ಬೆಟ್ಟಂಪಾಡಿ: ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆ ವಿದ್ಯಾಗಿರಿ ಬೆಟ್ಟಂಪಾಡಿ ಇಲ್ಲಿ 2025 -26ನೇ ಶೈಕ್ಷಣಿಕ ವರ್ಷದ ಶಾಲಾ ಆರಂಭೋತ್ಸವ ಜೂ.2ರಂದು ನಡೆಯಿತು. ವೇದಮೂರ್ತಿ ಶ್ರೀ ರಾಧಾಕೃಷ್ಣ ಭಟ್ ಕಕ್ಕೂರು ಇವರ ನೇತೃತ್ವದಲ್ಲಿ ಗಣಪತಿ ಹವನ ಹಾಗೂ ವಿದ್ಯಾರ್ಥಿಗಳಿಂದ ಒಂದು ಗಂಟೆಗಳ ಕಾಲ ಭಜನಾ ಕಾರ್ಯಕ್ರಮ ನಡೆಯಿತು. ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳು ಹಾಗೂ ಅನೇಕ ಪೋಷಕರು ಅಗ್ನಿಹೋತ್ರಕ್ಕೆ ಸಮಿತಿ ಸಮರ್ಪಿಸಿದರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ರಂಗನಾಥ ರೈ ಗುತ್ತು ಮುಖ್ಯಗುರು ರಾಜೇಶ್ ನೆಲ್ಲಿತಡ್ಕ ಹಾಗೂ ಅಧ್ಯಾಪಕ ವೃಂದದವರು ವಿದ್ಯಾರ್ಥಿಗಳಿಗೆ ಸ್ವಾಗತ ಕೋರಿದರು.