ಪಾಲಿಂಜೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ವಾರ್ಷಿಕ ಪ್ರತಿಷ್ಠಾ ಮಹೋತ್ಸವ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ದುರ್ಗಾಪೂಜೆ, ರಂಗಪೂಜೆ, ಭಜನೆ

0

ಪುತ್ತೂರು: ಕುರಿಯ, ಅಮ್ಮುಂಜ ಪಾಲಿಂಜೆ ಶ್ರೀ ಮಹಾ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ವಾರ್ಷಿಕ ಪ್ರತಿಷ್ಠಾ ಮಹೋತ್ಸವ ಮತ್ತು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ದುರ್ಗಾಪೂಜೆ, ರಂಗಪೂಜೆ ಹಾಗೂ ಭಜನಾ ಕಾರ್ಯಕ್ರಮವು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ್ ತಂತ್ರಿಯವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಮೇ 23 ರಂದು ಜರಗಿತು.

ಬೆಳಿಗ್ಗೆ ಗಣಪತಿ ಹವನ, ನಾಗತಂಬಿಲ, ದೈವಗಳಿಗೆ ತಂಬಿಲ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ದೇವರಿಗೆ ಕಲಶಾಭಿಷೇಕ, ಪಾಲಿಂಜೆ ಶ್ರೀ ಮಹಾ ವಿಷ್ಣುಮೂರ್ತಿ ಮಹಿಳಾ ಭಜನಾ ಮಂಡಳಿಯಿಂದ ಭಜನೆ ಕಾರ್ಯಕ್ರಮ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಾಯಂಕಾಲ ಪುಣಚ ಶ್ರೀ ಮಹಮ್ಮಾಯಿ ಭಜನಾ ತಂಡದಿಂದ ಕುಣಿತ ಭಜನಾ ಕಾರ್ಯಕ್ರಮ ನಡೆಯಿತು.

ಈ ಧಾರ್ಮಿಕ ಕಾರ್ಯಕ್ರಮದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಶ್ವಜಿತ್ ಅಮ್ಮುಂಜ, ಪ್ರಧಾನ ಅರ್ಚಕ ಸೂರ್ಯಪ್ರಕಾಶ ಅಂಗಿತ್ತಾಯ, ಸದಸ್ಯರಾದ ರಮೇಶ್ ಅಂಗಿತ್ತಾಯ, ಗುರು ಪ್ರಸಾದ್ ಮಾದೇರಿ, ಹೊನ್ನಪ್ಪ ನಾಯ್ಕ, ನಿರಂಜನ್ ಶೆಟ್ಟಿ, ನಾರಾಯಣ ಮಣಿಯಾಣಿ ಇಡಬೆಟ್ಟು, ನಳಿನಾಕ್ಷಿ ಇಡಬೆಟ್ಟು, ಪೂರ್ಣಿಮಾ ಇಡಬೆಟ್ಟು, ನವೋದಯ ಸ್ವ-ಸಹಾಯ ಸಂಘ, ವಿವಿಧ ಪೂಜಾ ಸಮಿತಿ ಸದಸ್ಯರು ಸಹಕರಿಸಿದರು. 

