ವಾಣಿಜ್ಯ ಪದವಿಯ ಜತೆಗೆ ಉದ್ಯೋಗಕೇಂದ್ರಿತ ಪರೀಕ್ಷೆಗಳು
ಪಿಯು ನಂತರ ಪದವಿ ಓದುವ ವಿದ್ಯಾರ್ಥಿಗಳಿಗೆ ವಾಣಿಜ್ಯ ಕ್ಷೇತ್ರ ಒಂದು ವರದಾನವೆಂಬಂತೆ ಕಾಣಿಸಿಕೊಳ್ಳುತ್ತಿದೆ. ಹಿಂದಿನ ದಿನಮಾನಗಳಲ್ಲಿ ಪದವಿ ಹಂತದಲ್ಲಿ ವಿದ್ಯಾರ್ಥಿಗಳಿಗೆ ಬಹುತೇಕ ಬಿ.ಕಾಂ ಅಷ್ಟನ್ನೇ ಓದುವ ಅವಕಾಶ ದೊರಕುತ್ತಿದ್ದರೆ ಇಂದು ಬಿ.ಕಾಂ ಓದುವ ವಿದ್ಯಾರ್ಥಿಗಳಿಗೆ ಪದವಿಯಷ್ಟೇ ಅಲ್ಲದೆ ತಮ್ಮ ಮುಂದಿನ ಔದ್ಯೋಗಿಕ ಬದುಕನ್ನು ಮತ್ತಷ್ಟು ಉತ್ಕೃಷ್ಟ ರೀತಿಯಲ್ಲಿ ರೂಪಿಸಿಕೊಳ್ಳಬಹುದಾದ ಹತ್ತಾರು ಅವಕಾಶಗಳು ತೆರೆದುಕೊಳ್ಳುತ್ತಿವೆ. ಆದರೆ ಈ ದಿನಗಳಲ್ಲಿ ವಾಣಿಜ್ಯ ಪದವಿ ಓದುವ ವಿದ್ಯಾರ್ಥಿಗಳಿಗೆ ಯಾವೆಲ್ಲ ಅವಕಾಶಗಳಿದೆ ಎಂಬುದನ್ನೇ ಹಲವಾರು ವಿದ್ಯಾರ್ಥಿಗಳು ಅರಿತಿಲ್ಲ. ಈ ಹಿನ್ನೆಲೆಯಲ್ಲಿ ಈ ಕೆಳಗಿನ ವಿಷಯಗಳೆಡೆಗೆ ಗಮನ ಹರಿಸಬಹುದು.
ಕಾಸ್ಟ್ ಅಕೌಂಟೆಂಟ್ :
ಬಿ.ಕಾಂ ಪದವಿ ಓದುತ್ತಿರುವ ವಿದ್ಯಾರ್ಥಿಗಳು Institute of Cost Accountants of India ಕ್ಕೆ ದಾಖಲಾತಿ ಹೊಂದುವ ಮೂಲಕ ಬಿ.ಕಾಂ. ಪದವಿ ಜತೆಜತೆಗೆ ಕಾಸ್ಟ್ ಅಕೌಂಟೆಂಟ್ ಪರೀಕ್ಷೆಗಳನ್ನು ಎದುರಿಸುವುದಕ್ಕೆ ಸಾಧ್ಯ. ಈ ಹುದ್ದೆಗೆ ಫೌಂಡೇಶನ್ ಹಂತ, ಇಂಟರ್ಮೀಡಿಯೇಟ್ ಹಂತ ಹಾಗೂ ಅಂತಿಮ ಹಂತ ಎಂಬ ಮೂರು ಹಂತದ ಪರೀಕ್ಷೆಗಳಿದ್ದು ಬಿ.ಕಾಂ ಪೂರೈಸುವ ಹೊತ್ತಿಗೆ ಈ ಪರೀಕ್ಷೆಗಳನ್ನೂ ಪೂರೈಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಈ ಪರೀಕ್ಷೆಯ ಅಂತಿಮ ಹಂತದಲ್ಲಿ ತೇರ್ಗಡೆಯಾಗುವವರು ಕಾಸ್ಟ್ ಅಕೌಂಟೆಂಟ್, ಮ್ಯಾನೇಜ್ಮೆಂಟ್ ಅಕೌಂಟೆಂಟ್ ಅಥವ ಲೆಕ್ಕ ಪರಿಶೋಧನಾ ಕಾರ್ಯಕ್ಕೆ ನಿಯುಕ್ತಿಗೊಳ್ಳುತ್ತಾರೆ.
