ಪುತ್ತೂರು: ಉಪ್ಪಿನಂಗಡಿ ದೀನರ ಕನ್ಯಾಮಾತಾ ದೇವಾಲಯದ ಪ್ರಧಾನ ಧರ್ಮಗುರು ವಂ|ಜೆರಾಲ್ಡ್ ಡಿ’ಸೋಜರವರಿಗೆ ತಮ್ಮ ಗುರುದೀಕ್ಷೆ(ಯಾಜಕಾ ದೀಕ್ಷೆ)ಯ 40ರ ಸಂಭ್ರಮವಾಗಿದ್ದು, ಉಪ್ಪಿನಂಗಡಿ ಚರ್ಚ್ ಪಾಲನಾ ಸಮಿತಿ ಹಾಗೂ ಚರ್ಚ್ ಕ್ರೈಸ್ತ ಬಾಂಧವರಿಂದ ವಂ|ಜೆರಾಲ್ಡ್ ಡಿ’ಸೋಜರವರ ಗುರುದೀಕ್ಷೆಯ ಸಂಭ್ರಮದ ದಿವ್ಯ ಬಲಿಪೂಜೆ ಹಾಗೂ ಅಭಿನಂದನಾ ಕಾರ್ಯಕ್ರಮ ಮೇ 25 ರಂದು ಚರ್ಚ್‌ನಲ್ಲಿ ನೆರವೇರಲಿದೆ.
ಅಜೆಕಾರ್ ಮಾರ್ಸೆಲ್ ಡಿ’ಸೋಜ ಹಾಗೂ ಎವ್ಲಿನ್ ಆಳ್ವ ದಂಪತಿ ಪುತ್ರರಾಗಿರುವ ವಂ|ಜೆರಾಲ್ಡ್ ಡಿ’ಸೋಜರವರು 1985, ಎಪ್ರಿಲ್ 16ರಂದು ಮಂಗಳೂರು ಕಥೋಲಿಕ್ ಧರ್ಮಪ್ರಾಂತ್ಯದಲ್ಲಿ ಗುರುದೀಕ್ಷೆಯನ್ನು ಪಡೆದುಕೊಂಡಿದ್ದು ಅವರು ಆಗ್ರಾರ್(1985-87) ಚರ್ಚ್‌ನಲ್ಲಿ ಸಹಾಯಕ ಧರ್ಮಗುರುಗಳಾಗಿ ಧಾರ್ಮಿಕ ಸೇವೆಯನ್ನು ಆರಂಭಿಸಿದ್ದರು.
ಬಳಿಕ ಬೆಳ್ಮಣ್ಣು(1987-88) ಚರ್ಚ್‌ನಲ್ಲಿ ಸಹಾಯಕ ಧರ್ಮಗುರುಗಳಾಗಿ, ಕಡಬ(1988-1995) ಚರ್ಚ್‌ನಲ್ಲಿ ಪ್ರಧಾನ ಧರ್ಮಗುರುಗಳಾಗಿ, ತಾಕೋಡೆ(1995-2002) ಚರ್ಚ್‌ನಲ್ಲಿ ಪ್ರಧಾನ ಧರ್ಮಗುರುಗಳಾಗಿ, ಬೆಳ್ತಂಗಡಿ(2002-2007) ಚರ್ಚ್‌ನಲ್ಲಿ ಪ್ರಧಾನ ಧರ್ಮಗುರುಗಳಾಗಿ ಹಾಗೂ ಬೆಳ್ತಂಗಡಿ ವಲಯ ಚರ್ಚ್ಗಳ ಪ್ರಧಾನ ಧರ್ಮಗುರುಗಳಾಗಿ, ಪುತ್ತೂರು ಮಾಯಿದೆ ದೇವುಸ್ ಚರ್ಚ್(2007-2014) ನಲ್ಲಿ ಪ್ರಧಾನ ಧರ್ಮಗುರುಗಳಾಗಿ ಹಾಗೂ ಪುತ್ತೂರು ವಲಯದ ಚರ್ಚ್ಗಳ ಪ್ರಧಾನ ಧರ್ಮಗುರುಗಳಾಗಿ, ಮಂಗಳೂರು ಕಥೋಲಿಕ್ ಬೋರ್ಡ್ ಆಫ್ ಎಜ್ಯುಕೇಶನ್(2014-2018) ಇದರ ಕಾರ್ಯದರ್ಶಿಯಾಗಿ, ಶಕ್ತಿನಗರ(2018-2024) ಚರ್ಚ್‌ನ ಪ್ರಧಾನ ಧರ್ಮಗುರುಗಳಾಗಿ ಸೇವೆ ಸಲ್ಲಿಸಿ ಉಪ್ಪಿನಂಗಡಿ ದೀನರ ಕನ್ಯಾಮಾತಾ ದೇವಾಲಯಕ್ಕೆ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ.ವಂ.ಡಾ|ಪೀಟರ್ ಪಾವ್ಲ್ ಸಲ್ದಾನ್ಹಾರವರ ಆದೇಶದಂತೆ ಆಗಮಿಸಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಉಪ್ಪಿನಂಗಡಿ ದೀನರ ಕನ್ಯಾಮಾತಾ ದೇವಾಲಯದ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಮ್ಯಾಕ್ಸಿಂ ಲೋಬೊ, ಕಾರ್ಯದರ್ಶಿ ವಿಲ್‌ಫ್ರೆಡ್ ಡಿ’ಸೋಜ, 21 ಆಯೋಗಗಳ ಸಂಚಾಲಕ ನವೀನ್ ಬ್ರ್ಯಾಗ್ಸ್‌ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.