ಕಡಬ: ಕುಂತೂರುಪದವು ಸಂತಜಾರ್ಜ್ ಪ್ರೌಢಶಾಲಾ 205-26ನೇ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವವು ಜೂ.2ರಂದು ಬೆಳಿಗ್ಗೆ ನಡೆಯಿತು.
ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ರೆ.ಫಾ. ನಿತಿನ್ ಮ್ಯಾತ್ಯು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಸಂಚಾಲಕರಾದ ಕೆ.ಎಸ್.ತೋಮಸ್ ವಿದ್ಯಾರ್ಥಿಗಳಿಗೆ ಹಿತವಚನ ನೀಡಿ ಶುಭ ಹಾರೈಸಿದರು. ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಮೋನ್ಸಿ ಪ್ರಾನ್ಸಿಸ್, ಖಜಾಂಚಿ ಶಾಜಿ ಕೆ.ಜಾನ್, ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಮುಖ್ಯಗುರು ಹರಿಶ್ಚಂದ್ರ ಕೆ. ಪ್ರಸ್ತಾವನೆಗೈದು ಶಾಲಾ ಚಟುವಟಿಕೆಗಳ ಮಾಹಿತಿ ನೀಡಿದರು. ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಿಸಲಾಯಿತು. ಶಾಲಾ ಹಿಂದಿ ಶಿಕ್ಷಕಿ ವಿಜಯ ಕುಮಾರಿ ಎಸ್.ಕೆ.ಸ್ವಾಗತಿಸಿ, ಸಮಾಜ ಶಿಕ್ಷಕಿ ಭುವನೇಶ್ವರಿ ಪಿ.ಎಮ್. ವಂದಿಸಿದರು. ಶಿಕ್ಷಕಿ ತ್ರೆಸ್ಯಮ್ಮ ಕಾರ್ಯಕ್ರಮ ನಿರೂಪಿಸಿದರು.