ಮಾಣಿ: ರಸ್ತೆ ಬದಿಯ ಚರಂಡಿಗಿಳಿದ ಬಸ್ಸು – ಕೆಲವರಿಗೆ ಗಾಯ

0

ವಿಟ್ಲ :ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ಚರಂಡಿಗೆ ಬಿದ್ದ ಘಟನೆ ಮಾಣಿ ಸಮೀಪದ ಸಮುದ್ರ ಹೊಟೇಲ್ ಸಮೀಪ ನಡೆದಿದೆ.

ಮಂಗಳೂರಿನಿಂದ ಪುತ್ತೂರಿಗೆ ಬರುತ್ತಿದ್ದ ಖಾಸಗಿ ಬಸ್ಸು, ಮಾಣಿ – ಕಲ್ಲಡ್ಕ ರಸ್ತೆಯ ಸಮುದ್ರ ಹೊಟೇಲ್ ಸಮೀಪ ಅಪಘಾತಕ್ಕೀಡಾಗಿದೆ. ವಿಪರೀತ ಮಳೆ ಸುರಿಯುತ್ತಿದ್ದುದರಿಂದ ನಿಯಂತ್ರಣ ಕಳೆದುಕೊಂಡ ಬಸ್ಸು ರಸ್ತೆ ಬದಿಯ ಚರಂಡಿಗೆ ಇಳಿದಿದೆ. ಘಟನೆಯಿಂದಾಗಿ ಕೆಲವರಿಗೆ ಗಾಯವಾಗಿದ್ದು, ಸ್ಥಳೀಯರು ಸ್ಥಳಕ್ಕೆ ಆಗಮಿಸಿ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

LEAVE A REPLY

Please enter your comment!
Please enter your name here