ಪುತ್ತೂರು: ಅಂತರ್ರಾಷ್ಟ್ರೀಯ ಲಯನ್ಸ್ ಸಂಸ್ಥೆ ಇದರ ಜಿಲ್ಲೆ 317ಡಿ, ರೀಜನ್ 6, ವಲಯ ಒಂದರ ಲಯನ್ಸ್ ಕ್ಲಬ್ ಮಾಣಿ ಪ್ರಾಯೋಜಕತ್ವದ ಲಯನ್ಸ್ ಕ್ಲಬ್ ಪುತ್ತೂರು ಕ್ರೌನ್ ಕಳೆದ ವರ್ಷ ಆಸ್ತಿತ್ವಕ್ಕೆ ಬಂದಿದ್ದು ಇದೀಗ ಇದರ 2025-06ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಜರಗಿದೆ.

ನೂತನ ಅಧ್ಯಕ್ಷರಾಗಿ ಅಂತೋನಿ ಒಲಿವೆರಾ, ಕಾರ್ಯದರ್ಶಿಯಾಗಿ ಲೀನಾ ಮಚಾದೊ, ಕೋಶಾಧಿಕಾರಿಯಾಗಿ ವಿಕ್ಟರ್ ಶರೋನ್ ಡಿ’ಸೋಜ, ಪ್ರಥಮ ಉಪಾಧ್ಯಕ್ಷರಾಗಿ ಲ್ಯಾನ್ಸಿ ಮಸ್ಕರೇನ್ಹಸ್ ಸೇಡಿಯಾಪು, ದ್ವಿತೀಯ ಉಪಾಧ್ಯಕ್ಷರಾಗಿ ನಿಶಾ ಮಿನೇಜಸ್, ನಿಕಟಪೂರ್ವ ಅಧ್ಯಕ್ಷೆಯಾಗಿ ವಿಲ್ಮಾ ಗೊನ್ಸಾಲ್ವಿಸ್, ಜೊತೆ ಕಾರ್ಯದರ್ಶಿಯಾಗಿ ಮೋಲಿ ಪಿಂಟೊ, ಜೊತೆ ಕೋಶಾಧಿಕಾರಿಯಾಗಿ ಅನಿತಾ ಜ್ಯೋತಿ ಡಿ’ಸೋಜ, ಮೆಂಬರ್ಶಿಪ್ ಚೇರ್ಮ್ಯಾನ್ ಆಗಿ ಐವಾನ್ ಫೆರ್ನಾಂಡೀಸ್, ಸರ್ವಿಸ್ ಚೇರ್ಮ್ಯಾನ್ ಆಗಿ ಲೀನಾ ರೇಗೊ, ಮಾರ್ಕೆಟಿಂಗ್ ಚೇರ್ಮ್ಯಾನ್ ಬೆಂಜಮಿನ್ ಡಿ’ಸೋಜ, ಟೇಯ್ಲ್ ಟ್ವಿಸ್ಟರ್ ಆಗಿ ಲಿಲ್ಲಿ ಎವ್ಲಿನ್ ಡಿ’ಸೋಜ, ಫಂಡ್ ರೈಸ್ ಚೇರ್ಪರ್ಸನ್ ಆಗಿ ಪ್ರಿಯಲತಾ ಡಿ’ಸಿಲ್ವ, ಮಾಹಿತಿ ತಂತ್ರಜ್ಞಾನ ಐರಿನ್ ಡಿಸೋಜರವರು ಆಯ್ಕೆಯಾಗಿದ್ದಾರೆ.
ನೂತನ ಅಧ್ಯಕ್ಷರ ಪರಿಚಯ:
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಅಂತೋನಿ ಒಲಿವೆರಾರವರು ಪ್ರಸ್ತುತ ಡೊನ್ ಬೊಸ್ಕೊ ಕ್ಲಬ್ನ ಅಧ್ಯಕ್ಷರಾಗಿ, ಸೈಂಟ್ ಕ್ರಿಸ್ಟೋಫರ್ ಅಸೋಸಿಯೇಶನ್ನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಂತ ವಿಕ್ಟರ್ಸ್ ಆಂಗ್ಲ ಮಾಧ್ಯಮ ಶಾಲೆಯ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಇಲ್ಲಿನ ಎಪಿಎಂಸಿ ರಸ್ತೆಯ ಜೆಎಂಜೆ ಕಾಂಪ್ಲೆಕ್ಸ್ನ ಮಾಲಕರಾಗಿರುತ್ತಾರೆ.
