ಉಪ್ಪಿನಂಗಡಿ: ಇಂದ್ರಪ್ರಸ್ಥ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಜೆ.ಇ.ಇ ಅಡ್ವಾನ್ಸ್ ಹಾಗೂ COMEDK ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿದ್ದಾರೆ.
ಜೆ.ಇ.ಇ ಅಡ್ವಾನ್ಸ್ ಪರೀಕ್ಷೆಯಲ್ಲಿ ಸಂಪತ್ ಕೆ.ಎಸ್. ಅವರು 832 ಕೆಟಗರಿ ರ್ಯಾಂಕ್ ಪಡೆದಿರುತ್ತಾರೆ. ಇವರು ರಾಮಕುಂಜ ನಿವಾಸಿ ಶಿವರಾಮ ನಾಯ್ಕ ಕೆ. ಮತ್ತು ಯಶೋಧ ಎಂ. ದಂಪತಿಯ ಪುತ್ರ.
COMEDK ಪರೀಕ್ಷೆಯಲ್ಲಿ ಕವನ ರಾವ್ ಎಂಜಿನಿಯರಿಂಗ್ ವಿಭಾಗದಲ್ಲಿ 4156ನೇ ರ್ಯಾಂಕ್ ಪಡೆದಿರುತ್ತಾರೆ. ಇವರು ಉರುವಾಲು ನಿವಾಸಿ ಮನೋಹರ ರಾವ್ ಎ. ಮತ್ತು ಆಶಾಲತ ದಂಪತಿಯ ಪುತ್ರಿ.
ಈ ಫಲಿತಾಂಶವು ಅತ್ಯಂತ ಆಶಾದಾಯಕವಾಗಿದ್ದು ಸಂಸ್ಥೆಯ ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನು ಪಡೆದಿರುವುದು ಇಂದ್ರಪ್ರಸ್ಥ ಪದವಿಪೂರ್ವ ಕಾಲೇಜಿನ ಹಿರಿಮೆಯಾಗಿದೆ ಎಂದು ಸಂಸ್ಥೆಯ ಪ್ರಾಂಶುಪಾಲರಾದ ಎಚ್.ಕೆ. ಪ್ರಕಾಶ್ರವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.