ಧರೆ ಕುಸಿತ: ಕುಸಿಯುವ ಭೀತಿಯಲ್ಲಿ ಉಪ್ಪಿನಂಗಡಿ ಪಶು ಆಸ್ಪತ್ರೆ

0

ಉಪ್ಪಿನಂಗಡಿ: ಪಶು ಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಗೆ ಸೇರಿದ ಉಪ್ಪಿನಂಗಡಿಯ ಪಶು ಆಸ್ಪತ್ರೆಯ ಹಿಂಬದಿಯ ಧರೆಯು ಕುಸಿದಿದ್ದು, ಇದರಿಂದಾಗಿ ಆರ್.ಐ.ಡಿ.ಎಫ್. ಯೋಜನೆಯ ಅನುದಾನದಲ್ಲಿ ನಿರ್ಮಾಣಗೊಂಡು 2018ರ ನವೆಂಬರ್ ತಿಂಗಳಲ್ಲಿ ಉದ್ಘಾಟನೆಗೊಂಡ ಪಶು ಆಸ್ಪತ್ರೆಯ ಕಟ್ಟಡವು ಕುಸಿಯುವ ಭೀತಿಯಲ್ಲಿದೆ.


ಇಲ್ಲಿದ್ದ ಪಶು ಚಿಕಿತ್ಸಾಲಯವು ಮೇಲ್ದರ್ಜೆಗೇರಿ 2017ರ ಮೇ ತಿಂಗಳಲ್ಲಿ ಹೊಸ ಕಟ್ಟಡಕ್ಕೆ ಶಂಕು ಸ್ಥಾಪನೆ ನೆರವೇರಿಸಲಾಗಿತ್ತು. 2018ರಲ್ಲಿ ನೂತನ ಕಟ್ಟಡ ನಿರ್ಮಾಣವಾಗಿ ಉದ್ಘಾಟನೆಯೂ ಆಯಿತು. ಆದರೆ ವಾರದ ಹಿಂದೆ ಸುರಿದ ಭಾರೀ ಮಳೆಗೆ ಕಟ್ಟಡದ ಹಿಂಬದಿಯ ಧರೆ ಕುಸಿದಿದೆ. ಕಟ್ಟಡದ ಅಡಿಪಾಯದ ಸಮೀಪ ತನಕ ಧರೆ ಕುಸಿದಿದ್ದು, ಈ ಮಳೆಗಾಲದಲ್ಲಿ ಇನ್ನಷ್ಟು ಈ ಧರೆ ಕುಸಿಯುವ ಸಾಧ್ಯತೆ ಹೆಚ್ಚಾಗಿದೆ. ಧರೆ ಕುಸಿತಗೊಂಡಿದ್ದರಿಂದ ಪಶು ಆಸ್ಪತ್ರೆಯ ಕಬ್ಬಿಣದ ನೆಟ್‌ನಲ್ಲಿ ನಿರ್ಮಿಸಲಾದ ತಡೆಬೇಲಿಯೂ ಕುಸಿದು ಬಿದ್ದಿದೆ.


ತಡೆಗೋಡೆಯಷ್ಟೇ ಪರಿಹಾರ:
ಇನ್ನಷ್ಟು ಧರೆ ಕುಸಿಯುತ್ತಾ ಹೋದರೆ ಕಟ್ಟಡಕ್ಕೆ ಅಪಾಯವಾಗುವ ಸಾಧ್ಯತೆಯಿದ್ದು, ಆದ್ದರಿಂದ ಇದರ ಇನ್ನಷ್ಟು ಧರೆ ಕುಸಿಯದಂತೆ ಕಟ್ಟಡದ ಹಿಂಬದಿ ತಡೆಗೋಡೆ ನಿರ್ಮಿಸುವುದಷ್ಟೇ ಇದಕ್ಕಿರುವ ಪರಿಹಾರವಾಗಿದೆ.

LEAVE A REPLY

Please enter your comment!
Please enter your name here