ಬಡಗನ್ನೂರು: ಬಡಗನ್ನೂರು ಗ್ರಾ.ಪಂ ವ್ಯಾಪ್ತಿಯ ಮೈಂದನಡ್ಕ ಕಾಲೋನಿಯಲ್ಲಿ ಮನೆಗೆ ಮರ ಬಿದ್ದು ಮನೆ ಜಖಂಗೊಂಡ ಘಟನೆ ವರದಿಯಾಗಿದೆ.

ಮೇ 24 ರಂದು ಸಂಜೆ ಸುರಿದ ಭಾರಿ ಮಳೆ ಮತ್ತು ಗಾಳಿಗೆ ಮೈಂದನಡ್ಕ ಕಾಲೋನಿ ಪ್ರದೇಶದ ಚೋಮ ರವರ ಮನೆಗೆ ದೊಡ್ಡ ಗಾತ್ರದ ಮರವೊಂದು ಉರುಳಿ ಬಿದ್ದು ಪೂರ್ತಿ ಮನೆ ಜಖಂಗೊಂಡಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮನೆಯೊಳಗಿದ್ದ ಅಡುಗೆ ಪಾತ್ರೆ ಸಾಮಾನುಗಳ ಮತ್ತು ಮನೆಯ ಮೇಲ್ಚಾವಣಿಗೆ ಹಾಕಿದ ಸಿಮೆಂಟ್ ಸೀಟ್ ಸಂಪೂರ್ಣ ಜಖಂಗೊಂಡು ಅಪಾರ ನಷ್ಟ ಸಂಭವಿಸಿದೆ. ಘಟನಾ ಸ್ಥಳಕ್ಕೆ ಬಡಗನ್ನೂರು ಗ್ರಾ.ಪಂ. ಸದಸ್ಯರಾದ ರವಿರಾಜ ರೖೆ ಸಜಂಕಾಡಿ, ಸಂತೋಷ ಅಳ್ವ ಗಿರಿಮನೆ, ಹಾಗೂ ಧರ್ಮೇಂದ್ರ ಕುಲಾಲ್ ಪದಡ್ಕ ಭೇಟಿ ನೀಡಿದರು.