ಪುಣಚ: ಪಂಡಿತಮೂಲೆ ರಾಮಣ್ಣ ಬಂಗೇರರವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ

0

ಪುಣಚ: ಇತ್ತೀಚೆಗೆ ನಿಧನರಾದ ಪುಣಚ ಗ್ರಾಮದ ನಿವಾಸಿ ಪ್ರಗತಿಪರ ಕೃಷಿಕ, ದೈವದ ಚಾಕರಿದಾರ ಪಂಡಿತಮೂಲೆ ರಾಮಣ್ಣ ಬಂಗೇರ ಅವರ ವೈಕುಂಠ ಸಮರಾಧನೆ ಹಾಗೂ ಶ್ರದ್ಧಾಂಜಲಿ ಕಾರ್ಯಕ್ರಮ ಪುಣಚ ಮಹಿಷಮರ್ದಿನಿ ದೇವಸ್ಥಾನದ ಅನ್ನಪೂರ್ಣ ಸಭಾಂಗಣದಲ್ಲಿ ಮೇ.25ರಂದು ನಡೆಯಿತು.


ಪುಣಚ ಗ್ರಾ.ಪಂ ಸದಸ್ಯ, ಮಾಜಿ ಅಧ್ಯಕ್ಷರು ಆಗಿರುವ ರಾಮಕೃಷ್ಣ ಮೂಡಂಬೈಲು ಮಾತನಾಡಿ ರಾಮಣ್ಣ ಬಂಗೇರ ರವರು ಸಾಮಾನ್ಯ ಕೃಷಿಕನಾಗಿ ದುಡಿದು ನಂತರದಲ್ಲಿ ಉತ್ತಮ ಪ್ರಗತಿಪರ ಕೃಷಿಕರಾಗಿ, ಶ್ರಮಜೀವಿಯಾಗಿ, ಆಪತ್ಬಾಂಧವನಾಗಿ ಎಲ್ಲರೊಂದಿಗೆ ಬೆರೆತು ಸಮಾಜದಲ್ಲಿ ಉತ್ತಮ ಗೌರವ ವ್ಯಕ್ತಿತ್ವಕ್ಕೆ ಪಾತ್ರರಾಗಿದ್ದರು. ಸರಳ ಜೀವನದೊಂದಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿತೈಷಿಯಾಗಿ ರಾಷ್ಟ್ರಭಕ್ತ, ದೈವಭಕ್ತರಾಗಿ ಸಂಘದ ತತ್ವ ಸಿದ್ಧಾಂತಗಳನ್ನು ತನ್ನ ಕುಟುಂಬ ಸಂಸಾರದಲ್ಲಿ ನಡೆಸಿಕೊಂಡು ಬಂದವರು. ಅತಿಥಿ ದೇವೋಭವ ಎನ್ನುವ ಅವರ ತತ್ವ, ಆದರ್ಶ ಬದುಕು ವ್ಯಕ್ತಿತ್ವ ಎಲ್ಲರಿಗೂ ಮಾದರಿಯಾಗಲಿ. ಅಗಲಿದ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನುಡಿ ನಮನ ಸಲ್ಲಿಸಿದರು. ಮೃತರ ಅಳಿಯ ಲಕ್ಷಣ ಎಸ್. ಪ್ರಾಸ್ತಾವಿಕವಾಗಿ ಮಾತನಾಡಿ ಮೃತರ ಜೀವನ ವ್ಯಕ್ತಿತ್ವದ ಬಗ್ಗೆ ತಿಳಿಸಿದರು.


ಪುಣಚ ದೇವಾಲಯದ ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಉದಯ ಕುಮಾರ್ ದಂಬೆ, ಸಮಿತಿ ಸದಸ್ಯರುಗಳು‌, ಸಂಘ ಸಂಸ್ಥೆಗಳ ಪ್ರಮುಖರು, ಜನ ಪ್ರತಿನಿಧಿಗಳು ಸೇರಿದಂತೆ ಕೆಲಿಂಜ ಮಡಿವಾಳಕೋಡಿ ಕುಟುಂಬಸ್ಥರು, ಸರವು ಸಾಲ್ಯಾನ್ ಕುಟುಂಬಸ್ಥರು, ಬಂಧುಗಳು, ಹಲವಾರು ಮಿತ್ರರು, ಹಿತೈಷಿಗಳು ಆಗಮಿಸಿ ಪುಷ್ಪಾರ್ಚನೆ ಮಾಡಿದರು. ಮೃತರ ಸಹೋದರರಾದ ಚನಿಯಪ್ಪ ಪಂಡಿತಮೂಲೆ, ವಿಶ್ವನಾಥ ಪಂಡಿತಮೂಲೆ, ರಾಮಣ್ಣ ಬಂಗೇರರವರ ಪತ್ನಿ ಜಾನಕಿ, ಪುತ್ರ ರೋಹಿತ್ ಕುಮಾರ್, ಸೊಸೆ ವಾಣಿಶ್ರೀ, ಪುತ್ರಿಯರಾದ ರಾಜೇಶ್ವರಿ, ಹೇಮಾಮಾಲಿನಿ, ಅಳಿಯ ಪುಷ್ಪರಾಜ್, ಮೊಮ್ಮಕ್ಕಳಾದ ಸಂಕೇತ್, ಲಿಖಿತ್, ವೈಭವ್, ಪ್ರಣಾಮ್, ಪ್ರಜೀತ್ ಹೆಚ್.ಎಸ್, ಪ್ರತೀತ್ ಹೆಚ್.ಎಸ್. ಉಪಸ್ಥಿತರಿದ್ದರು.


ಮೌನ‌ ಪ್ರಾರ್ಥನೆ, ಪುಷ್ಪಾರ್ಚನೆ
ಅಗಲಿದ ಪುಣಚ ಪಂಡಿತಮೂಲೆ ರಾಮಣ್ಣ ಬಂಗೇರ ರವರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯುವ ಮೂಲಕ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು. 

LEAVE A REPLY

Please enter your comment!
Please enter your name here