ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಸಂಕ್ರಮಣ ತಂಬಿಲ ಸೇವೆ

0

ಪುತ್ತೂರು: ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಜೂ.15ರಂದು ಸಂಕ್ರಮಣ ತಂಬಿಲ ಸೇವೆ ನಡೆಯಿತು.

ಸಂಕ್ರಮಣ ತಂಬಿಲ ಸೇವೆಯ ಪ್ರಯುಕ್ತ ಬೆಳಿಗ್ಗೆ ದೇವರ ಪೂಜೆಯ ಬಳಿಕ ದೇವಸ್ಥಾನದ ರಕ್ತೇಶ್ವರಿ ಧೂಮಾವತಿ ದೈವಗಳಿಗೆ ಹಾಗೂ  ಮಾಡಂತಾರು ಮೈಲ್(ಗೋಲೆಕ್ಸ್ ಫ್ಯಾಕ್ಟರಿ ಬಳಿ) ನಲ್ಲಿನ ಕಲ್ಕುಡ ಕಲ್ಲುರ್ಟಿ ಗುಳಿಗ ದೈವಗಳಿಗೆ ತಂಬಿಲ ಸೇವೆ ನಡೆಯಿತು. ದೇವಸ್ಥಾನದ ಅರ್ಚಕರಾದ ವಿಷ್ಣು ಕುಂಜತ್ತಾಯ, ರಮೇಶ್ ಭಟ್  ರವರು ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪೂಜಾರಿ ಬೆದ್ರಾಳ ಸಹಿತ ಸಮಿತಿ ಸದಸ್ಯರು ಹಾಗೂ ಸಿಬ್ಬಂದಿ ಭರತ್, ರಘುನಾಥ್ ಪೂಜಾರಿ ಸಹಿತ ಭಕ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here