ಕಂಪೆನಿ ಸೆಕ್ರೆಟರಿ :
ಇತ್ತೀಚೆಗಿನ ವರ್ಷಗಳಲ್ಲಿ ಯುವಸಮುದಾಯವನ್ನು ಸೆಳೆಯುತ್ತಿರುವ ವಾಣಿಜ್ಯ ರಂಗದ ಉದ್ಯೋಗಗಳಲ್ಲಿ ಕಂಪೆನಿ ಸೆಕ್ರೆಟರಿ ಹುದ್ದೆಯೂ ಒಂದು. ಇದರಲ್ಲಿಯೂ ಮೂರು ಹಂತಗಳಿವೆ. ಸಿ.ಎಸ್. ಎಗ್ಸೆಕ್ಯುಟಿವ್ ಪ್ರೋಗ್ರಾಂ, ಸಿ.ಎಸ್. ಪ್ರೊಫೆಷನಲ್ ಪ್ರೋಗ್ರಾಂ ಹಾಗೂ ಕಂಪ್ಲೀಟ್ ಪ್ರಿ ಮೆಂಬರ್ಶಿಪ್ ಟ್ರೈನಿಂಗ್ ಹಂತಗಳನ್ನು ಪೂರೈಸುವ ವಾಣಿಜ್ಯ ಪದವಿಯ ವಿದ್ಯಾರ್ಥಿಗಳು ಸರ್ಕಾರಿ ವಾಣಿಜ್ಯ ವಿಭಾಗಗಳಲ್ಲಿ, ಸ್ಟಾಕ್ ಎಕ್ಸ್ಚೇಂಜ್ ವಿಭಾಗಗಳಲ್ಲಿ, ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ, ವಿವಿಧ ಕಂಪೆನಿಗಳಲ್ಲಿ ಉದ್ಯೋಗಿಗಳೆನಿಸುತ್ತಾರೆ.
ಮ್ಯಾನೇಜ್ಮೆಂಟ್ ಅಕೌಂಟೆಂಟ್:
: Institute of Management Accountant ಸಂಸ್ಥೆ ನಡೆಸುವ ಏಕ ಹಂತದ ಸರ್ಟಿಫೈಡ್ ಮ್ಯಾನೇಜ್ಮೆಂಟ್ ಅಕೌಂಟೆಂಟ್ (ಸಿಎಂಎ) ಪರೀಕ್ಷೆಯಲ್ಲಿ ತೇರ್ಗಡೆಯಾದರೆ ದೇಶವಲ್ಲದೆ ವಿದೇಶಗಳಲ್ಲೂ ಸಾಕಷ್ಟು ಉದ್ಯೋಗಾವಕಾಶಗಳು ಲಭ್ಯ ಇವೆ.
ಸರ್ಟಿಫೈಡ್ ಪಬ್ಲಿಕ್ ಅಕೌಂಟೆಂಟ್ :
ಮೇಲೆ ಉಲ್ಲೇಖಿಸಿದ ಮ್ಯಾನೇಜ್ಮೆಂಟ್ ಅಕೌಂಟೆಂಟ್ ರೀತಿಯಲ್ಲೇ ದೇಶ – ವಿದೇಶಗಳೆರಡೂ ಕಡೆಗಳಲ್ಲಿ ಅಪಾರ ಅವಕಾಶ ಒದಗಿಸಿಕೊಡುವ ಮತ್ತೊಂದು ಉದ್ಯೋಗಾವಕಾಶ ಸರ್ಟಿಫೈಡ್ ಪಬ್ಲಿಕ್ ಅಕೌಂಟೆಂಟ್. ವಾಣಿಜ್ಯ, ವಿದೇಶೀ ಸೇವೆಗಳು, ಆರ್ಥಿಕ ಸಲಹೆಗಾರ ಹುದ್ದೆಗಳು ಈ ಪರೀಕ್ಷೆ ತೇರ್ಗಡೆಯಾದವರಿಗೆ ಲಭ್ಯ. ಇದಕ್ಕೆ ಎರಡು ಹಂತಗಳಲ್ಲಿ ಪರೀಕ್ಷೆ ನಡೆಯುತ್ತದೆ.
ಚಾರ್ಟರ್ಡ್ ಅಕೌಂಟೆಂಟ್ :
ಬಿ.ಕಾಂ. ಜತೆಗೆ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳು ಲಕ್ಷ್ಯ ಇರಿಸುವ ಗುರಿ ಚಾರ್ಟರ್ಡ್ ಅಕೌಂಟೆಂಟ್ (ಸಿ.ಎ.).The Institute of Chartered Accountants of India ಸಂಸ್ಥೆಯವರು ನಡೆಸುವ ಸಿ.ಎ – ಫೌಂಡೇಶನ್, ಐಪಿಸಿಸಿ, ಆರ್ಟಿಕಲ್ಶಿಪ್ ಹಾಗೂ ಕೊನೆಯದಾಗಿ ಫೈನಲ್ಸ್ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರೈಸುವ ಅಭ್ಯರ್ಥಿಗಳು ಸಿ.ಎ. ಆಗುವುದಕ್ಕೆ ಅರ್ಹರು.