ನೂತನ ಕಾರ್ಯದರ್ಶಿ ಪರಿಚಯ:
ಎರಡನೇ ಬಾರಿಗೆ ಕಾರ್ಯದರ್ಶಿಯಾಗಿ ಆಯ್ಕೆಯಾದ ಲೀನಾ ಮಚಾದೋರವರು ಬನ್ನೂರು ಚರ್ಚ್ನ ಕಥೋಲಿಕ್ ಸಭಾದ ಪ್ರಸ್ತುತ ಅಧ್ಯಕ್ಷರಾಗಿ, ಸ್ತ್ರೀ ಸಂಘಟನೆಯ ಸದಸ್ಯರಾಗಿ ಕರ್ತವ್ಯ ನಿರ್ವಹಿಸಿರುತ್ತಾರೆ. ಅಲ್ಲದೆ ಹಲವಾರು ವರ್ಷ ದುಬೈ ಹಾಗೂ ಮಂಗಳೂರಿನಲ್ಲಿ ನೆಲೆಸಿ ಪ್ರಸ್ತುತ ಪತಿ ಆಲ್ವಿನ್ ಮಚಾದೋ, ಪುತ್ರ ಸಿಎ ವ್ಯಾಸಂಗ ಮಾಡುತ್ತಿರುವ ಆಶ್ಲಿರವರೊಂದಿಗೆ ಕೃಷ್ಣನಗರದಲ್ಲಿ ನೆಲೆಸಿರುತ್ತಾರೆ.
ನೂತನ ಕೋಶಾಧಿಕಾರಿ ಪರಿಚಯ:
ನೂತನ ಕೋಶಾಧಿಕಾರಿಯಾಗಿ ಆಯ್ಕೆಯಾದ ವಿಕ್ಟರ್ ಶರೋನ್ ಡಿ’ಸೋಜರವರು ಪ್ರಸ್ತುತ ಕ್ರಿಸ್ಟೋಫರ್ ಅಸೋಸಿಯೇಶನ್ ಅಧ್ಯಕ್ಷರಾಗಿ, ಡೊನ್ ಬೊಸ್ಕೊ ಕ್ಲಬ್ ಕೋಶಾಧಿಕಾರಿಯಾಗಿ, ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯ ಪುತ್ತೂರು, ಮಂಗಳೂರು ಹಾಗೂ ಚಿಕ್ಕಮಗಳೂರು ವಿಭಾಗದ ಡಿವಿಷನ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಎಪಿಎಂಸಿ ರಸ್ತೆಯ ಜೆಎಂಜೆ ಕಾಂಪ್ಲೆಕ್ಸ್ನಲ್ಲಿ ಸ್ವಂತ ಉದ್ಯಮ ಕ್ಷೇತ್ರವಾದ ಅಭ್ಯುದಯ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ಅನ್ನು ಸ್ಥಾಪಿಸಿ ಅದರ ವ್ಯವಸ್ಥಾಪಕ ನಿರ್ದೇಶಕರಾಗಿ ಮುನ್ನೆಡೆಸುತ್ತಿದ್ದಾರೆ.
ಜೂ.14:ಪದ ಪ್ರದಾನ..
ನೂತನ ಕ್ಲಬ್ನ ಪದ ಪ್ರದಾನ ಸಮಾರಂಭವು ಜೂ.14ರಂದು ಸಂಜೆ ಎಪಿಎಂಸಿ ರಸ್ತೆ ಕ್ರಿಸ್ಟೋಫರ್ ಬ್ಯಾಂಕ್ವೆಟ್ ಸಭಾಂಗಣದಲ್ಲಿ ನೆರವೇರಲಿದ್ದು, 2023-24ರ ಜಿಲ್ಲಾ ಗವರ್ನರ್ ಡಾ.ಮೆಲ್ವಿನ್ ಡಿ’ಸೋಜರವರು ನೂತನ ಪದಾಧಿಕಾರಿಗಳಿಗೆ ಪದಪ್ರದಾನವನ್ನು ನೆರವೇರಿಸಲಿದ್ದಾರೆ ಎಂದು ಲಯನ್ಸ್ ಕ್ಲಬ್ ಪುತ್ತೂರು ಕ್ರೌನ್ನ ನಿಕಟಪೂರ್ವ ಅಧ್ಯಕ್ಷೆ ವಿಲ್ಮಾ ಗೊನ್ಸಾಲ್ವಿಸ್, ಕಾರ್ಯದರ್ಶಿ ಲೀನಾ ಮಚಾದೋ, ಕೋಶಾಧಿಕಾರಿ ವಿಕ್ಟರ್ ಶರೂನ್ ಡಿ’ಸೋಜರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.