ಪುತ್ತೂರು: ಕರಾವಳಿಯಾದ್ಯಂತ ಬಿಡುಗಡೆಗೊಂಡು ಸಾರ್ವಜನಿಕರ ಶ್ಲಾಘನೆಗೆ ಒಳಗಾಗಿ ಉತ್ತಮ ಪ್ರದರ್ಶನ ನೀಡಿದ ಶಿವಧ್ವಜ್ ಶೆಟ್ಟಿ ನಿರ್ದೇಶನದ ಕಲಾತ್ಮಕ ‘ಕೊರಮ್ಮ’ ತುಳು ಚಲನ ಚಿತ್ರ ಉತ್ತಮ ಕಥೆ, ಉತ್ತಮ ಛಾಯಾಗ್ರಹಣ, ಉತ್ತಮ ಸಂಗೀತ, ಉತ್ತಮ ಮಹಿಳಾ ಪಾತ್ರ, ಉತ್ತಮ ಕಲಾ ನಿರ್ದೇಶನ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.
ದೇಶದ ಪ್ರತಿಷ್ಠಿತ ಮಾದ್ಯಮ ಸಂಸ್ಥೆಯಾದ ಸನ್ ಟಿವಿ ನೆಟ್ವರ್ಕ್ನ ಅಂಗಸಂಸ್ಥೆಯಾದ ರೆಡ್ ಎಫ್ ಎಂ ಮಂಗಳೂರಿನ ಟೌನ್ ಹಾಲ್ನಲ್ಲಿ ಜೂ.7ರಂದು ನಡೆಸಿದ ರೆಡ್ ಎಫ್ಎಂ ತುಳು ಫಿಲ್ಮ್ ಅವಾರ್ಡ್ 2025 ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ವಿತರಿಸಲಾಯಿತು. ಉತ್ತಮ ಕಥೆಗೆ ಶಿವದ್ವಾಜ್ ಶೆಟ್ಟಿ, ಉತ್ತಮ ಛಾಯಾಗ್ರಹಣಕ್ಕೆ ಸುರೇಶ್ ಬೈರಸಂದ್ರ, ಉತ್ತಮ ಮಹಿಳಾ ಪಾತ್ರಕ್ಕೆ ರೂಪಾ ವರ್ಕಾಡ್, ಉತ್ತಮ ಸಂಗೀತಕ್ಕೆ ಶಿನಾಯ್ ಜೊಸೆಫ್, ಉತ್ತಮ ಕಲಾ ನಿರ್ದೇಶನಕ್ಕೆ ಸಂತೋಷ್ ಪೂಜಾರಿ ವೆಣೂರು ಪ್ರಶಸ್ತಿಯನ್ನು ಸ್ವೀಕರಿಸಿದರು.
‘ಕೊರಮ್ಮ’ ಚಿತ್ರ 5 ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದೆ. ಕಳೆದ ಬಾರಿ ಕೋಸ್ಟಲ್ ಫಿಲ್ಮ್ ಅವಾರ್ಡ್ನಲ್ಲಿ 3 ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತ್ತು. ಇಂತಹ ಪ್ರಶಸ್ತಿಗಳು ಬಂದಾಗ ಇನ್ನೂ
ಉತ್ತಮವಾದ ಚಿತ್ರಗಳನ್ನು ನಿರ್ಮಿಸಿ ಜಗತ್ತಿನಾದ್ಯಂತ ನಮ್ಮ ಸಂಸ್ಕ್ರತಿ,`ಬಾಷೆ, ಜೀವನಶೈಲಿಯನ್ನು ಪಸರಿಸುವ ಕೆಲಸಕ್ಕೆ ಉತ್ಸಾಹ ಮತ್ತು ಪ್ರೋತ್ಸಾಹ ಸಿಕ್ಕಿದಂತಾಗುತ್ತದೆ. ಈ ಯಶಸ್ಸಿಗೆ ನಮ್ಮ ತಂಡದ ಶ್ರಮವೇ ಕಾರಣ ಆದರೆ ಪ್ರೇಕ್ಷಕರು ಕಲಾತ್ಮಕ ಚಿತ್ರಗಳನ್ನು ವೀಕ್ಷಿಸಿ ಚಿತ್ರರಂಗದ ಬೆಳವಣೆಗೆಗೆ ಸಹಕರಿಸಬೇಕು.
-ಶಿವದ್ವಜ್ ಶೆಟ್ಟಿ
