ಮಂಗಳೂರು ಆಕಾಶವಾಣಿ ಉದ್ಯೋಗಿ ರಾಮ ನಾಯ್ಕ ಸೇವಾ ನಿವೃತ್ತಿ

0

ಪುತ್ತೂರು: ಮಂಗಳೂರು ಆಕಾಶವಾಣಿಯಲ್ಲಿ ಉದ್ಯೋಗಿಯಾಗಿರುವ ರಾಮ ನಾಯ್ಕರವರು ಆಕಾಶವಾಣಿಯಲ್ಲಿ ಸುಧೀರ್ಘ 36 ವರ್ಷಗಳ ಸೇವೆ ಸಲ್ಲಿಸಿ ಮೇ 30ರಂದು ನಿವೃತ್ತಿಯಾಗಿದ್ದಾರೆ.

ಸುಳ್ಯ ತಾಲೂಕು ಅಲೆಟ್ಟಿ ಗ್ರಾಮದ ಬಡ್ಡಡ್ಕ ನಾರ್ಣು ನಾಯ್ಕ ಮತ್ತು ದೇವಕಿ ದಂಪತಿಯ ಪುತ್ರರಾಗಿರುವ ಇವರು 1-8-1989 ರಂದು ಧಾರವಾಡ ಆಕಾಶವಾಣಿ ಕೇಂದ್ರದಲ್ಲಿ ವೃತ್ತಿಯನ್ನು ಆರಂಭಿಸಿ ನಂತರ ಮಡಿಕೇರಿ ಆಕಾಶವಾಣಿ ಕೇಂದ್ರದಲ್ಲಿ ಸೇವೆ ಸಲ್ಲಿಸಿ 2022 ರಿಂದ ಮಂಗಳೂರು ಆಕಾಶವಾಣಿ ಕೇಂದ್ರದಲ್ಲಿ ಸೇವೆ ಸಲ್ಲಿಸಿ 30-5-2025 ರಂದು ಸೇವೆಯಿಂದ ನಿವೃತ್ತಿಗೊಂಡಿದ್ದಾರೆ. ಇವರು ಪತ್ನಿ ಸರೋಜಿನಿ ಮತ್ತು ಮಕ್ಕಳಾದ ಮಿಥುನ್ ಮತ್ತು ದೀಪ್ತಿ ಇವರೊಂದಿಗೆ ಪುಣಚ ಗ್ರಾಮದ ಕೂರೇಲು, ಅಲಖ ಎಂಬಲ್ಲಿ ವಾಸಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here