ಬೊಬ್ಬೆಕೇರಿ ಶಾಲಾ ಮಂತ್ರಿ ಮಂಡಲ ರಚನೆಗೆ ಇವಿಎಂ ಮಿಷಿನ್ ಮೂಲಕ ನಡೆದ ಚುನಾವಣೆ – ನಾಯಕಿಯಾಗಿ ಛಾಯಾ ಜಿ.ಎನ್, ಉಪನಾಯಕಿಯಾಗಿ ಪುಣ್ಯಶ್ರೀ ಆಯ್ಕೆ

0

ಕಾಣಿಯೂರು: ಸ.ಹಿ.ಪ್ರಾ.ಶಾಲೆ ಬೊಬ್ಬೆಕೇರಿ ಇಲ್ಲಿಯ ಶಾಲಾ ನಾಯಕಿಯಾಗಿ ಛಾಯಾ ಜಿ. ಎನ್ ಮತ್ತು ಉಪನಾಯಕಿಯಾಗಿ ಪುಣ್ಯಶ್ರೀ ಆಯ್ಕೆಯಾಗಿದ್ದಾರೆ.
ಜೂ11 ರಂದು ಶಾಲಾ ಸಂಸತ್ತು ರಚಿಸುವ ಸಲುವಾಗಿ ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಚುನಾವಣೆ ನಡೆಸಲಾಯಿತು. ಇವಿಎಂ ಮಿಷಿನ್ ಆಪ್ ಮೂಲಕ ವಿದ್ಯಾರ್ಥಿಗಳಿಗೆ ಮತದಾನ ಚಲಾಯಿಸುವ ಅರಿವು ಮೂಡಿಸಲಾಯಿತು. ಶಾಲಾ ಮುಖ್ಯಗುರು ಶಶಿಕಲಾರವರು ಚುನಾವಣಾಧಿಕಾರಿಯಾಗಿದ್ದರು. ಶಿಕ್ಷಕರಾದ ಜನಾರ್ದನ ಹೇಮಳ, ಗೀತಾ ಕುಮಾರಿ, ಶೋಭಿತಾ, ಸುರೇಖಾ, ಶೃತಿ, ದಿವ್ಯಾ, ಜಯಲತಾ, ಸುಶ್ಮಿತಾ ಸಹಕರಿಸಿದರು.

LEAVE A REPLY

Please enter your comment!
Please enter your name here