ಈಶ್ವರಮಂಗಲ: ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆ ಈಶ್ವರಮಂಗಲದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ಜರುಗಿತು.
ಸಂಸ್ಥೆಯ ಸಂಚಾಲಕ ಶಿವರಾಮ.ಪಿ ಹಾಗೂ ಅಧ್ಯಕ್ಷ ನನ್ಯ ಅಚ್ಚುತ ಮೂಡೆತಾಯ ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಶಾಲಾ ಮುಖ್ಯ ಶಿಕ್ಷಕಿ ಸೌಮ್ಯಾ.ಎ. ಸ್ವಾಗತಿಸಿದರು. ಪ್ರಾಂಶುಪಾಲರಾದ ಶ್ಯಾಮಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು.ನಂತರ ಶಾಲಾ ಹಂತದಲ್ಲಿ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಾದ ಬಿಂಧ್ಯಾ (610) ಚಿನ್ಮಯ್( 609) ಸೂರಜ್( 602) ರನ್ನು ಶಾಲು ಹೊದಿಸಿ , ಸ್ಮರಣಿಕೆ ನೀಡಿ ಗೌರವಿಸಲಾಯಿತು. ಡಿಸ್ಟಿಂಕ್ಷನ್ ಅಂಕಗಳೊಂದಿಗೆ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಉಳಿದೆಲ್ಲಾ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ವಿಷಯವಾರು ನೂರಕ್ಕೆ ನೂರು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಅನುಶ್ರೀ ವಿದ್ಯಾರ್ಥಿಗಳ ಹೆಸರನ್ನು ವಾಚಿಸಿದರು. ವಿದ್ಯಾರ್ಥಿಗಳಾದ ಬಿಂಧ್ಯಾ , ಚಿನ್ಮಯ್,ಸುಧನ್ವ , ಅನಿಸಿಕೆ ವ್ಯಕ್ತಪಡಿಸಿದರು. ಶಿಕ್ಷಕಿ ಶ್ವೇತ.ಕೆ.ಎನ್ ರವರು ಶುಭಹಾರೈಸಿದರು. ಶಿವರಾಮ .ಪಿ ವಿದ್ಯಾರ್ಥಿಗಳು ಪರೀಕ್ಷಾ ಸಂದರ್ಭದಲ್ಲಿ ಜಾಗರೂಕತೆಯಿಂದ ಕಲಿತಾಗ ಯಶಸ್ಸು ಖಂಡಿತಾ ಸಾಧ್ಯ ಎಂದರು. 10ನೇ ತರಗತಿಯ ವಿದ್ಯಾರ್ಥಿಗಳು ಸಂಗ್ರಹಿಸಿದ ಮೊತ್ತವನ್ನು ಕ್ರೀಡಾ ಸಂಘಕ್ಕೆ ಪ್ರಾಂಶುಪಾಲರ ಮೂಲಕ ನೀಡಿದರು. ಅಧ್ಯಕ್ಷರಾದ ಅಚ್ಯುತಮೂಡೆತ್ತಾಯರು ಶಿಕ್ಷಣ ಕೇವಲ ಅಂಕ ಗಳಿಕೆಗೆ ಮಾತ್ರ ಮುಖ್ಯವಲ್ಲ,ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಬೆಳೆಯಲು ಕಲಿಯಬೇಕು. ಮುಂದೆ ಉತ್ತಮ ಅಂಕಗಳನ್ನು ಪಡೆದು ಸಮಾಜಕ್ಕೆ ಕೀರ್ತಿ ಹರಡಿಸಿ ಎಂದರು. ಶಿಕ್ಷಕಿ ರಾಜಶ್ರೀ ಪ್ರಾರ್ಥಿಸಿದರು ಜಯಸ್ವಿನಿ ಧನ್ಯವಾದ ಮಾಡಿದರು. ಸೌಮ್ಯಾ .ಎಂ.ನಿರೂಪಿಸಿದರು.