ಮಂಗಳೂರು ಸಾವಯವ ಕೃಷಿಕ ಗ್ರಾಹಕ ಬಳಗ ವತಿಯಿಂದ ಹಲಸು ಹಬ್ಬ

0

ಹಲಸು ಮತ್ತು ಸಾವಯವ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ

ಪುತ್ತೂರು: ಸಾವಯವ ಕೃಷಿಕ ಗ್ರಾಹಕ ಬಳಗ ಮಂಗಳೂರು ವತಿಯಿಂದ 8 ನೇಯ ವರುಷದ ‘ಹಲಸು ಹಬ್ಬ’ – ಹಲಸು ಮತ್ತು ಸಾವಯವ ಉತ್ಪನ್ನ ಗಳ ಪ್ರದರ್ಶನ ಮತ್ತು ಮಾರಾಟ ಮೇಳ ಮೇ. 24 ಮತ್ತು 25 ರಂದು ನಡೆಯಿತು.

ರಾಜ್ಯದಾದ್ಯಂತ ಬೇರೆ ಬೇರೆ ಜಿಲ್ಲೆಗಳಿಂದ ಹಲಸು ಬೆಳೆಗಾರರು , ಹಲಸು ತಿಂಡಿ ತಿನಿಸುಗಳ ತಯಾರಕರು,ಸಾವಯವ ಉತ್ಪನ್ನಗಳ ಕೃಷಿಕರು , ಹಲಸು ಮೌಲ್ಯವರ್ಧಿತ ಉತ್ಪನ್ನ ಗಳ ಸಾಧಾರಣ 60 ಸಂಖ್ಯೆಗೂ ಮಿಕ್ಕಿ ರೈತರು ಭಾಗವಹಿಸಿದ್ದರು .

ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಜಯಲಕ್ಷ್ಮಿ ಉದ್ಘಾಟಿಸಿ ಮಾತನಾಡಿ, .ಸಾವಯವ ಕೃಷಿಯ ಅಗತ್ಯತೆ ಮತ್ತು ಅನಿವಾರ್ಯತೆ ಬಗ್ಗೆ ತಿಳಿ ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾವಯವ ಕೃಷಿಕ ಗ್ರಾಹಕ ಬಳಗದ ಅಧ್ಯಕ್ಷ ಜಿ.ಆರ್ ಪ್ರಸಾದ್ ರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಖ್ಯಾತ ಚಲನಚಿತ್ರ ಹಾಗೂ ನಾಟಕ ಕಲಾವಿದ ಸ್ವರಾಜ್ ಶೆಟ್ಟಿಯವರು ಇಂಥಹ ಕಾರ್ಯಕ್ರಮಗಳು ನಮ್ಮ ಪಾರಂಪರಿಕ ,ಆರೋಗ್ಯಪೂರ್ಣ ಜೀವನಕ್ಕೆ ಪೂರಕವಾಗಿ ಉತ್ತೇಜನ ನೀಡುತ್ತದೆ ಎಂದರು.

ಇನ್ನೋರ್ವ ಮುಖ್ಯ ಅತಿಥಿ ದೇಸಿ ಭತ್ತ ಬೀಜ ತಳಿ ಸಂರಕ್ಷಕಿ ಮತ್ತು ಸಾವಯವ ಕೃಷಿ ಯಲ್ಲಿ ತೊಡಗಿಸಿಕೊಂಡಿರುವ ಅಸ್ಮ್ ಬಾನು, ತಾನು ಬೆಳೆಸಿ ಸಂರಕ್ಷಿಸಿ ಕೊಂಡು ಬರುತ್ತಿರುವ ದೇಸಿ ಭತ್ತ ತಳಿ ಬಗ್ಗೆ ಹೇಳಿ ಸಾಧನೆಗೆ ಮನಸ್ಸು , ದೃಡ ಸಂಕಲ್ಪ , ಸತತ ಪರಿಶ್ರಮ ಅಗತ್ಯ ಎಂದರು. ಹಲಸು ತಳಿ ಸಂಶೋಧಕ ಮತ್ತು ಸಾವಯವ ಕೃಷಿಕ ಗಾಬ್ರಿಯಲ್ ಸ್ತಾನಿ ವೇಗಸ್ ಅವರ ಸಾಧನೆಯನ್ನು ಗುರುತಿಸಿ ಗೌರವ ಸನ್ಮಾನ ಮಾಡಲಾಯಿತು.

ಬಳಗದ ಗೌರವ ಮಾರ್ಗದರ್ಶಕ ಪ್ರದೀಪ್ ಕುಮಾರ್ ಕಲ್ಕೂರ ಮತ್ತು ಗೌರವ ಅಧ್ಯಕ್ಷ ಅಡ್ರೂರು ಕೃಷ್ಣರಾವ್ ಅವರು ಉಪಸ್ಥಿತರಿದ್ದರು.


ಗ್ರಾಹಕರಿಗೆ ವಿವಿಧ ರೀತಿಯ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು . ಬಹುಮಾನ ವಿಜೇತರನ್ನು ಪ್ರಾಯೋಜಕರಾದ ‘ನಿತ್ಯ ಚಪಾತಿ’ ಬ್ರಾಂಡಿನ ಆಹಾರ ಸಂಸ್ಕರಣೆ ಘಟಕದ ಮಾಲಕ ರಾಧಾಕೃಷ್ಣ, ಮರಿಕೆ ಐಸ್ ಕ್ರೀಮ್ ನ ಸುಹಾಸ್, ಅಭಯ ನ್ಯಾಚುರಲ್ ಮೈಸೂರು ಇವರ ಸಮ್ಮುಖದಲ್ಲಿ ಬಹುಮಾನ ನೀಡಿ ಅಭಿನಂದಿಸಲಾಯಿತು.

ಮಕ್ಕಳಿಗಾಗಿ ಪ್ರಬಂಧ ಸ್ಪರ್ಧೆ, ಭಾಷಣ ಸ್ಪರ್ಧೆ, ಚಿತ್ರ ಬಿಡಿಸುವ ಸ್ಪರ್ಧೆ ಆಯೋಜನೆಗೊಂಡಿತ್ತು. ಎಲ್ಲದರಲ್ಲೂ ಹಲಸು ಮುಖ್ಯ ವಿಷಯವಾಗಿತ್ತು.ಹಲಸು ಎಲೆ ಮೂಡೆ ಕಟ್ಟುವುದು, ಹಲಸು ಸೋಳೆ ಬಿಡಿಸುವುದು, ಹಲಸು ಭಾರ ಎತ್ತುವ ಸ್ಪರ್ಧೆ ಇತ್ಯಾದಿ ಬಹಳ ಯಶಸ್ವಿಯಾಗಿ ಮೂಡಿಬಂತು.

LEAVE A REPLY

Please enter your comment!
Please enter your name here