ಪುತ್ತೂರು: ಪುತ್ತೂರಿನ ಹೃದಯ ಭಾಗದ ಧರ್ಮಸ್ಥಳ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್ನಲ್ಲಿ ಶೈಕ್ಷಣಿಕ ವರ್ಷ 2025-26ರ Senior Secondary 12ನೇ ತರಗತಿಯ (N.I.O.S) ವಿಜ್ಞಾನ ವಿಭಾಗದಲ್ಲಿ ಶೇ.98 ಫಲಿತಾಂಶ ದಾಖಲಾಗಿರುತ್ತದೆ.
ಮೊಹಮ್ಮದ್ ಫವಾಜ್(444), ಸುರಕ್ಷಾ (404), ಮಯೂರ್(404), ಶಾಲಿನಿ ಇ.(398), ಪ್ರೀತಿ ಎಂ. ಹೆಚ್. (391), ಆಯುಷ್ ರೈ (389), ಪ್ರದ್ಯಮ್ನ ಪ್ರಭು (388), ಸುರಕ್ಷಾ ಆರ್. (386), ರವಿ ಗಣೇಶ್ (385), ಹಿತೇಶ್ ಕೆ. ಎಸ್. (374)ಳೊಂದಿಗೆ ಒಟ್ಟು 10 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ ಸೃಜನ್ ಎಸ್.ಎಸ್. (357), ಕಾರ್ತಿಕಾ ಎ.ಸಿ.(348) ಅಂಕಗಳೊಂದಿಗೆ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ ಹಾಗೂ ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ ಪ್ರತೀಕ್ಷಾ (399) ಎಂಬ ವಿದ್ಯಾರ್ಥಿಯು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣಗೊಂಡು ಶೇ.100 ಫಲಿತಾಂಶ ದಾಖಲಾಗಿರುತ್ತದೆ.
ಪ್ರಥಮ ಪಿ.ಯು.ಸಿ. ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ಅನುತ್ತೀರ್ಣಗೊಂಡು Senior Secondary 12ನೇ ತರಗತಿಯ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಪ್ರಾಧಿಕಾರದ ಯೋಜನೆಯಾದ N.I.O.S ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ಖಾಸಗಿಯಾಗಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಸಾಧನೆಯಾಗಿದೆ. ಈ ವಿದ್ಯಾರ್ಥಿಗಳ ಮುಂದಿನ ಭವಿಷ್ಯವು ಉಜ್ವಲವಾಗಲಿ ಎಂದು ಸಂಸ್ಥೆಯ ಪ್ರಾಂಶುಪಾಲರಾದ ಕೆ. ಹೇಮಲತಾ ಗೋಕುಲ್ನಾಥ್ರವರು ಶುಭ ಹಾರೈಸಿದರು
“2024-25ನೇ ಸಾಲಿನ ಪ್ರಥಮ ಪಿ.ಯು.ಸಿ ವಿಜ್ಞಾನ ವಿಭಾಗದ ಪರೀಕ್ಷೆಯಲ್ಲಿ ಕೆಲವು ವಿಷಯಗಳಲ್ಲಿ ಅನುತ್ತೀರ್ಣಗೊಂಡು ನಮ್ಮ ಬಳಿ ನೇರವಾಗಿ 12 ನೇ ತರಗತಿ N.I.O.Sಗೆ ದಾಖಲಾತಿಗೊಂಡ ವಿದ್ಯಾರ್ಥಿಗಳು ನೀಡಿದ ದಾಖಲೆ ಫಲಿತಾಂಶವಿದು”
ಗೋಕುಲ್ನಾಥ್ ಪಿ.ವಿ, ಸಂಚಾಲಕರು.