ದರ್ಬೆ ಅಲ್ ಇಹ್ಸಾನ್ ಟ್ರಾವೆಲ್ಸ್ ನಲ್ಲಿ ಉಮ್ರಾ ಯಾತ್ರಿಕರಿಂದ ಪಾಸ್ ಪೋರ್ಟ್ ಸ್ವೀಕಾರ – ಬಪ್ಪಳಿಗೆ ಸಿರಾಜುದ್ದೀನ್ ಫೈಝಿ ನೇತೃತ್ವದಲ್ಲಿ ಜುಲೈ ತಿಂಗಳಲ್ಲಿ ಉಮ್ರಾ ಯಾತ್ರೆ

0

ಪುತ್ತೂರು: ಹಜ್ ಉಮ್ರಾ ಸೇವೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ತೊಡಗಿಸಿಗೊಂಡಿರುವ ಬಪ್ಪಳಿಗೆ ಸಿರಾಜುದ್ದೀನ್ ಫೈಝಿ ಉಸ್ತಾದರ ನೇತೃತ್ವದಲ್ಲಿ ದರ್ಬೆ ಅಲ್ ಇಹ್ಸಾನ್ ಟ್ರಾವೆಲ್ಸ್ ನ ಉಮ್ರಾ ಯಾತ್ರೆಯ ಮುಹರ್ರಂ ತಿಂಗಳ ಬ್ಯಾಚ್ ಹೊರಡಲಿದೆ.

ಪಾಸ್ ಪೋರ್ಟ್ ಸ್ವೀಕಾರ:
ಟ್ರಾವೆಲ್ಸ್ ನ ದರ್ಬೆ ಕಛೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಬಹು ಸಯ್ಯಿದ್ ಮುಈನುದ್ದೀನ್ ಹಾದೀ ತಂಙಳ್ ಬಪ್ಪಳಿಗೆ ಯವರು ಕುಟುಂಬ ಸಮೇತ ಉಮ್ರಾ ಯಾತ್ರೆ ಗೈಯ್ಯಲಿರುವ ಸೌತ್ ಇಂಡಿಯಾ ಇಸ್ಮಾಯಿಲ್ ಹಾಜಿ ನೆಲ್ಲಿಗುಡ್ಡೆಯವರಿಂದ ಪಾಸ್ ಪೋರ್ಟ್ ಸ್ವೀಕರಿಸಿ ಚಾಲನೆ ನೀಡಿದರು.
ಅಲ್ ಇಹ್ಸಾನ್ ಮಾಲಕರಾದ ಮಸೂದ್ ಸ್ವಾಗತಿಸಿದರು.

ಯಾತ್ರಿಕರಿಂದ ಹೆಸರು ನೊಂದಣಿ:
ಜುಲೈ ತಿಂಗಳ ಯಾತ್ರಾ ತಂಡಕ್ಕೆ ಹಲವು ಯಾತ್ರಿಕರು ಈ ಸಂದರ್ಭದಲ್ಲಿ ಪಾಸ್ ಪೋರ್ಟ್ ನೀಡಿ ಹೆಸರು ನೋಂದಾಯಿಸಿದರು.

ಜುಲೈ 10 ಕ್ಕೆ ಮಂಗಳೂರಿನಿಂದ ನೇರ ವಿಮಾನಯಾನ ಹಾಗೂ ಮಹಿಳಾ ಅಮೀರ್ ಸೌಕರ್ಯ, ಬುಕ್ಕಿಂಗ್ ಮುಂದುವರಿಕೆ:
ಜುಲೈ 10ರಂದು ಮಂಗಳೂರಿನಿಂದ ನೇರ ವಿಮಾನದಲ್ಲಿ ಯಾತ್ರೆಗೈಯ್ಯಲಿದ್ದು, ಅನುಭವಿ ಅಮೀರ್ ಉಸ್ತಾದ್ ಸಿರಾಜುದ್ದೀನ್ ಫೈಝಿ ನೇತೃತ್ವ ವಹಿಸಲಿದ್ದಾರೆ. ಮಹಿಳಾ ಯಾತ್ರಿಕರಿಗೆ ಮಹಿಳಾ ಅಮೀರರ ಸೇವೆಯು ಲಭ್ಯವಿದೆ. ಜುಲೈ ತಿಂಗಳ ಬ್ಯಾಚ್ ನಲ್ಲಿ ಸೀಮಿತ ಸೀಟುಗಳು ಮಾತ್ರ ಲಭ್ಯವಿದ್ದು, ಆಸಕ್ತರು ದರ್ಬೆಯಲ್ಲಿರುವ ಅಲ್ ಇಹ್ಸಾನ್ ಕಛೇರಿ ಅಥವಾ ಅಮೀರ್ ಉಸ್ತಾದ್ ಸಿರಾಜುದ್ದೀನ್ ಫೈಝಿ ಮೊಬೈಲ್ ನಂಬರ್ 9449334396, ಟೂರ್ ಆಪರೇಟರ್ ಮಸೂದ್ ದರ್ಬೆ ಮೊಬೈಲ್ ನಂಬರ್ 9686357279, ಮಹಿಳಾ ಅಮೀರ್ ಕುಬ್ರಾ ಸಿರಾಜುದ್ದೀನ್ ಫೈಝಿ 8762210896 ನಂಬರನ್ನು ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here