
ಪುತ್ತೂರು: ಕೆಯ್ಯೂರು ಗ್ರಾಮದ ಬೈರೆತ್ತಿಕೆರೆ ಎಂಬಲ್ಲಿ ವಾಸದ ಮನೆಗೆ ಮರವೊಂದು ಬಿದ್ದು ಅಪಾರ ನಷ್ಟ ಉಂಟಾದ ಘಟನೆ ಮೇ.26 ರಂದು ರಾತ್ರಿ ನಡೆದಿದೆ. ಬೈರೆತ್ತಿಕೆರೆ ರತ್ನಾವತಿ ನಾಯ್ಕ್ ಎಂಬವರ ವಾಸದ ಮನೆಗೆ ಮನೆಯ ಮಕ್ಕದಲ್ಲಿದ್ದ ಸಾಗುವಾನಿ ಮರವೊಂದು ಬಿದ್ದು ಮನೆ ಸಂಪೂರ್ಣ ಹಾನಿಗೀಡಾಗಿದೆ. ರಾತ್ರಿ ವೇಳೆ ಮರ ಬಿದ್ದಿದ್ದು ಈ ವೇಳೆ ಮನೆಯಲ್ಲಿ ರತ್ನಾವತಿ ಹಾಗೂ ಅವರ ಇಬ್ಬರು ಮಕ್ಕಳು ವಾಸವಿದ್ದರು ಆದರೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಘಟನೆಯಿಂದ ಅಪಾರ ನಷ್ಟ ಉಂಟಾಗಿದೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಕೆಯ್ಯೂರು ಗ್ರಾಮ ಪಂಚಾಯತ್ ಅಧ್ಯಕ್ಷ ಶರತ್ ಕುಮಾರ್ ಮಾಡಾವು, ಪಂಚಾಯತ್ ಅಭಿವೃದ್ದಿ ಅಧಿಕಾರಿ ನಮಿತಾ ಎ.ಕೆ, ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ, ಸದಸ್ಯರುಗಳಾದ ವಿಜಯ ಕುಮಾರ್, ತಾರಾನಾಥ ಕಂಪ, ಸುಭಾಷಿಣಿ, ಗ್ರಾಮ ಸಹಾಯಕ ನಾರಾಯಣ್‌ರವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಇದಲ್ಲದೆ ಗ್ರಾಮದ ಕಣಿಯಾರು ಎಂಬಲ್ಲಿ ಪಾರ್ಥಿವ ಗೌಡ ಎಂಬವರಿಗೆ ಸೇರಿದ ಕೊಟ್ಟಿಗೆಗೆ ಹಾನಿಯುಂಟಾಗಿರುವ ಬಗ್ಗೆ ವರದಿಯಾಗಿದೆ.