ್ ಖರೀದಿಗೆ ಆಪ್(app) ಒಂದನ್ನು ರಚಿಸಿದ್ದು, ಆಪ್(app) ಮುಖೇನ ಮಹಿಳೆಯರು ತಮ್ಮ ಆಯ್ಕೆಯ ವಸ್ತ್ರವನ್ನು ಖರೀದಿಸಬಹುದು. ಯಾರು ಆಪ್ ಮುಖೇನ ವಸ್ತ್ರವನ್ನು ಖರೀದಿಸುತ್ತಾರೋ ಅವರಿಗೆ ಅವರ ವಿಳಾಸಕ್ಕೆ ಮಳಿಗೆಯ ಸಿಬ್ಬಂದಿ ಒಟ್ಟು ಐದು ಡ್ರೆಸ್ ಗಳನ್ನು ತಂದು ಗ್ರಾಹಕರಿಗೆ ತೋರಿಸಲಾಗುತ್ತದೆ. ಅದರಲ್ಲಿ ನಿಮ್ಮ ಆಯ್ಕೆಯ ವಸ್ತ್ರವನ್ನು ಖರೀದಿಸಬಹುದು. ಒಂದು ವೇಳೆ ಇಷ್ಟವಾಗದಲ್ಲಿ ವಸ್ತ್ರವನ್ನು ಹಿಂದುರುಗಿಸಬಹುದು.