ಉದನೆ ಬಿಷಪ್ ಪೋಳಿಕಾರ್ಪೋಸ್ ಪಬ್ಲಿಕ್ ಸ್ಕೂಲ್ ಸಂಸತ್ತು ರಚನೆ

0

ನೆಲ್ಯಾಡಿ; ಉದನೆ ಬಿಷಪ್ ಪೋಳಿಕಾರ್ಪೋಸ್ ಪಬ್ಲಿಕ್ ಸ್ಕೂಲ್ ಇದರ ಶಾಲಾ ಸಂಸತ್ತು ಚುನಾವಣೆ ಇತ್ತೀಚೆಗೆ ನಡೆಯಿತು.


ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವ ಮತ್ತು ಮತದಾನದ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಸಂಸದೀಯ ಮಾದರಿಯಲ್ಲಿ ಚುನಾವಣಾ ಪ್ರಕ್ರಿಯೆ ನಡೆಸಲಾಯಿತು. ಮತದಾನ ಯಂತ್ರ (ಇಗಿಒ)ಹಾಗೂ ಪ್ರಾಜೆಕ್ಟರ್ ಬಳಸಿ ಮತದಾನ ಪ್ರಕ್ರಿಯೆ ನಡೆಸಿರುವುದು ಈ ಬಾರಿಯ ವಿಶೇಷತೆಯಾಗಿತ್ತು.ಬೆಥನಿ ಕೈಗಾರಿಕಾ ತರಬೇತಿ ಸಂಸ್ಥೆ ನೆಲ್ಯಾಡಿ ಇದರ ಕಂಪ್ಯೂಟರ್ ವಿಭಾಗದ ಕಿರಿಯ ತರಬೇತಿ ಅಧಿಕಾರಿ ಸುನಿಲ್ ಜೋಸೆಫ್‌ರವರು ಮತದಾನ ಯಂತ್ರದ ವಿನ್ಯಾಸಗೊಳಿಸಿ ವಿದ್ಯಾರ್ಥಿಗಳಿಗೆ ಮತದಾನ ಯಂತ್ರದ ಸಂಪೂರ್ಣ ಮಾಹಿತಿ ನೀಡಿದರು. ಬೆಥನಿ ತರಬೇತಿ ಸಂಸ್ಥೆಯ ಪ್ರಶಿಕ್ಷಣಾರ್ಥಿಗಳು ಈ ಸಂದರ್ಭದಲ್ಲಿ ಸಹಕರಿಸಿದರು. ಎಲ್ಲಾ ಅಭ್ಯರ್ಥಿಗಳು ಹಾಗೂ ವಿದ್ಯಾರ್ಥಿಗಳ ಸಮ್ಮುಖದಲ್ಲೇ ಮತ ಎಣಿಕೆ ಪ್ರಕ್ರಿಯೆ ನಡೆಸಲಾಯಿತು. ಸಂಸ್ಥೆಯ ಸಂಚಾಲಕರಾದ ರೆ.ಫಾ ಹನಿ ಜೇಕಬ್ ಮತ ಎಣಿಕೆ ಪ್ರಕ್ರಿಯೆಗೆ ಚಾಲನೆ ನೀಡಿದರು.


ಶಾಲಾ ನಾಯಕನಾಗಿ ಭವಿಕ್ ಕುಮಾರ್, ಉಪನಾಯಕನಾಗಿ ವರುಣ್ ಎಂ.ಡಿ, ಸಾಂಸ್ಕೃತಿಕ ಮಂತ್ರಿಯಾಗಿ ಮೆರ್ಲಿನ್ ಮನೋಜ್, ಉಪ ಮಂತ್ರಿಯಾಗಿ ಡೋನಾ ಕೆ.ಸಿ, ಕ್ರೀಡಾಮಂತ್ರಿಯಾಗಿ ಸೋನಾ ಅನುರಾಜ್, ಉಪಮಂತ್ರಿಯಾಗಿ ಆದರ್ಶ್ ಜೋಷಿ, ಆರೋಗ್ಯ ಮಂತ್ರಿಯಾಗಿ ಅನ್ನಾ ಮರಿಯಾ, ಉಪಮಂತ್ರಿಯಾಗಿ ಆಶಿನ್ ಡಿ.ಅನಿಲ್, ಗ್ರಂಥಾಲಯ ಮಂತ್ರಿಯಾಗಿ ತನ್ವಿತ್, ಉಪಮಂತ್ರಿಯಾಗಿ ನಿಖಿಲ್, ವಿದ್ಯಾಮಂತ್ರಿಯಾಗಿ ಬ್ಲೆಸನ್ ಪ್ರಕಾಶ್, ಉಪಮಂತ್ರಿಯಾಗಿ ಧನುಷ್ ಆಯ್ಕೆಗೊಂಡರು.


ಶಾಲಾ ಮುಖ್ಯಗುರು ಸಿಬಿಚ್ಚನ್ ಟಿಸಿ ವಿಜೇತ ಅಭ್ಯರ್ಥಿಗಳನ್ನು ಅಭಿನಂದಿಸಿದರು. ದೈಹಿಕ ಶಿಕ್ಷಕರಾದ ಜಿಮ್ಸನ್ ವರ್ಗೀಸ್ ಚುನಾವಣಾ ಪ್ರಕ್ರಿಯೆ ಮೇಲುಸ್ತುವಾರಿ ವಹಿಸಿದ್ದರು. ಶಿಕ್ಷಕ ಶಿಕ್ಷಕೇತರ ವೃಂದದವರು ಸಹಕರಿಸಿದರು.

LEAVE A REPLY

Please enter your comment!
Please enter your name here