ಡಿಪ್ಲಮೋ ಇನ್ ಕಂಪ್ಯೂಟರ್ ಅಪ್ಲಿಕೇಶನ್ ಅಂಡ್ ಅಕೌಂಟಿಂಗ್(ಡಿಸಿಎಎ) :
ಬಿ.ಕಾಂ. ಪದವಿ ಓದುತ್ತಿರುವಾಗಲೇ ಆಸಕ್ತ ವಿದ್ಯಾರ್ಥಿಗಳು ಡಿಪ್ಲಮೋ ಇನ್ ಕಂಪ್ಯೂಟರ್ ಅಪ್ಲಿಕೇಶನ್ ಅಂಡ್ ಅಕೌಂಟಿಂಗ್ ಅನ್ನು ಪೂರೈಸಿಕೊಳ್ಳಬಹುದು. ಇದೊಂದು ವೃತ್ತಿಪರ ಡಿಪ್ಲಮೋ ಕೋರ್ಸ್ ಆಗಿದ್ದು, ಬಿ.ಕಾಂ. ಪದವಿ ಜತೆ ಈ ಡಿಪ್ಲಮೋ ಪೂರೈಸಿದವರಿಗೆ ಅಪಾರ ಬೇಡಿಕೆಗಳಿವೆ. ಸ್ವಂತ ಉದ್ಯಮ, ಇ-ಕಾಮರ್ಸ್, ಡಿಜಿಟಲ್ ಮಾರ್ಕೆಟಿಂಗ್, ಕ್ಲೌಡ್ ಕಂಪ್ಯೂಟಿಂಗ್, ಬ್ಯಾಂಕಿಂಗ್ ಹೀಗೆ ನಾನಾ ಕಡೆಗಳಲ್ಲಿ ಈ ಡಿಪ್ಲಮೋ ಪೂರೈಸಿದವರಿಗೆ ಅವಕಾಶಗಳು ಲಭ್ಯವಾಗುತ್ತವೆ. ಇದಕ್ಕೆ ಕೇವಲ ಒಂದು ಹಂತದ ಪರೀಕ್ಷೆಯಷ್ಟೇ ನಡೆಯುತ್ತದೆ.
ಐಬಿಪಿಎಸ್ (ಬ್ಯಾಂಕಿಂಗ್) :
ಬ್ಯಾಂಕ್ ಉದ್ಯೋಗಿಯಾಗಬೇಕೆನ್ನುವುದು ಅನೇಕರ ಕನಸು. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಹೆಚ್ಚಿನ ಬ್ಯಾಂಕ್ಗಳು ತಾವೇ ಸ್ವತಃ ಪರೀಕ್ಷೆ ನಡೆಸುವ ಬದಲು Institute of Banking Personnel Selection (IBPS) ಸಂಸ್ಥೆಯವರು ನಡೆಸುವ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವ ಅಭ್ಯರ್ಥಿಗಳನ್ನು ನೇರವಾಗಿ ಸಂದರ್ಶನದ ಹಂತಕ್ಕೆ ಆಯ್ಕೆ ಮಾಡುತ್ತಿದ್ದಾರೆ. ಹಾಗಾಗಿ ಐಬಿಪಿಎಸ್ ಪರೀಕ್ಷೆ ತೇರ್ಗಡೆಯಾಗುವುದು ಅತ್ಯಂತ ಅಗತ್ಯ. ಬಿ.ಕಾಂ. ಓದುತ್ತಲೇ ಈ ಪರೀಕ್ಷೆಗೆ ಸಿದ್ಧವಾದಲ್ಲಿ ಬ್ಯಾಂಕಿಂಗ್ ಉದ್ಯೋಗವನ್ನು ಸುಲಭವಾಗಿ ತಮ್ಮದಾಗಿಸಿಕೊಳ್ಳುವುದಕ್ಕೆ ಸಾಧ್ಯ.
