ಪುತ್ತೂರು: ಚೆನೈನ ಸತ್ಯಭಾಮಾ ವಿಶ್ವವಿದ್ಯಾಲಯ ಶ್ವೇತಾ ಎಂ.ರವರಿಗೆ ಗೌರವ ಡಾಕ್ಟರೇಡ್ ಪದವಿ ಪ್ರದಾನ ಮಾಡಿದೆ. ಅವರು “Sustainable Energy source for Pacemaker using TEG with MPPT (Research in LOW POWER VLSI) ಎಂಬ ವಿಷಯದಲ್ಲಿ ಮಂಡಿಸಿದ ಪ್ರಬಂಧಕ್ಕೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಪುತ್ತೂರಿನ ಪಂಚಾಯತ್ ರಾಜ್ ಇಲಾಖೆಯ ನಿವೃತ್ತ ಕಿರಿಯ ಇಂಜಿನಿಯರ್ ಗೋವರ್ಧನ ಎಂ. ಹಾಗೂ ಸಿವಿಲ್ ಇಂಜಿನಿಯರ್ ಮಾಯಾ ಪೈ ದಂಪತಿಯ ಪುತ್ರಿಯಾದ ಶ್ವೇತಾ ಅವರು ಮಾಡೆಲಿಂಗ್ ಕ್ಷೇತ್ರದಲ್ಲಿ ಹಲವು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್‌ನಲ್ಲಿ ಬಿ.ಇ ಪದವಿ ಪೊರೈಸಿರುವ ಇವರು VLSI DESIGN AND EMBEDDED SYSTEM ವಿಷಯಧಾರಿತ ಎಂ.ಟೆಕ್ ಪದವಿ ಪಡೆದಿದ್ದಾರೆ.