ಈ ಸಂದರ್ಭದಲ್ಲಿ ಪುತ್ತೂರು ಮಾಜಿ ಶಾಸಕಿ ಶಕುಂತಲಾ ಟಿ.ಶೆಟ್ಟಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ್ ಭಟ್, ಪಾಲಿಂಜೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರಾದ ಜಯರಾಮ ರೈ ನುಳಿಯಾಲು, ರಾಮಣ್ಣ ನಾಯ್ಕ ಅಮ್ಮುಂಜ, ಮಾಜಿ ಸದಸ್ಯ ಹರಿಪ್ರಸಾದ್ ಪ್ರಭು ನೆಕ್ಕರೆ, ಪಿಡಬ್ಲ್ಯೂಡಿ ಕಾಂಟ್ರಾಕ್ಟರ್ ವಸಂತ ಪೂಜಾರಿ ಕಲ್ಲರ್ಪೆ ಶಾಂತಿಗೋಡು, ಉದ್ಯಮಿ ಶಿವರಾಮ ಆಳ್ವ ಬಳ್ಳಮಜಲು ಕುರಿಯ, ಅಕ್ಷಯ ಕಾಲೇಜು ಚೇರ್ಮನ್ ಜಯಂತ ನಡುಬೈಲು, ಪರ್ಪುಂಜ ರಾಮಜಾಲು ಬ್ರಹ್ಮ ಬೈದರ್ಕಳ ಗರಡಿ ಆಡಳಿತ ಮೊಕ್ತೇಸರ ಸಂಜೀವ ಪೂಜಾರಿ ಕೂರೇಲು, ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರವೀಂದ್ರ ಶೆಟ್ಟಿ ನುಳಿಯಾಲು, ಕೆಮ್ಮಿಂಜೆ ಪಿಎಂಶ್ರೀ ಗ್ರೂಪ್ಸ್ ನ ಮೋಹನ ಪಾಟಾಳಿ ಡೆಮ್ಮಲೆ,  ಕುರಿಯ ಉಳ್ಳಾಲ ಶ್ರೀ ಮಹಾವಿಷ್ಣು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಯರಾಮ ರೈ ಕುರಿಯ, ಗೆಜ್ಜೆಗಿರಿ ನಂನಬಿತ್ತಿಲು ಕಾರ್ಯದರ್ಶಿ ಡಾ.ರಾಜಾರಾಮ್, ಪುತ್ತೂರು ಕಂಬಳ ಸಮಿತಿ ಅಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿ, ಉದ್ಯಮಿ ರೋಶನ್ ರೈ ಬನ್ನೂರು, ಆರ್ಯಾಪು ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ರಂಜಿತ್ ಬಂಗೇರ, ಸಂಪ್ಯ ಶ್ರೀ ಮಹಾವಿಷ್ಣು ದೇವಸ್ಥಾನದ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ್ ರೈ ಮೇಗಿನಗುತ್ತು, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಉಮಾನಾಥ್ ಶೆಟ್ಟಿ ಪೆರ್ನೆ, ಸನತ್ ರೈ ಏಳ್ನಾಡುಗುತ್ತು, ಯುವ ಕಾಂಗ್ರೆಸ್ ಅಧ್ಯಕ್ಷ ಅಖಿಲ್ ಕಲ್ಲಾರೆ, ಪೂರ್ಣೇಶ್ ಭಂಡಾರಿ, ಪ್ರತೀಕ ಪೂರ್ಣೇಶ್ ಭಂಡಾರಿ ಸಹಿತ ಹಲವರು ಉಪಸ್ಥಿತರಿದ್ದು ಶುಭ ಹಾರೈಸಿದರು. ದರ್ಬೆ ಲಿಟ್ಲ್‌ ಫ್ಲವರ್ ಶಾಲಾ ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು.

“ಯಕ್ಷ ತೆಲಿಕೆ” ಯಕ್ಷ ಹಾಸ್ಯ ವೈಭವ..

ರಾತ್ರಿ ಎಂಟು ಗಂಟೆಗೆ ಕುಸಾಲ್ದ ಗುರಿಕಾರ ದಿನೇಶ್ ಕೋಡಪದವು ಸಾರಥ್ಯದಲ್ಲಿ, ಜಿಲ್ಲೆಯ ಪ್ರಸಿದ್ಧ ಹಾಸ್ಯ ಕಲಾವಿದರಾದ ದಿನೇಶ್ ಕೋಡಪದವು, ಯಕ್ಷಬೊಳ್ಳಿ ದಿನೇಶ್ ರೈ ಕಡಬ, ರಂಗದರಾಜೆ ಸುಂದರ್ ರೈ ಮಂದಾರ, ರಂಗ ಸವ್ಯಸಾಚಿ ಪ್ರಜ್ವಲ್ ಕುಮಾರ್ ಗುರುವಾಯನಕೆರೆ, ತೆಲಿಕೆದ ಅರಸೆ ಸುಂದರ ಬಂಗಾಡಿ ಅಭಿನಯದಲ್ಲಿ, ಧೀರಜ್ ರೈ ಸಂಪಾಜೆರವರ ಭಾಗವತಿಕೆಯೊಂದಿಗೆ “ಯಕ್ಷ ತೆಲಿಕೆ” ಯಕ್ಷ ಹಾಸ್ಯ ವೈಭವ..ನಿರಂತರ ಮೂರು ಗಂಟೆಗಳ ನಗುವಿನ ಟಾನಿಕ್ ಅನ್ನು ಪ್ರೇಕ್ಷಕರಿಗೆ ಉಣಬಡಿಸಿದರು.

ಬ್ರಹ್ಮಕಲಶೋತ್ಸವಕ್ಕೆ ನಮ್ಮ ಸಹಕಾರವಿದೆ..

ಧಾರ್ಮಿಕ ಕಾರ್ಯಕ್ರಮಕ್ಕೆ ಆಗಮಿಸಿದ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಜೆ.ಪಕ್ಕಳ, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷ ಡಾ.ರಾಜಾರಾಂ ಕೆ.ಬಿರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಕರ್ನಾಟಕ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಹಾಗೂ ಮಲ್ಲಿಕಾ ಜೆ.ಪಕ್ಕಳರವರು ಮಾತನಾಡಿ, ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಹಾಗೂ ಭಕ್ತರು ಸಕಲ ಸಿದ್ಧತೆ ಮಾಡುವಂತಾದಾಗ ನಮ್ಮಿಂದ ಆದ ನೆರವು ನೀಡಲಿದ್ದೇವೆ ಜೊತೆಗೆ ದೇವಸ್ಥಾನದ ಅಭಿವೃದ್ಧಿಗೆ ನೆರವಾಗಲಿದ್ದೇವೆ ಎಂದರು.

LEAVE A REPLY

Please enter your comment!
Please enter your name here