





ಪುತ್ತೂರು: ಶತಮಾನೋತ್ಸವದ ಹೊಸ್ತಿಲಲ್ಲಿರುವ ಬನ್ನೂರು ಹಿ.ಪ್ರಾ ಶಾಲೆಯಲ್ಲಿ ಎಂಆರ್ಪಿಎಲ್ನ ಸಿಎಸ್ಆರ್ ಅನುದಾನದಲ್ಲಿ ನಿರ್ಮಾಣಗೊಂಡಿರುವ ತರಗತಿ ಕೊಠಡಿಗಳು ಜೂ.9ರಂದು ಉದ್ಘಾಟನೆಗೊಂಡಿತು.


ಕೊಠಡಿಗಳನ್ನು ಉದ್ಘಾಟಿಸಿದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಎಂಆರ್ಪಿಎಲ್ನಿಂದ ಪುತ್ತೂರು ವಿಧಾನ ಸಭಾ ಕ್ಷೇತ್ರಕ್ಕೆ ರೂ.5ಕೋಟಿ ಅನುದಾನ ನೀಡಿದ್ದಾರೆ. ಸಂಸ್ಥೆಯ ಲಾಭಾಂಶದಲ್ಲಿ ಕೋಟ್ಯಾಂತರ ಅನುದಾನವನ್ನು ಸಾರ್ವಜನಿಕ ಉದ್ದೇಶಗಳಿಗೆ ಬಳಕೆ ಮಾಡುತ್ತಿದ್ದಾರೆ. ತೆರಿಗೆ ಪಾತಿಸುವ ಸಂಸ್ಥೆಗಳಲ್ಲಿ ಎಂಆರ್ಪಿಎಲ್ 2ನೇ ಸ್ಥಾನದಲ್ಲಿದ್ದು ತನ್ನ ವ್ಯವಹಾರದಲ್ಲಿ ಸರಕಾರಕ್ಕೂ ತೆರಿಗೆ ಪಾವತಿಸಿ, ಸಮಾಜಕ್ಕೂ ಕೊಡುಗೆ ನೀಡುತ್ತಿದ್ದಾರೆ ಎಂದ ಶಾಸಕರು ಶಾಲಾ ಶತಮಾನೋತ್ಸವದ ಉತ್ತಮ ರೀತಿಯಲ್ಲಿ ನಡೆಯಲಿ. ಕಾರ್ಯಕ್ರಮಕ್ಕೆ ಪೂರ್ಣ ಸಹಕಾರ ನೀಡುವುದಲ್ಲದೆ ಸರಕಾರದಿಂದ ಅನುದಾನ ಒದಗಿಸುವ ಪ್ರಯುತ್ನ ಮಾಡಲಾಗವುದು ಎಂದರು.





ನಗರಸಭಾ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಸದಸ್ಯೆ ಗೌರಿ ಬನ್ನೂರು, ನಾಮ ನಿರ್ದೇಶಿತ ಸದಸ್ಯೆ ಶಾರದಾ, ಎಂಆರ್ಪಿಎಲ್ ಅಧಿಕಾರಿ ಪ್ರದೀಪ್ ಕುಮಾರ್, ಶಿಕ್ಷಣ ಇಲಾಖೆಯ ಕ್ಷೇತ್ರ ಸಮನ್ವಯಾಧಿಕಾರಿ ನವೀನ್ ಸ್ಟಿಫನ್ ವೇಗಸ್, ಗುತ್ತಿಗೆದಾರ ರಂಜಿತ್ ಬಂಗೇರ, ಎಸ್ಡಿಎಂಸಿ ಅಧ್ಯಕ್ಷ ಗುರುಪ್ರಸಾದ್, ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ ಪಾಂಡುರಂಗ ಗೌಡ, ಕುಂಟ್ಯಾನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಧರ್ಣಪ್ಪ ಮೂಲ್ಯ, ಹಿರಿಯರಾದ ಮಹಾಬಲ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ:
ಈ ಕಾರ್ಯಕ್ರಮದಲ್ಲಿ ಶಾಸಕ ಅಶೋಕ್ ಕುಮಾರ್ ರೈ, ಎಂಆರ್ಪಿಎಲ್ ಅಧಿಕಾರಿ ಪ್ರದೀಪ್ ಕುಮಾರ್, ಗುತ್ತಿಗೆದಾರ ರಂಜಿತ್ ಬಂಗೇರ, ಸಾಯಿರಾಬಾನು ಮತ್ತು ಶಾಲಾ ಜಮೀನನ್ನು ಸಮತಟ್ಟುಗೊಳಿಸಲು ಸಹಕರಿಸಿದ ಉದ್ಯಮಿ ಪ್ರಸಾದ್ ಮಯ್ಯ ಇವರನ್ನು ಸನ್ಮಾನಿಸಲಾಯಿತು.
ಹಿರಿಯರಾದ ದೇವದಾಸ್, ಗುಣಕರ ರೈ, ಚಂದ್ರಶೇಖರ ಪಾಟಾಳಿ, ಜಯಕುಮಾರ್ ಜೈನ್, ಸಂಜೀವ ಬನ್ನೂರು, ರೇವತಿ, ಮೀನಾಕ್ಷಿ, ವಿಕ್ಟರ್ ಗೋನ್ಸಾಲಿಸ್ ಹಿರಿಯ ವಿದ್ಯಾರ್ಥಿಗಳಾದ ಹೈದರ್, ನವೀನ್ ರೈ, ಪ್ರೀತಂ ರೈ, ಸುಹಾಸ್ ರೈ, ಸತೀಶ್, ಸುಂದರಿ, ರಶ್ಮಿ, ಎಸ್ಡಿಎಂಸಿ ಸದಸ್ಯರು, ಮಕ್ಕಳ ಪೋಷಕರು ಹಿರಿಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ದಿನೇಶ್ ಸಾಲಿಯಾನ್ ಸ್ವಾಗತಿಸಿದರು. ಶಾಲಾ ಮುಖ್ಯ ಗುರು ಮಹಮ್ಮದ್ ಅಶ್ರಫ್ ಕಾರ್ಯಕ್ರಮ ನಿರೂಪಿಸಿದರು.