ಸ್ನಾತಕೋತ್ತರ ಪದವಿ :
ಬಿ.ಕಾಂ ಪೂರೈಸಿದ ನಂತರ ಸ್ನಾತಕೋತ್ತರ ಪದವಿಗಳೆಡೆಗೂ ವಿದ್ಯಾರ್ಥಿಗಳು ಗಮನ ಹರಿಸಬಹುದು. ಅಕಸ್ಮಾತ್ ಬಿ.ಕಾಂ ಹಂತದಲ್ಲಿ ಮೇಲಿನ ಉದ್ಯೋಗಾವಕಾಶಗಳನ್ನು ತಮ್ಮದಾಗಿಸಿಕೊಳ್ಳಲು ಅಸಾಧ್ಯವಾದವರು ಸ್ನಾತಕೋತ್ತರ ಪದವಿಗಳಾದ ಎಂ.ಕಾಂ, ಎಂ.ಬಿ.ಎ. ಮೊದಲಾದವುಗಳನ್ನು ಅಧ್ಯಯನ ನಡೆಸುತ್ತ ಮೇಲಿನ ಪರೀಕ್ಷೆಗಳಲ್ಲಿ ಮರಳಿ ತೇರ್ಗಡೆಯಾಗುವ ಪ್ರಯತ್ನ ಮುಂದುವರೆಸಬಹುದು.
ವಿದ್ಯಾರ್ಥಿಗಳೇ ಗಮನಿಸಿ :
ಕೇವಲ ಬಿ.ಕಾಂ. ಓದುವುದರಿಂದ ನಿಗದಿತ ಉದ್ಯೋಗಳಿಗಷ್ಟೇ ಅರ್ಹರಾಗಬಹುದು. ಆದರೆ ಬಿ.ಕಾಂ. ಜತೆಗೆ ಮೇಲೆ ಉಲ್ಲೇಖಿಸಿದ ಉದ್ಯೋಗದಾತ ಪರೀಕ್ಷೆಗಳನ್ನು ತೇರ್ಗಡೆಯಾದರೆ ವೇತನ, ಹುದ್ದೆ, ಅವಕಾಶಗಳೆಲ್ಲವೂ ಅತ್ಯುತ್ಕೃಷ್ಟ ಮಾದರಿಯಲ್ಲಿರುತ್ತವೆ ಎಂಬುದು ಗಮನೀಯ. ಹಾಗಾಗಿ ಕೇವಲ ಬಿ.ಕಾಂ ಮಾಡುತ್ತೇನೆಂದು ಅಡಿಯಿಡುವ ಮುನ್ನ ಬಿ.ಕಾಂ. ಜತೆಗೆ ಇಂತಹ ಪರೀಕ್ಷೆಗಳನ್ನು ತೇರ್ಗಡೆಯಾಗಬಹುದೇ ಎಂದು ಯೋಚಿಸುವುದು ಅತ್ಯಗತ್ಯ.
ಕೋಚಿಂಗ್ ಮೂಲಕ ಸುಲಭ ಸಾಧನೆ:
ಮೇಲೆ ಉಲ್ಲೇಖಿಸಿದಂತಹ ಪರೀಕ್ಷೆಗಳನ್ನು ತೇರ್ಗಡೆ ಹೊಂದುವಲ್ಲಿ ಸರಿಯಾದ ತರಬೇತಿ ವಿದ್ಯಾರ್ಥಿಗಳಿಗೆ ಲಭ್ಯವಾಗಬೇಕಾದದ್ದು ಅತ್ಯಂತ ಅಗತ್ಯ. ಆದರೆ ಮೇಲಿನ ಪರೀಕ್ಷೆಗಳಿಗೆ ತರಬೇತಿ ನೀಡುವ ಸಂಸ್ಥೆಗಳು ವಿರಳ ಎನ್ನುವುದೂ ಗಮನಾರ್ಹ. ಪುತ್ತೂರಿನಲ್ಲಿ ಅಂಬಿಕಾ ಪದವಿ ಮಹಾವಿದ್ಯಾಲಯ ಇಂತಹ ಕೋಚಿಂಗ್ ತರಗತಿಗಳಿಗೆ ಹೆಸರುವಾಸಿಯಾಗಿದೆ.
