ಪುತ್ತೂರು: ಇಲ್ಲಿನ ಬೊಳುವಾರಿನಲ್ಲಿ ಮೈ ಬೇಬಿ ಶಾಪ್ ಲಿಟ್ಲ್ ವನ್ಸ್ ಲಿಟ್ಲ್ ವರ್ಲ್ಡ್ ಮೇ.26ರಂದು ಶುಭಾರಂಭಗೊಂಡಿತು.
ಶಾಸಕ ಅಶೋಕ್ ಕುಮಾರ್ ರೈ ಯವರು ಉದ್ಘಾಟನೆ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ಸಬ್ಇನ್ಸ್ಪೆಕ್ಟರ್ ಆಂಜನೇಯ ರೆಡ್ಡಿ ಶುಭಹಾರೈಸಿದರು. ಮಾಲಕ ನೌಶದ್ರವರು ಅತಿಥಿಗಳನ್ನು ಸ್ವಾಗತಿಸಿ, ಸತ್ಕರಿಸಿ, ಆರು ವರ್ಷದ ಒಳಗಿನ ಪುಟಾಣಿ ಮಕ್ಕಳಿಗೆ ದಿನನಿತ್ಯದ ಬಳಕೆಗೆ ಬೇಕಾದ ಎಲ್ಲಾ ಬಗೆಯ ವಸ್ತುಗಳು ಇದೀಗ ಗ್ರಾಹಕರಿಗೆ ಒಂದೇ ಕಡೆಯಲ್ಲಿ ಕೈ ಗೆಟಕುವ ಬೆಲೆಗೆ ಲಭ್ಯವಾಗಲಿದೆ.

ಮಕ್ಕಳಿಗೆ ಬೇಕಾದ ಮುದ್ದಾದ ಬಟ್ಟೆಗಳು, ಕಾಸ್ಮೆಟಿಕ್ಸ್, ಡೈಪರ್ಸ್, ಚಪ್ಪಲಿ, ಆಟಿಕೆ, ಎಲೆಕ್ಟ್ರಾನಿಕ್ಸ್ ಆಟಿಕೆಗಳು, ಹೆಲ್ತ್ ಕೇರ್ ಪ್ರಾಡಕ್ಟ್ ಹಾಗೂ ಇನ್ನಿತರ ವಸ್ತಗಳು ಇಲ್ಲಿ ಲಭ್ಯವಿದೆ. ಮಕ್ಕಳಿಗೆ ಬೇಕಾದ ವಸ್ತುಗಳ ಖರೀದಿಗಾಗಿ ಹತ್ತಾರು ಕಡೆ ಅಲೆದಾಟಕ್ಕೆ ಬ್ರೇಕ್ ಹಾಕಿ, ಒಂದೇ ಸೂರಿನಡಿ ಮಕ್ಕಳಿಗೆ ಬೇಕಾದ ಎಲ್ಲಾ ವಸ್ತುಗಳನ್ನು’ಮೈ ಬೇಬಿ ಶಾಪ್’ನಲ್ಲಿ ಖರೀದಿಸಿ ಆನಂದಿಸಿ ಎಂದು ತಿಳಿಸಿದರು.