ಓಜಾಲ ಹಿ.ಪ್ರಾ. ಶಾಲೆಯಲ್ಲಿ ವಿದ್ಯಾರ್ಥಿಗಳ ಜೊತೆಗೆ ಪೋಷಕರು ಸೇರಿ ಗಿಡಗಳನ್ನು ನೆಡುವುದರ ಮೂಲಕ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ವಾದ್ಯ ಘೋಷಗಳೊಂದಿಗೆ ಪರಿಸರದ ಬಗ್ಗೆ ಘೋಷಣೆಗಳನ್ನು ಕೂಗಿ ಬೀದಿಯಲ್ಲಿ ಜಾಥಾ ನಡೆಸಿದರು. ಬಳಿಕ ವಿದ್ಯಾರ್ಥಿಗಳಿಗೆ ಪರಿಸರದ ಬಗ್ಗೆ ಚಿತ್ರ ಸ್ಪರ್ಧೆಯನ್ನು ಏರ್ಪಡಿಸಲಾಯಿತು.

ಒಂದನೇ ತರಗತಿಯಲ್ಲಿ ಪ್ರಥಮ ಲಕ್ಷ್ಯ, ದ್ವಿತೀಯ ಹೃದನ್ ಗೌಡ ,ವೈಶಿಕ ಎರಡನೇ ತರಗತಿಯಲ್ಲಿ ಪ್ರಥಮ ಆಶ್ಲೇಶ್, ದ್ವಿತೀಯ ಉತ್ತಮ್, ಮೂರನೇ ತರಗತಿಯಲ್ಲಿ
ಪ್ರಥಮ – ದಿಶಾನಿ, ದ್ವಿತೀಯ -ಹನ್ವಿತ್, ನಾಲ್ಕನೇ ತರಗತಿಯಲ್ಲಿ ಪ್ರಥಮ -ಅಶ್ಫಿಯ, ದ್ವಿತೀಯ- ಧನ್ವಿಪಿ, ಐದನೇ ತರಗತಿಯಲ್ಲಿ ಪ್ರಥಮ -ಎಂ ಸಾಹಿಲ್ , ದ್ವಿತೀಯ -ವೃಷ ಯನ್ , ಆರನೇ ತರಗತಿಯಲ್ಲಿ ಪ್ರಥಮ -ಹಂಶಿಕಾ ಪಿ., ದ್ವಿತೀಯ- ಸುಜಿತ್, ಏಳನೇ ತರಗತಿಯಲ್ಲಿ ಪ್ರಥಮ- ಲಿಪಿಕಾ ದ್ವಿತೀಯ – ತಸ್ರೀಫ, ತೃಷ್ಯಾ ಬಹುಮಾನ ಪಡೆದರು. ಬಳಿಕ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ದಿನದ ಮಹತ್ವದ ಬಗ್ಗೆ ಮುಖ್ಯ ಶಿಕ್ಷಕ ಸಂಜೀವ ಮಿತ್ತಳಿಕೆ ತಿಳಿಸಿದರು. ಶಾಲಾ ಶಿಕ್ಷಕರಾದ ವಿಲ್ಮಾ ಸಿಕ್ವೇರಾ ,ಜೆಸಿಂತಾ ಲೋಬೊ, ನೇತ್ರಾವತಿ , ಕುಶಲಕುಮಾರಿ, ಹರ್ಷಿತ, ರೇಖಾ, ನವ್ಯಶ್ರೀ, ಚಂದ್ರಕಲಾ ಮೊದಲಾದವರು ಉಪಸ್ಥಿತರಿದ್ದರು, ಅಡುಗೆ ಸಿಬ್ಬಂದಿಯವರಾದ ವನಿತಾ, ಕುಸುಮ , ಹರಿಣಾಕ್ಷಿ ಸಹಕರಿಸಿದರು.