ಇಂದು ಪಿಯುಸಿಯಲ್ಲಿ ಕಾಮಸ್ ಮಾತ್ರವಲ್ಲದೆ ವಿಜ್ಞಾನ ಓದಿದ ವಿದ್ಯಾರ್ಥಿಗಳೂ ಬ್ಯಾಂಕಿಂಗ್, ಸಿ.ಎ, ಅಕೌಂಟೆಂಟ್ ಮೊದಲಾದ ಹುದ್ದೆಗಳೆಡೆಗೆ ಆಸಕ್ತಿವಹಿಸಿ ಅಂಬಿಕಾ ಪದವಿ ಕಾಲೇಜಿಗೆ ಅಡಿಯಿಡುತ್ತಿದ್ದಾರೆ. ದಕ್ಷಿಣ ಕನ್ನಡದಲ್ಲಿ ಬಿ.ಕಾಂ. ಜತೆಗೆ ಇಂತಹ ಕೋಚಿಂಗ್ ಹೊಂದಿರುವುದಲ್ಲದೆ ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡುವಲ್ಲ ಸಫಲವಾಗುತ್ತಿರುವ ಅಂಬಿಕಾ ಪದವಿ ಕಾಲೇಜು ಕಾಂಪೆಟಿಟಿವ್ ಪರೀಕ್ಷೆಗಳ ತರಬೇತಿ ಕೇಂದ್ರವೆಂಬ ಅಭಿದಾನಕ್ಕೆ ಪಾತ್ರವಾಗಿದೆ. ಜತೆಗೆ ಭಾರತೀಯ ಸಂಸ್ಕೃತಿ, ದೇಶಪ್ರೇಮ, ಸಂಸ್ಕಾರಗಳನ್ನು ವಿದ್ಯಾರ್ಥಿಗಳಲ್ಲಿ ಒಡಮೂಡಿಸುವ ಸಂಸ್ಥೆಯಾಗಿಯೂ ಅಂಬಿಕಾ ಗುರುತಿಸಿಕೊಂಡಿದೆ.
ಬದುಕನ್ನು ಕಳೆಯಬಾರದು ನಿರ್ಣಯಿಸಬೇಕು:
ಪದವಿ ಶಿಕ್ಷಣ ಮೋಜಿನ ದಿನಗಳು ಎಂಬ ಕಲ್ಪನೆಯಡಿ ಸಮಯ ವ್ಯರ್ಥ ಮಾಡುವ ಅನೇಕ ವಿದ್ಯಾರ್ಥಿಗಳ ನಡುವೆ ಪದವಿಯ ಮೂರು ವರ್ಷಗಳನ್ನು ಮುಂದಿನ ಮೂವತ್ತು ವರ್ಷಗಳೆಡೆಗಿನ ಬುನಾದಿಯಂತೆ ಬಳಸುವ ವಿದ್ಯಾರ್ಥಿಗಳು ಹಲವರಿದ್ದಾರೆ. ಪದವಿಯ ದಿನಗಳಲ್ಲಿ ಬದುಕನ್ನು ಕೇವಲವಾಗಿ ಕಳೆಯದೆ ತಮ್ಮ ಬದುಕನ್ನು ನಿರ್ಧರಿಸುವ ದಿನಗಳೆಂಬಂತೆ ಪರಿಗಣಿಸುವವರೂ ಇದ್ದಾರೆ. ಅಂತಹ ವಿದ್ಯಾರ್ಥಿಗಳಿಗೆ ಈ ಮೇಲಿನ ಉದ್ಯೋಗಗಳನ್ನು ತಮ್ಮದಾಗಿಸಿಕೊಳ್ಳುವುದು ಕಷ್ಟವೆನಿಸದು.
ಕೋಚಿಂಗ್ ಎಲ್ಲಿ ಲಭ್ಯ? :
ಪುತ್ತೂರಿನ ಅಂಬಿಕಾ ಪದವಿ ಮಹಾವಿದ್ಯಾಲಯ ಸಿ.ಎ, ಐಬಿಪಿಎಸ್, ಸಿ.ಎಸ್,ಕಾಸ್ಟ್ ಅಕೌಂಟೆಂಟ್, ಪಬ್ಲಿಕ್ ಅಕೌಂಟೆಂಟ್ ಮೊದಲಾದ ವಿಷಯಗಳಿಗೆ ಸಂಬಂಧಿಸಿದಂತೆ ತರಬೇತಿ,ಮಾಹಿತಿ – ಮಾರ್ಗದರ್ಶನ ಒದಗಿಸುತ್ತಿರುವುದು ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಲ್ಲಿ ಹೊಸಕನಸನ್ನು ಹುಟ್ಟುಹಾಕುವುದಕ್ಕೆ ಕಾರಣವಾಗಿದೆ. ಆಸಕ್ತರು 9449102082 / 9448835488 ಸಂಖ್ಯೆಗೆ ಕರೆ ಮಾಡಬಹುದು.
ಅನನ್ಯಾ ವಿ.
ಮುಖ್ಯಸ್ಥರು, ವಾಣಿಜ್ಯ ವಿಭಾಗ
ಅಂಬಿಕಾ ಪದವಿ ಮಹಾವಿದ್ಯಾಲಯ, ಪುತ್ತೂರು