ಪುತ್ತೂರು: 34 ನೆಕ್ಕಿಲಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ಪ್ರಾರಂಭೋತ್ಸವ ಹಾಗು ನೂತನವಾಗಿ ರೋಟರಿ ಕ್ಲಬ್ ಉಪ್ಪಿನಂಗಡಿ 34 ನೆಕ್ಕಿಲಾಡಿ ಗ್ರಾಮ ಪಂಚಾಯತ್ ಹಿರಿಯ ವಿದ್ಯಾರ್ಥಿ ಸಂಘ ಮತ್ತು ವಿದ್ಯಾಭಿಮಾನಿಗಳು ದಾನಿಗಳು ಎಸ್.ಡಿ.ಎಂ.ಸಿ ಪೋಷಕರ ಸಹಕಾರದಿಂದ ನೂತನವಾಗಿ ಎಲ್ ಕೆ ಜಿ ಯು. ಕೆ ಜಿ ತರಗತಿಗಳನ್ನು ಉದ್ಘಾಟಿಸಲಾಯಿತು.
ರೋಟರಿ ಕ್ಲಬ್ ಉಪ್ಪಿನಂಗಡಿಯ ನಿಯೋಜಿತ ಅಧ್ಯಕ್ಷ ಜಾನ್ ಕೆನ್ಯೂಟ್ ಎಲ್ ಕೆ ಜಿ, ಯು ಕೆ ಜೆ ತರಗತಿಗಳನ್ನು ಉದ್ಘಾಟಿಸಿದರು.ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಜಾತ ಆರ್ ರೈ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು .ನೂತನವಾಗಿ ದಾಖಲಾದ ಮಕ್ಕಳಿಗೆ ಛತ್ರಿ,ಸ್ಲೇಟ್, ಲೇಖನ ಸಾಮಗ್ರಿಗಳನ್ನು ,ಇಲಾಖೆಯಿಂದ ಪಠ್ಯಪುಸ್ತಕಗಳು ಮತ್ತು ಸಮವಸ್ತ್ರಗಳನ್ನು ವಿತರಿಸಲಾಯಿತು.ಕೆಜಿ ತರಗತಿಯ ಶಿಕ್ಷಕಿ ಶಾಲಿನಿ ಇವರನ್ನು ಸ್ವಾಗತಿಸಲಾಯಿತು .ನೂತನವಾಗಿ ಆಗಮಿಸಿದ ಪುಟಾಣಿಗಳನ್ನು ಬ್ಯಾಂಡ್ ವಾದ್ಯದೊಂದಿಗೆ ತಿಲಕವಿಟ್ಟು, ಆರತಿ ತೆಗೆದು ಶಾಲೆಗೆ ಬರಮಾಡಿಕೊಳ್ಳಲಾಯಿತು.
ವೇದಿಕೆಯಲ್ಲಿ 34-ನೆಕ್ಕಿಲಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಹರೀಶ್ ಡಿ ಹಾಗೂ ಪಂಚಾಯತ್ ಅಬಿವೃದ್ಧಿ ಅಧಿಕಾರಿ ದೇವಪ್ಪ ನಾಯ್ಕ, ಪುತ್ತೂರು ಭೂ ನ್ಯಾಯ ಮಂಡಳಿಯ ಸದಸ್ಯರು ಹಾಗೂ ಕೆ ಜಿ ತರಗತಿ ಸಮಿತಿಯ ಸದಸ್ಯ ಅಬ್ದುಲ್ ರಹಮಾನ್, ಯುನಿಕ್ ಹಾಗೂ ಉಪ್ಪಿನಂಗಡಿಯ ಆರೋಗ್ಯ ಕಾರ್ಯಕರ್ತೆ ರೇಖಾ, ಎಸ್.ಡಿ.ಎಂ.ಸಿ ಅಧ್ಯಕ್ಷ ರಾಜೀವ ನಾಯ್ಕ ಪ್ರಕಾಶ ಗೌಡ ಹಾಗೂ SDMC ಸದಸ್ಯರು ಪೋಷಕರು ಶಿಕ್ಷಕ ವೃಂದ ಉಪಸ್ಥಿತರಿದ್ದರು.

ಮುಖ್ಯ ಗುರು ಕಾವೇರಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.ಕವಿತಾ ಡಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಪದ್ಮ ವಂದಿಸಿದರು.
ಶಿಕ್ಷಕ ಸಿಬ್ಬಂದಿ ವರ್ಗ ಸಹಕರಿಸಿದರು. ಶಿಕ್ಷಕರಾದ ಉಷಾಕುಮಾರಿ , ಪೂರ್ಣಿಮ , ಅಶ್ವಿನಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.