ಪುತ್ತೂರು: ಎಜುಕೇಶನಲ್ ಎಕ್ಸಲೆನ್ಸ್ ಫೌಂಡೇಶನ್ ವತಿಯಿಂದ ನೀಡುವ ಸ್ಕಾಲರ್ಶಿಪ್ ಯೋಜನೆಗೆ 2025-26ರ ಸಾಲಿನಲ್ಲಿ 165 ವಿದ್ಯಾರ್ಥಿಗಳು ಆ್ಯಪ್ ಮೂಲಕ ನೋಂದಣಿ ಮಾಡಿಕೊಂಡಿದ್ದಾರೆ. ಪುತ್ತೂರು ಲಯನ್ಸ್ ಸೇವಾಭವನದಲ್ಲಿ ನಡೆದ ಪ್ರಥಮ ಸುತ್ತಿನ ಕೌನ್ಸೆಲಿಂಗ್ ನಲ್ಲಿ 54 ವಿದ್ಯಾರ್ಥಿಗಳು ಭಾಗವಹಿಸಿದ್ದು, ಮಂಗಳೂರಿನ ಏಸ್ ಐಎಎಸ್ ಅಕಾಡಮಿಯಲ್ಲಿ ನಡೆದ 2ನೇ ಸುತ್ತಿನ ಕೌನ್ಸೆಲಿಂಗ್ ನಲ್ಲಿ 11 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಬಕ ಸಮೀಪದ ಪೋಳ್ಯ ಮದರಸ ಸಭಾಂಗಣದಲ್ಲಿ ನಡೆದ 3ನೇ ಸುತ್ತಿನ ಕೌನ್ಸೆಲಿಂಗ್ ನಲ್ಲಿ 44 ವಿದ್ಯಾರ್ಥಿಗಳು ಭಾಗವಹಿಸಿದ್ದರು.

2024-25ರ ಸಾಲಿನಲ್ಲಿ ಆ್ಯಪ್ ಮೂಲಕ ನೋಂದಣಿ ಮಾಡಿಕೊಂಡ 26 ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್ ನಡೆಸಿ ವಿದ್ಯಾರ್ಥಿ ವೇತನವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಇದರೊಂದಿಗೆ ಪ್ರಸಕ್ತ ಸಾಲಿನಲ್ಲಿ ನೋಂದಣಿ ಮಾಡಿದ 68 ವಿದ್ಯಾರ್ಥಿಗಳಿಗೆ ಈಗಾಗಲೇ ಸ್ಕಾಲರ್ಶಿಪ್ ವಿತರಿಸಲಾಗಿದ್ದು, ಉಳಿದ 67 ವಿದ್ಯಾರ್ಥಿಗಳಿಗೆ ಜೂನ್ 30ರ ಒಳಗಾಗಿ ಸ್ಕಾಲರ್ಶಿಪ್ ವಿತರಿಸಲಾಗುವುದು. 30 ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್ ಬಾಕಿಯಿದ್ದು, ಈ ವಿದ್ಯಾರ್ಥಿಗಳು ಕೂಡಲೇ ಸಂಬಂಧಪಟ್ಟ ಕೌನ್ಸಿಲರ್ಗಳನ್ನು ಫೋನ್ ಅಥವಾ ಈ-ಮೇಲ್ ಮೂಲಕ ಸಂಪರ್ಕಿಸಬಹುದು ಎಂದು ಫೌಂಡೇಶನ್ ಅಧ್ಯಕ್ಷ ಅಮ್ಜದ್ ಖಾನ್ ಪೋಳ್ಯ ತಿಳಿಸಿದ್ದಾರೆ.
2025-26ನೇ ಸಾಲಿನ ಸ್ಕಾಲರ್ ಶಿಪ್ ಯೋಜನೆ ಕೊನೆಗೊಂಡಿದ್ದು, ನೀಟ್ ಲಾಂಗ್ಟರ್ಮ್ ವಿದ್ಯಾರ್ಥಿಗಳ ಸ್ಕಾಲರ್ಶಿಪ್ ಯೋಜನೆ ಮುಂದುವರಿಸಲಾಗಿದೆ. ಇದಕ್ಕಾಗಿ ಜೂನ್ 1ರಂದು ಕಲ್ಲೇಗ ಮಸೀದಿ ಸಭಾಂಗಣದಲ್ಲಿ ಸಂಬಂಧಪಟ್ಟ ವಿದ್ಯಾರ್ಥಿಗಳ ಪೂರ್ಣ ಸಾಮರ್ಥ್ಯ ಪರೀಕ್ಷೆ ನಡೆಸಿದ್ದು, ಅದರಲ್ಲಿ 23 ವಿದ್ಯಾರ್ಥಿಗಳು ಭಾಗವಹಿಸಿದ್ದರು. ನೀಟ್ ಬಗ್ಗೆ ಸಂಪೂರ್ಣ ಮಾಹಿತಿ/ವರದಿ ಪಡೆದ ಬಳಿಕ ಬಳಿಕ ಅರ್ಹ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.