





ಪುತ್ತೂರು: ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯಲ್ಲಿ 2025-26ನೇ ಶೈಕ್ಷಣಿಕ ವರ್ಷದ ನೂತನ ವಿದ್ಯಾರ್ಥಿಗಳಿಗೆ ದೀಕ್ಷಾ ಸಮಾರಂಭ ಹಾಗೂ ಶಾಲಾ ಪ್ರಾರಂಭೋತ್ಸವವು ಜೂ.2ರಂದು ನಡೆಯಿತು.


ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಜಯರಾಮ ಕೆದಿಲಾಯ ಶಿಬರ, ಸಂಚಾಲಕ ಭಾಸ್ಕರ ಆಚಾರ್ ಹಿಂದಾರು, ಕಾರ್ಯದರ್ಶಿ ಕೃಷ್ಣಪ್ರಸಾದ್ ಕೆದಿಲಾಯ, ಮುಖ್ಯೋಪಾಧ್ಯಾಯರಾದ ಪ್ರಸನ್ನ ಕೆ ಹಾಗೂ ಶಿಕ್ಷಕ ಶಿಕ್ಷಕೇತರ ವೃಂದ, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.





ಶಾಲಾ ಸಂಚಾಲಕರು ಮಾತನಾಡುತ್ತಾ, ಜಗತ್ತಿಗೆ ಒಡೆಯನಾದ ಶ್ರೀ ಕೃಷ್ಣ ಪರಮಾತ್ಮನ ಗುರು ಸಾಂದೀಪನಿ ಹೆಸರಿನಲ್ಲಿ ಶಾಲಾಧ್ಯಕ್ಷರು ಶಾಲೆಯನ್ನು ಆರಂಭಿಸಿದ್ದು, ವಿದ್ಯಾರ್ಥಿಗಳಿಗೆ ವಿದ್ಯೆ ಎಂದರೆ ಕೇವಲ ಕಲಿಯುವುದು ಮಾತ್ರವಲ್ಲ ಒಳ್ಳೆತನವನ್ನು ಅಳವಡಿಸಿಕೊಂಡು, ಸಂಸ್ಕಾರಯುತವಾಗಿ, ತಂದೆ ತಾಯಿಗೆ ಗೌರವ ಕೊಟ್ಟು, ಶಾಲೆಗೆ ಚ್ಯುತಿ ಬಾರದ ಹಾಗೆ ಬಾಳಿ ಎಂದರು ಹಾಗೂ ನೂತನ ಮುಖ್ಯೋಪಾಧ್ಯಾಯರಾದ ಪ್ರಸನ್ನ ಕೆ ಅವರಿಗೆ ಅಭಿನಂದಿಸುತ್ತಾ ಎಲ್ಲರನ್ನು ಆದರದಿಂದ ಸ್ವಾಗತಿಸಿದರು.
ಶಾಲಾ ಮುಖ್ಯೋಪಾಧ್ಯಾಯರು ಪ್ರಾಸ್ತಾವಿಕ ಮಾತುಗಳೊಂದಿಗೆ ಹೊಸದಾಗಿ ಸೇರಿದ ವಿದ್ಯಾರ್ಥಿಗಳಿಗೆ ದೀಕ್ಷೆ ನೀಡಿದರು. ನಂತರ ಆರತಿ ಬೆಳಗಿ ತಿಲಕವಿಡುವ ಮೂಲಕ ಹೊಸ ವಿದ್ಯಾರ್ಥಿಗಳನ್ನು ಸ್ವಾಗತ ಮಾಡಲಾಯಿತು.
ರಾಜ್ಯಪಾಲರಿಂದ ಗೌರವಿಸಲ್ಪಟ್ಟ ಸ್ಕೌಟ್ ಗೈಡ್ ವಿಭಾಗದ ರಾಜ್ಯಪುರಸ್ಕಾರ ಮತ್ತು golden arrow ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರವನ್ನು ಸಂಸ್ಥೆಯ ಅಧ್ಯಕ್ಷರು ವಿತರಿಸಿದರು.
ನಂತರ ಹುಟ್ಟುಹಬ್ಬ ಆಚರಿಸಿಕೊಂಡ ವಿದ್ಯಾರ್ಥಿಗಳಿಗೆ ಉಡುಗೊರೆಯನ್ನು ನೀಡಿ ಆಶೀರ್ವಾದಿಸಿ ಮಾತನಾಡಿದ ಶಾಲಾ ಅಧ್ಯಕ್ಷ ಜಯರಾಮ ಕೆದಿಲಾಯ ಶಿಬರ ಸಮಾಜದಲ್ಲಿ ಉನ್ನತ ವ್ಯಕ್ತಿಗಳಾಗಿ ಬಾಳಿ. ಪ್ರತಿ ದಿನವನ್ನು ಸುದಿನವನ್ನಾಗಿ ಮಾಡಿ ಆಯಾಯ ತರಗತಿಯಲ್ಲಿ ಒಳ್ಳೆಯ ವಿದ್ಯೆಯನ್ನು ಪಡೆದು, ಹೊಸ ಶೈಕ್ಷಣಿಕ ವರ್ಷ ಎಲ್ಲರಿಗೂ ಶುಭವನ್ನು ತರಲಿ, ಉತ್ತಮ ಅಂಕಗಳನ್ನು ಪಡೆದು ಸುಸಂಸ್ಕೃತ ಮಕ್ಕಳಾಗಿ ಬಾಳಿ ಎಂದು ಆಶೀರ್ವದಿಸಿದರು.
ಪ್ರಮೀಳಾ ರವರು ಕಾರ್ಯಕ್ರಮ ನಿರೂಪಿಸಿ, ವಿದ್ಯಾರ್ಥಿಗಳಾದ ಕು.ಆರಾಧ್ಯ ಮತ್ತು ಕು.ವಿಶಾಖಾ ಪ್ರಾರ್ಥಿಸಿ, ವಾಣಿ ಧನ್ಯವಾದಗೈದರು.





